Advertisement
ಸುದ್ದಿಗಳು

ಸಾರ್ವಜನಿಕರ ಸಹಭಾಗಿತ್ವ ಇದ್ದರೆ ಮೂಲಭೂತ ವ್ಯವಸ್ಥೆಗಳಿಗೆ ವೇಗ – ಜಯಪ್ರಸಾದ್ ಜೋಶಿ

Share

ಬಾಳಿಲ: ಯಾವುದೇ ಅಭಿವೃದ್ದಿ ಕಾರ್ಯಗಳು, ವಿದ್ಯುತ್ ಸಂಬಂಧಿತ ಕೆಲಸಗಳ ಅನುಷ್ಠಾನದಲ್ಲಿ ಸಾರ್ವಜನಿಕರ ಅಥವಾ ಬಳಕೆದಾರರ ಸಹಭಾಗಿತ್ವ ಇದ್ದರೆ ಕೆಲಸಗಳು ವೇಗ ಪಡೆಯಲು ಸಾಧ್ಯ ಎಂದು ಬೆಳ್ಳಾರೆ ಬಳಕೆದಾರರ ವೇದಿಕೆ ಸಂಚಾಲಕ ಜಯಪ್ರಸಾದ್ ಜೋಶಿ ಹೇಳಿದರು.

ಅವರು  ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲಾ ವಠಾರದಲ್ಲಿ ಭಾನುವಾರ ಭಾರತೀಯ ಕಿಸಾನ್ ಸಂಘ ಬಾಳಿಲ-ಮುಪ್ಪೇರ್ಯ ಹಾಗೂ ಭಾರತೀಯ ಕಿಸಾನ್ ಸಂಘ ಸುಳ್ಯ, ಗುತ್ತಿಗಾರು-ನಾಲ್ಕೂರು , ಎಣ್ಮೂರು ಇವುಗಳ ಸಹಭಾಗಿತ್ವದಲ್ಲಿ ನಡೆದ 16 ನೇ ವಾರ್ಷಿಕೋತ್ಸವ ಹಾಗೂ ಬಲರಾಮ ಜಯಂತಿ  ಕಾರ್ಯಕ್ರಮದಲ್ಲಿ ಮಾಡಾವು 110 ಕೆ.ವಿ. ವಿದ್ಯುತ್ ಸಬ್ ಸ್ಟೇಶನ್ ಪೂರ್ಣಗೊಳಿಸುವ ಬಗೆಗಿನ ಹೋರಾಟ ಮತ್ತು ಪರಿಣಾಮಗಳು ವಿಚಾರವಾಗಿ ನಡೆದ ವಿಚಾರಗೋಷ್ಠಿಯಲ್ಲಿ ಮಾತನಾಡಿದರು. ಮಾಡಾವು 110 ಕೆ.ವಿ. ವಿದ್ಯುತ್ ಸಬ್ ಸ್ಟೇಶನ್ ಕಾಮಗಾರಿಗೆ 2007 ರಲ್ಲಿ ಶಂಕುಸ್ಥಾಪನೆಯನ್ನು ಮಂಗಳೂರಿನಲ್ಲಿ ಮಾಡಲಾಗಿತ್ತು. 13 ವರ್ಷಗಳಿಂದ ಈ ಕೆಲಸ ನಡೆಯುತ್ತಲೇ ಇತ್ತು. ಸಾರ್ವಜನಿಕರು ಈ ಕಾರ್ಯದ ಹಿಂದೆ ಬಿದ್ದಾಗ 100 ದಿನದಲ್ಲಿ  ಶೇಕಡಾವಾರು ಕೆಲಸಗಳು ಪ್ರಗತಿ ಕಂಡಿದೆ. ಇಲಾಖೆಗಳಿಗೆ ಅದರದೇ ಆದ ಕೆಲವೊಂದು ನಿರ್ಧಾರ, ನೀತಿಗಳು ಇರುತ್ತವೆ. ಸಾರ್ವಜನಿಕರು ಈ ಸಂದರ್ಭ ಆಸಕ್ತಿ ತೋರಿದರೆ ಇಲಾಖೆಗಳಿಗೂ ಅನುಕೂಲವಾಗುತ್ತದೆ ಎಂದರು.

ಭ್ರಷ್ಟಾಚಾರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು  ರಾಜಕೀಯ ಕಾರಣಗಳಿಂದ ಕೆಲವೊಂದು ಕೆಲಸಗಳು ಕುಂಠಿತವಾಗುತ್ತವೆ.  ಮಾಡಾವು 110 ಕೆ.ವಿ. ವಿದ್ಯುತ್ ಸಬ್ ಸ್ಟೇಶನ್  ವಿಚಾರದಲ್ಲೂ ಆರಂಭದಲ್ಲಿ ಇದೇ ಆಗಿತ್ತು. ಇಲಾಖೆಗಳಿಗೆ ಅನುಮತಿ, ಉತ್ಸಾಹದ ಕೊರತೆ ಕಂಡುಬಂದಿತ್ತು. ಬಳಿಕ ಭಾರತೀಯ ಕಿಸಾನ್ ಸಂಘವು ಆಸಕ್ತಿ ತೋರಿದ ಬಳಿಕ ಸಾರ್ವಜನಿಕರೆಲ್ಲ ಸಹಕಾರದಿಂದ ಯಶಸ್ಸಿನ ಹಾದಿಯಲ್ಲಿ ಮುಂದುವರಿಯಲು ಸಾಧ್ಯವಾಯಿತು ಎಂದು ಜಯಪ್ರಸಾದ್ ಹೇಳಿದರು. ಇಲಾಖೆಗಳ ನಡುವೆ ಸಮನ್ವಯದ ಕೊರತೆ ಇರುವ ಸಂದರ್ಭದಲ್ಲಿ ಸಾರ್ವಜನಿಕರ ಸಹಭಾಗಿತ್ವ ಅಗತ್ಯವಾಗುತ್ತದೆ. ಆಗ ಹೆಚ್ಚು ಕೆಲಸವಾಗುತ್ತದೆ ಎಂದರು.

ಮಾಡಾವು 110 ಕೆ.ವಿ. ವಿದ್ಯುತ್ ಸಬ್ ಸ್ಟೇಶನ್ ವಿಚಾರದಲ್ಲಿ ನ್ಯಾಯಾಲಯದಲ್ಲಿ ಪ್ರಕರಣಗಳು ಬೇಗ ಮುಗಿಯುವಂತೆಯೂ ಸಾರ್ವಜನಿಕರ ಪ್ರಯತ್ನವಾಗಿದೆ.ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ್ ಗಳು ವಿದ್ಯುತ್ ಬಗ್ಗೆ ನಿರ್ಣಯ ಮಾಡಿ ಸಹಕಾರ ಮಾಡಿವೆ. ಇದೆಲ್ಲಾ ಕಾರಣಗಳಿಂದ 17 ವರ್ಷದಲ್ಲಿ ಆಗದ ಕೆಲಸವು 100 ದಿನದಲ್ಲಿ ಆಗಿದೆ ಎಂದು ಹೇಳಿದರು.

ವೇದಿಕೆಯಲ್ಲಿ  ಬಾಳಿಲ ಭಾಕಿಸಂ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಕರ್ವಂಕಲ್ಲು , ಮಂಗಳೂರು ವಿಭಾಗ ಅಂಚೆ ಅಧೀಕ್ಷಕ‌ ಶ್ರೀಹರ್ಷ , ಗುತ್ತಿಗಾರು ಭಾಕಿಸಂ ಕಾರ್ಯದರ್ಶಿ  ಕುಮಾರಸ್ವಾಮಿ ಮೇಲ್ತೋಟ ಉಪಸ್ಥಿತರಿದ್ದರು.

 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

‘ಅನ್ನಂ ಬ್ರಹ್ಮ’ ಭಾವದಿಂದ ಆಹಾರ ಸೇವಿಸಿದರೆ ಮುಕ್ತಿಯ ಸಾಧನ – ರಾಘವೇಶ್ವರ ಶ್ರೀ

ಗೋಕರ್ಣದಲ್ಲಿ ನಡೆದ 'ಅನ್ನಂ ಬ್ರಹ್ಮ' ಪ್ರವಚನದಲ್ಲಿ ರಾಘವೇಶ್ವರ ಭಾರತೀ ಶ್ರೀಗಳು ಭೋಜನವೇ ಅದ್ವೈತ…

6 hours ago

ಕೃಷಿ ಅಧಿಕಾರಿ ನೇಮಕಾತಿ ಪರೀಕ್ಷೆ ತಾತ್ಕಾಲಿಕ ಮುಂದೂಡಿಕೆ | ಪ್ರತಿಭಟನಾನಿರತ ವಿದ್ಯಾರ್ಥಿಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಭರವಸೆ

ಕೃಷಿ ಅಧಿಕಾರಿ ನೇಮಕಾತಿ ಪರೀಕ್ಷೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಪ್ರತಿಭಟನಾನಿರತ ಕೃಷಿ ವಿದ್ಯಾರ್ಥಿಗಳಿಗೆ ಸರ್ಕಾರ…

7 hours ago

ಬರ್ಮಾ ಅಡಿಕೆ ಕಳ್ಳಸಾಗಣೆ ವಿರುದ್ಧ ಇಡಿ ಬಿಗಿ ಕ್ರಮ – ಇಬ್ಬರು ಉದ್ಯಮಿಗಳ ಮನೆಗಳ ಮೇಲೆ ದಾಳಿ

ಬರ್ಮಾ ಅಡಿಕೆ ಕಳ್ಳಸಾಗಣೆ ಮತ್ತು ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಇಡಿ ಸಿಲ್ಚಾರ್‌ನ…

8 hours ago

ದೇಹ–ಮನಸ್ಸು–ಆತ್ಮದ ಸಮತೋಲನವೇ ನಿಜವಾದ ಆರೋಗ್ಯ: ಆಯುರ್ವೇದದ ಪರಮ ಗುರಿ ಆತ್ಮಜ್ಞಾನ – ರಾಘವೇಶ್ವರ ಶ್ರೀ

ದೇಹ, ಮನಸ್ಸು ಮತ್ತು ಆತ್ಮದ ಸಮತೋಲನವೇ ನಿಜವಾದ ಆರೋಗ್ಯ ಎಂದು ರಾಮಚಂದ್ರಾಪುರ ಶ್ರೀ…

1 day ago