ಸವಣೂರು :ಆಲಂಕಾರು ಶಕ್ತಿ ಕೇಂದ್ರದ ಸವಣೂರು ಮೊಗರು ಬಿಜೆಪಿ ಬೂತ್ 66ರ ಸಮಿತಿ ರಚನೆ ಹಾಗೂ ಕಾರ್ಯಕರ್ತರ ಸಭೆಯು ಗಂಗಾಧರ ಪೆರಿಯಡ್ಕ ಅವರ ಮನೆಯಲ್ಲಿ ಭಾನುವಾರ ನಡೆಯಿತು.
ಬಿಜೆಪಿ ಸುಳ್ಯ ಮಂಡಲ ಸಮಿತಿ ಸದಸ್ಯ ಗಣೇಶ್ ಉದನಡ್ಕ ಅವರು ಬೂತ್ ಸಮಿತಿ ಪುನಾರಚನೆ ಹಾಗೂ ಸದಸ್ಯತ್ವ ಅಭಿಯಾನದ ಕುರಿತು ಮಾಹಿತಿ ನೀಡಿದರು.
ಬೂತ್ ಸಮಿತಿಯ ಅಧ್ಯಕ್ಷ, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ತಾರನಾಥ ಕಾಯರ್ಗ ಅವರು,ಪಕ್ಷದ ಕಾರ್ಯಚಟುವಟಿಕೆ ಹಾಗೂ ಬೂತ್ ಸಮಿತಿ ಕಾರ್ಯಕರ್ತರ ಜವಾಬ್ದಾರಿಗಳ ಕುರಿತು ತಿಳಿಸಿದರು.ಕಾರ್ಯದರ್ಶಿ ಜಗದೀಶ್ ಇಡ್ಯಾಡಿ ಉಪಸ್ಥಿತರಿದ್ದರು.
ನೂತನ ಸಮಿತಿ ರಚನೆ:
ಸಭೆಯಲ್ಲಿ ಬೂತ್ 66ರ ನೂತನ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಜಗದೀಶ್ ಇಡ್ಯಾಡಿ, ಪ್ರಧಾನ ಕಾರ್ಯದರ್ಶಿಯಾಗಿ ದಯಾನಂದ ಮೆದು, ಕಾರ್ಯದರ್ಶಿಯಾಗಿ ಶ್ರೀಧರ ಇಡ್ಯಾಡಿ, ಸದಸ್ಯರಾಗಿ ಚಂದ್ರಶೇಖರ ಮೆದು, ಗಣಪಯ್ಯ ಭಟ್ ಕುಕ್ಕುಜೆ, ಪ್ರವೀಣ್ ಪೆರಿಯಡ್ಕ, ಶಶಿಧರ ಇಡ್ಯಾಡಿ, ರಾಜೇಶ್ ಇಡ್ಯಾಡಿ, ಗಂಗಾಧರ ಪೆರಿಯಡ್ಕ, ಮನೋರಮ ಪೆರಿಯಡ್ಕ, ಶಶಿಕಲಾ ಇಡ್ಯಾಡಿ, ಪುಷ್ಪಾವತಿ ಕೇಕುಡೆ, ರೇಖಾ ವಿಠಲ ಪೂಜಾರಿ ಆಯ್ಕೆಯಾದರು.
ಸಭೆಯಲ್ಲಿ ಕಮಲಾಕ್ಷ ಪೆರಿಯಡ್ಕ, ದಯಾನಂದ ಪೆರಿಯಡ್ಕ, ಹಿತೇಶ್ ಮೆದು, ಮಹಾಬಲ ಪೆರಿಯಡ್ಕ, ಹರೀಶ್ ಕುಕ್ಕುಜೆ, ಮನೋಜ್ ಕುಕ್ಕುಜೆ, ವೀರಪ್ಪ ಗೌಡ ಪೆರಿಯಡ್ಕ, ಉದಯಚಂದ್ರ ಪೆರಿಯಡ್ಕ, ಕರುಣಾಕರ ಪೆರಿಯಡ್ಕ, ಜಗದೀಶ್ ಗೌಡ ಇಡ್ಯಾಡಿ ,ವೆಂಕಪ್ಪ ನಾಯ್ಕ ಹಾಗೂ ಮೊದಲಾದ ಕಾರ್ಯಕರ್ತರು ಉಪಸ್ಥಿತರಿದ್ದರು.
ಗಂಗಾಧರ ಪೆರಿಯಡ್ಕ ಅವರು ಸ್ವಾಗತಿಸಿ,ವಂದಿಸಿದರು.
12.07.2025 ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ…
ಜ್ಯೋತಿಷ್ಯ ಶಾಸ್ತ್ರದಲ್ಲಿ ಕೇತು ಒಂದು ನಿಗೂಢ ಗ್ರಹವಾಗಿದ್ದು, ಆಧ್ಯಾತ್ಮಿಕತೆ, ಕರ್ಮ, ಮತ್ತು ಜೀವನದಲ್ಲಿ…
ಕೋಲಾರ ಜಿಲ್ಲೆಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ ಗ್ರಾಮ ಪಂಚಾಯತಿ ಸೇರಿದಂತೆ ಯಾವುದೇ…
ಹಾವೇರಿ ಜಿಲ್ಲೆಯಲ್ಲಿ ಹರಿಯುವ ವರದಾ ಹಾಗೂ ತುಂಗಭದ್ರಾ ನದಿಗಳಲ್ಲಿ ನೀರಿನ ಮಟ್ಟ ಕ್ರಮೇಣ…
ಅಸಂಘಟಿತ ಕಾರ್ಮಿಕರ ಹಿತರಕ್ಷಣೆಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದ್ದು, 23 ಅಸಂಘಟಿತ ವರ್ಗಗಳ…
ಹಾವೇರಿ ಜಿಲ್ಲೆಯಲ್ಲಿ ಪೂರ್ವ ಮುಂಗಾರು ಹಾಗೂ ಮುಂಗಾರು ಮಳೆಯಿಂದಾಗಿ 148.57 ಹೆಕ್ಟೇರ್ ಪ್ರದೇಶದಲ್ಲಿದ್ದ…