(ಕಡತ ಚಿತ್ರ )
ಸುಬ್ರಹ್ಮಣ್ಯ: ಮಂಗಳೂರು ಬೆಂಗಳೂರು ರೈಲು ಮಾರ್ಗದಲ್ಲಿ ಮತ್ತೆ ಹಳಿಯ ಮೇಲೆ ಮಣ್ಣು ಕುಸಿತಗೊಂಡು ಸೋಮವಾರ ಬೆಳಗ್ಗೆ ರೈಲು ಸಂಚಾರದಲ್ಲಿ ಕೊಂಚ ವ್ಯತ್ಯಯವಾಗಿದ್ದು ಬಳಿಕ ಸಂಚಾರ ಸುಗಮಗೊಂಡಿದೆ. ಶಿರಾಡಿ ಘಾಟಿ ಪ್ರದೇಶದಲ್ಲಿ ಪ್ರತೀ ವರ್ಷವೂ ಮಣ್ಣು ಹಳಿಯ ಮೇಲೆ ಕುಸಿತವಾಗಿ ಸಂಚಾರ ಸ್ಥಗಿತಗೊಳ್ಳುತ್ತದೆ. ಈ ಬಾರಿಯೂ ಪುನರಾವರ್ತನೆಯಾಗಿದೆ.
ಸೋಮವಾರ ಬೆಳಗ್ಗೆ ರೈಲು ಹಳಿಯ ಮೇಲೆ ಮಣ್ಣು ಕುಸಿತವಾದ ಮಾಹಿತಿ ಲಭ್ಯವಾದ ತಕ್ಷಣವೇ ತೆರವು ಕಾರ್ಯಾಚರಣೆ ನಡೆದಿದೆ. ಹೀಗಾಗಿ ಯಾವುದೇ ಸಮಸ್ಯೆಯಾಗಲಿಲ್ಲ. ಗೂಡ್ಸ್ ರೈಲು ಸಂಚಾರದಲ್ಲಿ ಕೊಂಚ ವ್ಯತ್ಯಯ ಉಂಟಾಯಿತು.
ಕಳೆದ ವಾರ ಶಿರಾಡಿ ಘಾಟ್ ಮೂಲಕ ರೈಲು ಓಡಾಟಕ್ಕೆ ಮಳೆಗಾಲ ಸುರಕ್ಷಿತವೇ ಎಂದು ರೈಲ್ವೇ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು ಇದೀಗ ಕಳೆದ ಎರಡು ವರ್ಷಗಳಿಂದ ಶಿರಾಡಿ ಘಾಟ್ ರೈಲು ಹಳಿಯ ಕಡೆಗೆ ವಿಶೇಷ ಗಮನ ನೀಡಲಾಗುತ್ತಿದ್ದು ಮಳೆಗಾಲ ಹೆಚ್ಚುವರಿಯಾಗಿ ಸುರಕ್ಷತೆಯ ಕಡೆಗೆ ಗಮನನೀಡಲಾಗುತ್ತಿದೆ. ಮಣ್ಣು ಕುಸಿತದ ಸಂದರ್ಭ ತಕ್ಷಣವೇ ಕಾರ್ಯಾಚರಣೆ ಮಾಡಲು ವಿಶೇಷ ತಂಡ ರಚನೆಯಾಗಿದೆ.
ಇದೀಗ ಶಿರಾಡಿ ಘಾಟ್ ಪ್ರದೇಶದಲ್ಲಿ ಮಳೆ ಹೆಚ್ಚಾಗಿದ್ದು ಮತ್ತೆ ಕುಸಿತದ ಭೀತಿ ಇದೆ.
ಈ ಬಾರಿ ಫೆಬ್ರವರಿ ತಿಂಗಳಲ್ಲಿ ವಾಡಿಕೆಗಿಂತ 2.5 ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿಲು…
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಮತ್ತು ನಿರ್ವಾಹಕರ ಮೇಲೆ ಪ್ರಯಾಣಿಕರು…
ಕೃಷಿ ಹಾಗೂ ರೈತರ ಅಭ್ಯುದಯವೇ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳ ಮೂಲ ಆಶಯವಾಗಿದೆ…
ಏರುತ್ತಿರುವ ತಾಪಮಾನ ಮತ್ತು ಹವಾಮಾನ ಬದಲಾವಣೆಯು ಮುಂದಿನ ಐದು ವರ್ಷಗಳಲ್ಲಿ ಕೃಷಿ ಮೇಲೆ…
ದೇಶಾದ್ಯಂತ ಸ್ಥೂಲಕಾಯದ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ಮಂದಿಯನ್ನು…
ತೀರಾ ಸಣ್ಣ ಮಟ್ಟಿನ ಆದಾಯವನ್ನೂ ಬ್ಯಾಂಕ್ ಖಾತೆಗೆ ಏಕೆ ತುಂಬಬೇಕು..?