ಸಾವಿರ ಜನರಿಂದ ಸರಳ ಜೀವನದ ಪ್ರತಿಜ್ಞೆ…..

August 19, 2019
8:00 AM

ಪ್ರವಾಹ ಬಂದಾಗ, ರಾಜ್ಯದಲ್ಲಿ ಸಂಕಷ್ಟ ಎದುರಾದಾಗ ಸರಳ ಕಾರ್ಯಕ್ರಮ , ಸರಳ ರೀತಿಯ ಆಚರಣೆಗಳು ನಡೆಯುತ್ತವೆ. ಅಂತಹದ್ದೇ ಒಂದು ಕಾರ್ಯಕ್ಕೆ ಒಂದು ಸಾವಿರ ಮಂದಿ ನಿರ್ಧಾರ ಕೈಗೊಂಡಿದ್ದಾರೆ. ಅದ್ದೂರಿ- ಆಡಂಬರದ ಜೀವನಕ್ಕೆ ವಿದಾಯ ಹೇಳಿದ್ದಾರೆ. ದುಶ್ಚಟ- ವ್ಯಸನ, ಜೀವನಕ್ಕೆ ಅನಿವಾರ್ಯವಲ್ಲ ಎನ್ನುವ ವಸ್ತುಗಳನ್ನೂ  ತ್ಯಜಿಸಿದ್ದಾರೆ. ಈ ಮಾದರಿ ಕಾರ್ಯ ಇನ್ನಷ್ಟು ಮಂದಿಗೆ ಪ್ರೇರಣೆಯಾಗಲಿ, ಬದುಕಿನ ಪೂರ್ತಿ ಈ ಕಾರ್ಯ ಅನುಷ್ಠಾನವಾಗಲಿ ಎಂಬ ಆಶಯದೊಂದಿಗೆ ಇಂದಿನ ಫೋಕಸ್….

Advertisement

ಶ್ರೀರಾಮಚಂದ್ರಾಪುರ ಮಠದ ಸಾವಿರಕ್ಕೂ ಹೆಚ್ಚು ಶಿಷ್ಯಭಕ್ತರು ಅದ್ದೂರಿ- ಆಡಂಬರದ ಜೀವನಕ್ಕೆ ವಿದಾಯ ಹೇಳಿ  ಸರಳ ಜೀವನದ ಪ್ರತಿಜ್ಞೆ ಕೈಗೊಂಡರು.ತಕ್ಷಶಿಲಾ ವಿಶ್ವವಿದ್ಯಾನಿಲಯದ ಪುನರವತರಣದ ಮಹಾಸಂಕಲ್ಪವಾಗಿ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿಯವರು ಅನುಗ್ರಹಿಸುತ್ತಿರುವ ಧಾರಾ ರಾಮಾಯಣದ ಅಂಗವಾಗಿ ಬೆಂಗಳೂರಿನ ಗಿರಿನಗರ ರಾಮಾಶ್ರಮದಲ್ಲಿ ನಡೆದ ತ್ಯಾಗ ಪರ್ವದಲ್ಲಿ ನೂರಾರು ಮಂದಿ ದುಶ್ಚಟ- ವ್ಯಸನ, ಜೀವನಕ್ಕೆ ಅನಿವಾರ್ಯವಲ್ಲ ಎನ್ನುವ ವಸ್ತುಗಳನ್ನು ತ್ಯಜಿಸಿದರು.

ಧಾರಾ ರಾಮಾಯಣ ಪ್ರವಚನವು ಪಾದುಕಾ ಪಟ್ಟಾಭಿಷೇಕ ಘಟ್ಟ ತಲುಪಿದ ಹಿನ್ನೆಲೆಯಲ್ಲಿ, ಶ್ರೀರಾಮ ಹಾಗೂ ಭರತನ ರಾಜ್ಯ ತ್ಯಾಗವನ್ನು ತ್ಯಾಗಪರ್ವವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಶ್ರೀರಾಮ ಹಾಗೂ ಭರತರು ಬದುಕಿ ತೋರಿಸಿದ ತ್ಯಾಗಜೀವನ ಹಾಗೂ ಸರಳ ಜೀವನ, ಸಮಾಜದ ಪ್ರತಿಯೊಬ್ಬರೂ ಅನುಸರಿಸಬಹುದಾದ ಆದರ್ಶ ಎಂದು ಹೇಳಿದರು.ಗುರುಗಳ ಜೋಳಿಗೆಗೆ ವ್ಯಸನಗಳನ್ನು ಹಾಕಿ; ಬಿಟ್ಟರೆ ನಷ್ಟವಿಲ್ಲ ಎನ್ನಬಹುದಾದ ವಸ್ತುಗಳನ್ನು ತ್ಯಜಿಸಿ, ದುಂದುವೆಚ್ಚ ಬಿಡಿ. ಅದ್ದೂರಿ- ಆಡಂಬರಕ್ಕೆ ಕಡಿವಾಣ ಹಾಕಿ ಸರಳ ಜೀವನಕ್ಕೆ ನಾಂದಿ ಹಾಡಿದಾಗ ಇಡೀ ದೇಶ ರಾಮರಾಜ್ಯವಾಗುತ್ತದೆ ಎಂದು ಬಣ್ಣಿಸಿದರು.

ನಮ್ಮ ಕಂಟಕ, ದುಃಖ, ಕ್ಲೇಶಗಳನ್ನು ಮಹಾತ್ಮರು ಆವಾಹಿಸಿಕೊಳ್ಳುವುದರಿಂದ ಅವರು ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ರಾಮ- ಭರತರನ್ನು ಕೂಡಾ ಇಂಥ ಸಂಕಷ್ಟಗಳು ಬಿಡಲಿಲ್ಲ. ಇಷ್ಟಾಗಿಯೂ ತಮ್ಮ ಆದರ್ಶವನ್ನು ಬಿಡದೇ ಸಮಾಜಕ್ಕೆ ತ್ಯಾಗದ ದೊಡ್ಡ ಸಂದೇಶ ನೀಡಿದರು ಎಂದು ಅಭಿಪ್ರಾಯಪಟ್ಟರು.ರಾಮನಿಗೂ ತಕ್ಷಶಿಲಾ ವಿಶ್ವವಿದ್ಯಾಲಯಕ್ಕೂ ಅವಿನಾಭಾವ ಸಂಬಂಧ ಇದೆ. ತಕ್ಷಶಿಲೆ ವಿವಿ ಮೂಲಕ ಭರತ ಸಂಸ್ಕೃತಿ ಮತ್ತೆ ತಲೆ ಎತ್ತಿ ನಿಂತಿತು. ಇದೀಗ ಅಂಥ ತಕ್ಷಶಿಲಾ ವಿವಿಯ ಪುನರವತರಣದ ಕಾಲ ಮತ್ತೆ ಸನ್ನಿಹಿತವಾಗಿದೆ. ಉದ್ದೇಶಿತ ವಿವಿ ಇಂಥ ನೂರಾರು- ಸಾವಿರಾರು ಚಲಿಸುವ ವಿಶ್ವವಿದ್ಯಾನಿಲಯಗಳನ್ನು ರೂಪಿಸಿ ಭಾರತವನ್ನು ರಾಮರಾಜ್ಯವಾಗಿ ಪರಿವರ್ತಿಸಲು ನಾಂದಿ ಹಾಡಲಿದೆ ಎಂದರು.

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮುಳಬಾಗಿಲಿನಲ್ಲಿ ಹೋಟೆಲ್ ಮೇಲೆ ದಾಳಿ : 30 ಲೀಟರ್ ಹಳೆಯ ತುಪ್ಪ ಜಪ್ತಿ, ದಂಡ
April 21, 2026
7:31 AM
by: ಮಿರರ್‌ ಡೆಸ್ಕ್
ರೈತರಿಗೆ ಗುಡ್ ನ್ಯೂಸ್..! ತೊಗರಿ ಖರೀದಿ ಅವಧಿ ಮೇ 15ರವರೆಗೆ ವಿಸ್ತರಣೆ
April 21, 2026
7:24 AM
by: ಮಿರರ್‌ ಡೆಸ್ಕ್
ವಿಜಯಪುರದಲ್ಲಿ ತಾಪಮಾನ ಹೆಚ್ಚಳ : ಜಿಲ್ಲಾಸ್ಪತ್ರೆಯಲ್ಲಿ 10 ಬೆಡ್ AC ವಾರ್ಡ್ ಸಿದ್ಧ
April 21, 2026
7:21 AM
by: ಮಿರರ್‌ ಡೆಸ್ಕ್
ಕಾವೇರಿ ತೀರ ಅಪಾಯ ಎಚ್ಚರಿಕೆ: ಬಲಮುರಿ-ಎಡಮುರಿ ಪ್ರವಾಸಕ್ಕೆ ತಾತ್ಕಾಲಿಕ ನಿಷೇಧ
April 20, 2026
8:08 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror