ಸಹಕಾರ ಸಂಘಗಳಲ್ಲಿ ಸದಸ್ಯರ ಸಕ್ರಿಯತೆ…. ಭಾಗ-1

November 15, 2019
11:02 AM

ಸಹಕಾರಿ ಸಪ್ತಾಹ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ  ಸಹಕಾರ ಸಂಘಗಳ ಬಗ್ಗೆ ಮಾಹಿತಿ ನೀಡುವ ಹಾಗೂ ಸದಸ್ಯರ, ಆಡಳಿತ ಮಂಡಳಿಯ ಜವಾಬ್ದಾರಿ ಬಗ್ಗೆ ಅರಿವು ಮೂಡಿಸುವ ಕೆಲಸ ಸುಳ್ಯನ್ಯೂಸ್.ಕಾಂ ಮೂಲಕ ಹಿರಿಯ ಸಹಕಾರಿ ರಾಧಾಕೃಷ್ಣ ಕೋಟೆ ನೀಡುತ್ತಾರೆ. ವಾರ ಪೂರ್ತಿ ಒಂದು ವಿಷಯದ ಬಗ್ಗೆ ಮಾಹಿತಿ ನೀಡಲಾಗುತ್ತದೆ.

Advertisement
Advertisement

ಸಹಕಾರ ಭಾರತದಲ್ಲಿ ವೇದ ಕಾಲದಿಂದಲೂ ಜೀವನದ ಅವಿಭಾಜ್ಯ ಅಂಗ. ಋಗ್ವೇದದಲ್ಲಿ “ಸಂಗಚ್ಛಧ್ವಂ ಸಂ ವದಧ್ವಂ ಸಂ ವೋ ಮನಾಂಸಿ ಜಾನತಾಮ್” – ನಾವೆಲ್ಲರೂ ಒಟ್ಟಿಗೆ ಹೆಜ್ಜೆ ಹಾಕೋಣ, ಒಳ್ಳೆಯ ಮಾತುಗಳೊಂದಿಗೆ ಅರಿತು ಕಲಿತು ಬಾಳೋಣ ಎಂಬುದಾಗಿ ಹೇಳಿದೆ.’ ಇದು ಸಹಕಾರದ ಆಳವನ್ನು ಪ್ರತಿಬಿಂಬಿಸುತ್ತದೆ. ನಾಗರಿಕ ಜೀವನದ ಪ್ರತಿಯೊಂದು ಮಜಲು ಸಹಕಾರದ ತಳಹದಿಯಲ್ಲಿ ಸಾಗಿ ಬಂದಿದೆ. ಬಂಡವಾಳಶಾಹಿ, ನೌಕರಶಾಹಿಯ ಮಧ್ಯದ ಸದಸ್ಯ ಕೇಂದ್ರಿತ ಸುವರ್ಣಮಾಧ್ಯಮ ಸಹಕಾರ. ಸಹಕಾರ – ಚಳುವಳಿಯ ಸ್ವರೂಪದಲ್ಲಿ 1844ರಲ್ಲಿ ಇಂಗ್ಲೇಡಿನ ರಾಕ್‍ಡೆಲ್ ಪಟ್ಟಣದಲ್ಲಿ ನೂಲಿನ ಗಿರಣಿ ಕಾರ್ಮಿಕರ ನೇತೃತ್ವದಲ್ಲಿ ಆರಂಭವಾದುದು ಆಧುನಿಕ ಸಹಕಾರದ ಇತಿಹಾಸ. ಇದು ಮಾರಾಟ, ತಯಾರಿ, ಸಂಸ್ಕರಣೆ ಸ್ವರೂಪದ ಸಹಕಾರಿ ಸಂಘವಾಗಿತ್ತು. ನಂತರ ಜರ್ಮನಿಯ ರೈಫಿಸನ್ ಕೃಷಿ ಪತ್ತಿನ ಸಹಕಾರಿ ಸಂಘಗಳಿಗೆ ನಾಂದಿ ಹಾಡಿದೆ. 1850ರಲ್ಲಿ ಹರ್ಮನ್ ಶೂಲ್ಸ್ ಎಂಬಾತ ಜರ್ಮನಿಯ ಡಿಲಿಟ್ಸ್ ಎಂಬಲ್ಲಿ ಪಟ್ಟಣ ಸಹಕಾರಿ ಬ್ಯಾಂಕುಗಳ ಮೂಲಕ ಬ್ಯಾಂಕಿನ ಚಟುವಟಿಕೆ ಆರಂಭಿಸಿದ. 1904 ಮಾರ್ಚ್ 25ರಂದು ಭಾರತದಲ್ಲಿ ಸಹಕಾರ ಚಳುವಳಿ ಕಾಯ್ದೆ ಸ್ವರೂಪದಲ್ಲಿ ಆರಂಭವಾಯಿತು.

ಕರ್ನಾಟಕದ ಗದಗ ಜಿಲ್ಲೆ ಕಣಗಿನಹಾಳದಲ್ಲಿ ದೇಶದ ಸಹಕಾರಿ ಪಿತಾಮಹ ಎಂದೆನಿಸಿದ ದಿ| ಸಂಣರಾಮನ ಗೌಡ ಸಿದ್ಧನ ಗೌಡ ಪಾಟೀಲರ ನೇತೃತ್ವದಲ್ಲಿ 1905 ಮೇ 8ರಂದು ದೇಶದ ಮೊಟ್ಟ ಮೊದಲ ಕೃಷಿ ಸಾಲದ ಸಹಕಾರಿ ಸಂಘ ಸ್ಥಾಪಿಸಲ್ಪಟ್ಟಿತು. ಸದಸ್ಯರು ಸಹಕಾರಿ ಸಂಘಗಳ ಮಾಲಕರು, ತಮ್ಮಿಂದ ಪ್ರಜಾಸತ್ತಾತ್ಮಕ ತಳಹದಿಯಲ್ಲಿ ಆರಿಸಲ್ಪಟ್ಟ ಕಾಯ್ದೆಯಲ್ಲಿ
ನಿರ್ದಿಷ್ಟಪಡಿಸಿದ ಸಂಖ್ಯೆಯ ಸದಸ್ಯರು ಆಡಳಿತದ ಚುಕ್ಕಾಣಿದಾರರು. ಸಂಘದ ಅಧ್ಯಕ್ಷ ಈ ಮಂಡಳಿಯ ಮುಖ್ಯಸ್ಥ. ಕಾರ್ಯಾಂಗದ ಭಾಗವಾಗಿ ಸಂಸ್ಥೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ದೈನಂದಿನ ಚಟುವಟಿಕೆಯ ಮುಖ್ಯಸ್ಥ.

ಸಂಸ್ಥೆಯೊಂದು ಸುಸೂತ್ರವಾಗಿ ಯಶಸ್ವಿಯಾಗಿ ಮುನ್ನಡೆಯಬೇಕಾದರೆ ಸಹಕಾರಿ ಕಾನೂನು, ನಿಯಮ, ಬೈಲಾ, ಉಪನಿಯಮಾವಳಿಗಳ ಕನಿಷ್ಟ ತಿಳುವಳಿಕೆ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿಗಳಲ್ಲಿರಬೇಕಾದುದು ಬಹಳ ಅವಶ್ಯ. ಅದರಲ್ಲೂ ಅಧ್ಯಕ್ಷ, ಮುಖ್ಯಕಾರ್ಯನಿರ್ವಹಣಾಧಿಕಾರಿ ಇದರಲ್ಲಿ ಪರಿಪೂರ್ಣತೆಯನ್ನು ಹೊಂದಿರಬೇಕು. ಇದರ
ಆಧಾರದಲ್ಲಿ ಕಾರ್ಯವ್ಯಾಪ್ತಿಯ ಅವಶ್ಯಕತೆ, ದೈನಂದಿನ ಚಟುವಟಿಕೆಯನ್ನು ಗಮನದಲ್ಲಿ ಇಟ್ಟು ಸಂಸ್ಥೆಯ ಯೋಜನೆಗಳು ರೂಪುಗೊಂಡು ಕಾರ್ಯಗತವಾಗಬೇಕು. ಕಾರ್ಯಚಟುವಟಿಕೆಗಳ ವಿವರ ಸಂಘದ ಬೈಲಾದಲ್ಲಿ ಪ್ರಸ್ತಾಪಿಸಿರತಕ್ಕದ್ದು. ಒಂದು ವೇಳೆ ಯಾವುದಾದರೂ ವ್ಯವಹಾರ ಯಾ ಚಟುವಟಿಕೆಯನ್ನು ಹೊಸತಾಗಿ ಸೇರ್ಪಡೆಗೊಳಿಸಬೇಕಾದ ಪಕ್ಷದಲ್ಲಿ ಅದನ್ನು ಮಹಾಸಭೆಯ ಕಾರ್ಯಸೂಚಿ ಮೂಲಕ ಬೈಲಾದಲ್ಲಿ ಅಳವಡಿಸುವ ಕಾರ್ಯವಾಗಬೇಕು. ಸದಸ್ಯರು ಜಾಗ್ರತರಾಗಿದ್ದು ಕಾಲಕಾಲದಲ್ಲಿ ಆರೋಗ್ಯಕರ ರೀತಿಯಲ್ಲಿ (ಮಹಾಸಭೆ ಮೂಲಕ ಅಥವಾ ಅಧ್ಯಕ್ಷರಿಗೆ ನೇರ ಪ್ರಸ್ತಾಪಿಸುವ ಮೂಲಕ) ಹೊಸಹೊಸ ವಿಚಾರವನ್ನು ಕಾರ್ಯಗತಗೊಳಿಸುವರೇ ಸೂಚನೆಗಳನ್ನು ನೀಡಬಹುದು.

( ಮುಂದುವರಿಯುತ್ತದೆ…..)

ಭಾಗ-1 : https://theruralmirror.com/?p=15514

ಬರಹ :

ರಾಧಾಕೃಷ್ಣ ಕೋಟೆ,ಹಿರಿಯ ಸಹಕಾರಿ

 

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಂಕಗಳಾಚೆಗೂ ಒಂದು ಲೋಕವಿದೆ : ಇದು ಮಕ್ಕಳಿಗೆ ಬದುಕನ್ನು ಕಲಿಸುವ ಶಿಕ್ಷಣ
January 29, 2026
9:31 PM
by: ಮಹೇಶ್ ಪುಚ್ಚಪ್ಪಾಡಿ
ಮಕ್ಕಳಲ್ಲಿ ಗುಣ ಬೆಳೆಸುವ ಹೊಣೆ ಶಾಲೆಗಳಿಗಿಲ್ಲವೆ?
January 28, 2026
8:18 PM
by: ಡಾ.ಚಂದ್ರಶೇಖರ ದಾಮ್ಲೆ
ಹಳ್ಳಿ ಬದುಕು ಶಾಪವಲ್ಲ… ಸಮಾಜದ ಮನಸ್ಥಿತಿ ಶಾಪ…!
January 28, 2026
7:09 AM
by: ಮಹೇಶ್ ಪುಚ್ಚಪ್ಪಾಡಿ
ಹೊಸರುಚಿ – ಮನೆಯಅಡುಗೆ ಮಾತು | ಆರೋಗ್ಯಕರ ಓಟ್ಸ್ ಮಿಲ್ಕ್ ಶೇಕ್ ರೆಸಿಪಿ
January 24, 2026
6:26 AM
by: ದಿವ್ಯ ಮಹೇಶ್

You cannot copy content of this page - Copyright -The Rural Mirror