Advertisement
ಸುದ್ದಿಗಳು

ಸಾಲಮನ್ನಾ ಯೋಜನೆಯ ಅನುಷ್ಠಾನದಲ್ಲಿನ ಗೊಂದಲ ಸರಿಪಡಿಸಲು ಶಾಸಕ ಅಂಗಾರ ಆಗ್ರಹ

Share

ಸುಳ್ಯ: ರಾಜ್ಯ ಸರ್ಕಾರ ಘೋಷಣೆ ಮಾಡಿದ ಒಂದು ಲಕ್ಷ ರೂ ತನಕದ ಸಾಲ ಮನ್ನಾ ಯೋಜನೆಯ ಅನುಷ್ಠಾನದಲ್ಲಿ ಪ್ರಾರಂಭಿಕ ಹಂತದಲ್ಲಿ ಸರ್ಕಾರದ ಆದೇಶಗಳಿಂದಾಗಿ ಉಂಟಾಗಿರುವ ಸಮಸ್ಯೆಯನ್ನು ಪರಿಹರಿಸಬೇಕೆಂದು ಶಾಸಕ ಎಸ್.ಅಂಗಾರ ರಾಜ್ಯ ಗೃಹ ಹಾಗೂ ಸಹಕಾರ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಆಗ್ರಹಿಸಿದ್ದಾರೆ.

ತಾಂತ್ರಿಕ ಕಾರಣಗಳಿಂದಾಗಿ ಸಾಲಮನ್ನಾ ವಂಚಿತರಾಗಬಹುದಾದ ರೈತರ ಹಿತದೃಷ್ಠಿಯಿಂದ ಉಂಟಾಗಿರುವ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಲು ಅವಕಾಶ ನೀಡಿ ಎಲ್ಲಾ ಅರ್ಹ ರೈತರಿಗೆ ಸಾಲ ಮನ್ನಾ ಸವಲತ್ತು ಸಿಗುವಂತೆ ತಂತ್ರಾಂಶದಲ್ಲಿ ಅವಕಾಶ ಮಾಡಬೇಕೆಂದು ಸಚಿವರಲ್ಲಿ ವಿನಂತಿಸಲಾಗಿದೆ. ಈ ಕುರಿತು ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸಚಿವರು ಶಾಸಕರಿಗೆ ಭರವಸೆ ನೀಡಿದ್ದಾರೆ. ಪ್ರಾಥಮಿಕ ಸಹಕಾರಿ ಸಂಘಗಳು ಸದಸ್ಯರ ರೂಪೇ ಕೆ.ಸಿ.ಸಿ ಖಾತೆಗಳ ಸಂಖ್ಯೆಯನ್ನು ನಮೂದಿಸದೇ ಇದ್ದುದರಿಂದ ಬಹಳಷ್ಟು ರೈತರ ಸಾಲ ಮನ್ನಾ ಮೊಬಲಗು ಜಮಾ ಆಗದೆ ಬಾಕಿ ಇರುತ್ತದೆ ಈ ಬಗ್ಗೆ ಮಾರ್ಚ್ ತನಕ ಸಾಲ ಮನ್ನಾ ಮೊತ್ತ ಬಿಡುಗಡೆಯಾದ ಖಾತೆಗಳಿಗೆ ಎಡಿಟಿಂಗ್ ಅವಕಾಶ ನೀಡುವುದರ ಮೂಲಕ ಸದಸ್ಯರ ರೂಪೇ ಖಾತೆ ಸಂಖ್ಯೆ ನಮೂದಿಸಲು ಅವಕಾಶ ನೀಡಿರುತ್ತಾರೆ.

ಮಾರ್ಚ್ 2019ರ ನಂತರ ಬಿಡುಗಡೆಯಾದ ಹಾಗು ಬಿಡುಗಡೆಯಾಗಲಿರುವ ಖಾತೆಗಳಿಗೂ ಎಡಿಟಿಂಗ್ ಅವಕಾಶ ನೀಡಬೇಕು, ಸದಸ್ಯರ ನಂಬ್ರದ ಕಾಲಂ ಸರಿಯಾಗಿ ಕಾಣುವಂತೆ ಮಾಡಲು ಕ್ರಮ ಕೈಗೊಳ್ಳಬೇಕು, ಪಡಿತರ ಚೀಟಿಗೆ ಆಧಾರ್ ಲಿಂಕ್ ಮಾಡಿದರಿಂದ ಅದು ಹೊಸ ಪಡಿತರ ಚೀಟಿ ಎಂದು ನಮೂದಾಗುವ ಕಾರಣ ಹಲವು ಮಂದಿ ಕೃಷಿಕರು ಸಾಲಮನ್ನಾ ಸೌಲಭ್ಯ ಪಡೆಯುವುದರಿಂದ ವಂಚಿತರಾಗಿದ್ದಾರೆ. ಅರ್ಹರಿಗೆ ಸಾಲಮನ್ನಾ ಸೌಲಭ್ಯ ದೊರಕಿಸಲು ಕ್ರಮ ಕೈಗೊಳ್ಳಬೇಕು. ವಿವರ ನಮೂದಿಸುವಾಗ ತಪ್ಪುಗಳು ಉಂಟಾಗಿರುವುದನ್ನು ಸರಿಪಡಿಸಲು ಅವಕಾಶ ನೀಡಬೇಕು, ಎಫ್‍ಎಸ್‍ಡಿ ಇನ್ ಕಂಪ್ಲೀಟ್ ಮತ್ತು ಪ್ಯಾಕ್ಸ್ ಡಿಇಒ ಲಾಗಿನ್‍ನಲ್ಲಿ ವಿಲೇವಾರಿಗೆ ಬಾಕಿ ಇರುವ ಪ್ರಕರಣವನ್ನು ಇತ್ಯರ್ಥ ಪಡಿಸಲು ತಾಲೂಕು ಸಮಿತಿಗೆ ವರ್ಗಾಯಿಸಬೇಕು, ಹಿಂದಿನ ಆದೇಶದಂತೆ ಆದಾಯ ತರಿಗೆ, ಪಿಂಚಣಿ, ವೇತನ ಮಾಹಿತಿ ಅಪ್‍ಲೋಡ್ ಆಗಿದ್ದು ಇದರಿಂದ ಹಲವು ಮಂದಿ ಸೌಲಭ್ಯ ವಂಚಿತರಾಗಿದ್ದಾರೆ ಇದನ್ನು ತಿದ್ದುಪಡಿಗೆ ಅವಕಾಶ ನೀಡಬೇಕು, ಸಾಲಮನ್ನಾ ಸೌಲಭ್ಯವನ್ನು ಸಹಕಾರಿ ಸಂಘಗಳ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ನಲ್ಲಿರುವ ಖಾತೆಗೆ ಬಿಡುಗಡೆ ಮಾಡಿ ಸಹಕಾರಿ ಸಂಘಗಳ ಮೂಲಕ ರೈತರಿಗೆ ತಕ್ಷಣ ದೊರಕಿಸುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು, ಟಿ.ಎಲ್.ಸಿ ಸ್ಕ್ಯಾನ್ ಅಪ್‍ಲೋಡ್ ಪೆಂಡಿಂಗ್ ಪ್ರಕರಣವನ್ನು ತಾಲೂಕು ಸಮಿತಿಗೆ ವರ್ಗಾಯಿಸಬೇಕು, ಜಿ.ಪಿ.ಎ ನೀಡಿದ ಪ್ರಕರಣಗಳಿಗೆ ಸಾಲ ಮನ್ನಾ ಸವಲತ್ತು ಅವಕಾಶ ನೀಡಬೇಕು, ಸಾಲ ಪಡೆದ ಬಳಿಕ ಪಹಣಿ ಪೋಡಿ ದುರಸ್ತಿ, ಖಾತಾ ಬದಲಾವಣೆ, ಇತ್ಯಾದಿ ಕಾರಣಗಳಿಂದ ಪಹಣಿಯಲ್ಲಿ ಹೆಸರು ಬದಲಾಗಿದ್ದು ಇಂತಹಾ ಪ್ರಕರಣಗಳನ್ನು ತಾಲೂಕು ಸಮಿತಿಯಲ್ಲಿ ವಿಲೇವಾರಿಗೆ ಅವಕಾಶ ನೀಡಬೇಕು ಎಂದು ಮನವಿ ಆಗ್ರಹಿಸಲಾಗಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಮ್ಯಾನ್ಮಾರ್ ಅಡಿಕೆ ಕಳ್ಳಸಾಗಣೆ ವಿರುದ್ಧ ಬಿಗುವಿನ ಕ್ರಮ | ಪಾಕಿಸ್ತಾನದಲ್ಲಿ ವಿಷಕಾರಿ ಅಡಿಕೆ ವಿರುದ್ಧ ದಾಳಿ

ಮ್ಯಾನ್ಮಾರ್‌ನಿಂದ ಅಡಿಕೆ ಕಳ್ಳಸಾಗಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಿಜೋರಾಂ ಸರ್ಕಾರ ಜಾರಿ ಕ್ರಮವನ್ನು ಕಠಿಣಗೊಳಿಸಿದೆ.…

28 minutes ago

ಮಕ್ಕಳಿಗೆ ಸೋಶಿಯಲ್ ಮೀಡಿಯಾ ನಿಷೇಧ..

16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಬಳಕೆಯನ್ನು ನಿಷೇಧಿಸುವ ಮಹತ್ವದ ಘೋಷಣೆ ರಾಜ್ಯ…

5 hours ago

ಕುಕ್ಕೆ–ಕೊಲ್ಲೂರು ದೇವಾಲಯಗಳಿಗೆ ಅಭಿವೃದ್ಧಿ ಪ್ರಾಧಿಕಾರ : ಮುಜರಾಯಿ ಇಲಾಖೆಗೆ ಬಜೆಟ್ ಬಲ

ಕುಕ್ಕೆ ಸುಬ್ರಹ್ಮಣ್ಯ ಮತ್ತು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಗಳಿಗೆ ಅಭಿವೃದ್ಧಿ ಪ್ರಾಧಿಕಾರ ರಚಿಸುವ ಮಹತ್ವದ…

5 hours ago

ರೈತರಿಗೆ ಬಜೆಟ್‌ನಲ್ಲಿ ಸಿಕ್ಕ 15 ಘೋಷಣೆಗಳು | ಕೃಷಿ, ಅಡಿಕೆ, ಮೀನುಗಾರಿಕೆ ಕ್ಷೇತ್ರಕ್ಕೆ ವಿಶೇಷ ಯೋಜನೆಗಳು

ರಾಜ್ಯ ಬಜೆಟ್‌ 2026-27ರಲ್ಲಿ ರೈತರಿಗೆ ಕೃಷಿ, ತೋಟಗಾರಿಕೆ, ಮೀನುಗಾರಿಕೆ ಹಾಗೂ ಗ್ರಾಮೀಣ ಅಭಿವೃದ್ಧಿಗೆ…

16 hours ago

ರಾಜ್ಯ ಬಜೆಟ್‌ 2026-27: ಕೃಷಿ, ತೋಟಗಾರಿಕೆ, ಮೀನುಗಾರಿಕೆ ಕ್ಷೇತ್ರಕ್ಕೆ ಹೊಸ ಯೋಜನೆಗಳ ಘೋಷಣೆ

ರಾಜ್ಯ ಬಜೆಟ್‌ 2026-27ರಲ್ಲಿ ಕೃಷಿ, ತೋಟಗಾರಿಕೆ ಮತ್ತು ಮೀನುಗಾರಿಕೆ ಕ್ಷೇತ್ರಗಳಿಗೆ ಹಲವು ಹೊಸ…

16 hours ago

ಹವಾಮಾನ ವರದಿ | 06-03-2026 | ಕರಾವಳಿಯಲ್ಲಿ ಮೋಡ ಕವಿದ ಆಕಾಶ, ಕೆಲವೆಡೆ ತುಂತುರು ಮಳೆಯ ಸಾಧ್ಯತೆ

ಕರಾವಳಿ ಜಿಲ್ಲೆಗಳಲ್ಲಿ ಮಧ್ಯಾಹ್ನದ ಬಳಿಕ ಮೋಡದ ವಾತಾವರಣ ಹೆಚ್ಚಾಗುವ ಸಾಧ್ಯತೆ ಇದೆ. ಘಟ್ಟದ…

20 hours ago