ಬೆಳ್ಳಾರೆ:ಎಲ್ಲಾ ವರ್ಗ, ಧರ್ಮದ ಸಂಕಷ್ಟದಲ್ಲಿರುವವರಿಗೆ ದನಿಯಾಗುತ್ತಿದ್ದಾರೆ ಎಸ್‍ಕೆಎಸ್‍ಎಫ್ ವಿಖಾಯ ಸಂಸ್ಥೆಯ ಕಾರ್ಯಕರ್ತರು. ಮಳೆ-ಗಾಳಿ, ಚಳಿ-ಸೆಖೆಯೆನ್ನದೆ ಸದಾ ಸಾರ್ವಜನಿಕ ಸೇವೆಗೆ ಸನ್ನದ್ಧರಾಗಿರುತ್ತಾರೆ ವಿಖಾಯದ ಬೆಳ್ಳಾರೆ ಕಾರ್ಯಕರ್ತರು. ಯಾವುದೇ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸಿ ಅಗತ್ಯವಿರುವ ಸಹಾಯವನ್ನು ಕಲ್ಪಿಸಿಕೊಟ್ಟು ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ ವಿಖಾಯ ಸಂಸ್ಥೆಯ ಬೆಳ್ಳಾರೆ ಸದಸ್ಯರು.
ಇದಕ್ಕೆ ಸಾಕ್ಷಿಯಾಗಿ ಬೆಳ್ಳಾರೆ ಸಮೀಪದ ನೆಟ್ಟಾರು ಸುಂದರಿ ಎಂಬವರು ಕಳೆದ 35 ವರ್ಷಗಳಿಂದ ತನ್ನ ಸೂರು ಕಳೆದುಕೊಂಡಿದ್ದು, ನೆಟ್ಟಾರಿನ ಸಣ್ಣ ಜೋಪಡಿಯೊಳಗೆ ತನ್ನ ಪುತ್ರನೊಂದಿಗೆ ವಾಸವಿದ್ದರು. ಕಟ್ಟಡ ಸಂಖ್ಯೆ, ಆಧಾರ್ ಕಾರ್ಡ್, ಪಡಿತರ ಚೀಟಿ ಇದ್ದರೂ ಸುಂದರಿಯವರಿಗೆ ಉಳಿದುಕೊಳ್ಳಲು ಸರಿಯಾದ ಸೂರಿರಲಿಲ್ಲ. 2 ವರ್ಷಗಳ ಹಿಂದೆ ಇದ್ದ ಸಣ್ಣ ಮನೆಯೂ ಕುಸಿದು ಹೋಗಿತ್ತು ಆ ಬಳಿಕ ತನ್ನ ಪುತ್ರ ಮಗಳ ಮನೆಗೆ ಹೋದ ಮೇಲೆ ಸುಂದರಿಯವರು ಏಕಾಂಗಿಯಾದರು. ರಾತ್ರಿ ಅಡುಗೆ ಮಾಡಿ ನಂತರ ಮಲಗಲು ಪಕ್ಕದ ಮನೆಗೆ ನಿತ್ಯವೂ ಹೋಗುತ್ತಿದ್ದರು.
ವಿಖಾಯದ ಸಹಾಯ ಹಸ್ತ: ಸುಂದರಿ ಅವರ ಮನೆಯ ಪರಿಸ್ಥಿತಿ ಗಮನಿಸಿದ ಸುಳ್ಯ ತಾಲೂಕು ಎಸ್‍ಕೆಎಸ್‍ಎಫ್ ವಿಖಾಯ ಸಂಸ್ಥೆಯ ಅಧ್ಯಕ್ಷ ಜಮಾಲುದ್ದೀನ್ ಕೆ.ಎಸ್ ಬೆಳ್ಳಾರೆ ಅವರು ತಾತ್ಕಾಲಿಕ ಮನೆ ನಿರ್ಮಿಸಿಕೊಡಲು ನಿರ್ಧರಿಸಿ ಬೆಳ್ಳಾರೆ ಗ್ರಾಮ ಪಂಚಾಯತ್ ಗೆ ಮಾಹಿತಿ ನೀಡಿದರು. ವಿಖಾಯದ 20-30 ಯುವಕರು ಸುಂದರಿಯವರಿಗೆ ಎಡಬಿಡದೆ ಸುರಿವ ಮಳೆಯನ್ನು ಲೆಕ್ಕಿಸದೆ ಒಂದೇ ದಿನದಲ್ಲಿ ಸೂರು ನಿರ್ಮಿಸಿಕೊಟ್ಟು ಶ್ಲಾಘನೆಗೆ ಪಾತ್ರರಾಗಿದ್ದಾರೆ. ಇದಕ್ಕೆ ಬೆಳ್ಳಾರೆ ಗ್ರಾಮ ಪಂಚಾಯತ್ ಹಾಗು ಶಂಸುಲ್ ಉಲಾಮಾ ಟ್ರಸ್ಟ್ ಕೂಡ ತ್ವರಿತವಾಗಿ ಸ್ಪಂದಿಸಿದೆ.
ಕೊಡಗು ದುರಂತದ ಸಂದರ್ಭ ವಿಖಾಯದ ಮುಂದಾಳತ್ವ:ಕಳೆದ ವರ್ಷ ಸುರಿದ ಭಾರಿ ಮಳೆಗೆ ಕೊಡಗಿನ ಜೋಡುಪಾಲ ಭೀಕರ ದುರಂತಕ್ಕೆ ಈಡಾಗಿದ್ದ ಸಂದರ್ಭ ಸ್ವತಃ ವಿಖಾಯಾ ಅಧ್ಯಕ್ಷ ಜಮಾಲುದ್ದೀನ್ ಅವರು ಬೆಳ್ಳಾರೆ ಠಾಣಾಧಿಕಾರಿ ಈರಯ್ಯ ಡಿ.ಎನ್ ಜೊತೆಗೂಡಿ ದುರಂತದಲ್ಲಿ ಸಿಲುಕಿಕೊಂಡವರನ್ನು ತಮ್ಮ ಬೆನ್ನಮೇಲೆ ಹೊತ್ತುಕೊಂಡು ಕಾಪಾಡಿ, ನಿರಾಶ್ರಿತರ ಜೊತೆಗೆ ಗಂಜಿ ಕೇಂದ್ರದಲ್ಲಿ ಕಳೆದು ಸುಳ್ಯ ತಾಲೂಕಿನವರ ಶ್ಲಾಘನೆಗೆ ಪಾತ್ರರಾಗಿದ್ದರು.
ಬೆಳ್ಳಾರೆಯಲ್ಲಿ ಅಪಘಾತಗಳು, ಹೆರಿಗೆಗಳು ಅಥವ ತುರ್ತು ಸಂದರ್ಭದಲ್ಲಿ ಆಂಬುಲೆನ್ಸ್ ಬರಲು ತಡವಾದರೆ ವಿಖಾಯ ಸಂಸ್ಥೆಯವರು ಮಾನವೀಯತೆ ಮೆರೆದು ಅಂತಹವರನ್ನು ಆಸ್ಪತ್ರೆಗೆ ತಕ್ಷಣ ತಮ್ಮ ಸ್ವಂತ ವಾಹನದ ಮೂಲಕ ತಲುಪಿಸುತ್ತಾರೆ. ಬೆಳ್ಳಾರೆ ಸಾರ್ವಜನಿಕ ಬಸ್‍ನಿಲ್ದಾಣವನ್ನು ಪ್ರತಿದಿನವೂ ಮಾಡುತ್ತಿದ್ದು, ಸ್ವಚ್ಛ ಭಾರತ್ ಯೋಜನೆಗೆ ತಮ್ಮದೇ ಆದ ಕೊಡುಗೆಯನ್ನೂ ನೀಡುತ್ತಿದ್ದಾರೆ.
ನಮ್ಮಿಂದ ಸಾಧ್ಯವಾದಷ್ಟರ ಮಟ್ಟಿಗೆ ಸಾರ್ವಜನಿಕರಿಗೆ ಜೀವನವನ್ನು ಮುಡಿಪಾಗಿಟ್ಟಿರುತ್ತೇವೆ. ನಮ್ಮ ಕೆಲಸಗಳಿಂದ ಸಮಾಜ ಹಾಗು ಸಾರ್ವಜನಿಕರಿಗೆ ನೆಮ್ಮದಿ ಸಂತೋಷಗಳು ಉಂಟಾದರೆ ಭಗವಂತನು ಸಂತೃಪ್ತನಾದಂತೆ – – ಜಮಾಲುದ್ದೀನ್ ಕೆ.ಎಸ್ ಬೆಳ್ಳಾರೆ, ಚೇರ್ಮನ್ ಸುಳ್ಯ ವಿಖಾಯಾ ಸಂಸ್ಥೆ
Advertisement
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…