ಸುಬ್ರಹ್ಮಣ್ಯ:ಉತ್ತುಂಗದ ಶಿಖರದಲ್ಲಿ ಇರುವವರದು ಒಂದು ದಿನದ ಪರಿಶ್ರಮವಲ್ಲ. ಕಠಿಣ ಅಭ್ಯಾಸ ಮತ್ತು ನಿರಂತರ ಶ್ರಮಗಳಿಂದ ಅವರು ಈ ಸಾಧನೆಯನ್ನು ಮಾಡಿರುತ್ತಾರೆ. ಇದಕ್ಕೆ ಬೇಕಿರುವುದು ಸ್ಪೂರ್ತಿ. ಸ್ಪೂರ್ತಿ ದಾಯಕ ಧಾರಣೆಗಳ ವಿಚಾರಗಳ ಅಳವಡಿಕೆ ಇಂದಿನ ಅಗತ್ಯ ಎಂದು ಬೆಂಗಳೂರು ಹಲಸೂರು ಶ್ರೀ ರಾಮಕೃಷ್ಣ ಆಶ್ರಮದ ಮಹಾದೇವ ಹೇಳಿದರು.
ಸುಬ್ರಹ್ಮಣ್ಯ ಕೆಎಸ್‍ಎಸ್ ಕಾಲೇಜು ಮತ್ತು ಶ್ರೀ ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ ಕೆಎಸ್‍ಎಸ್ ಕಾಲೇಜಿನಲ್ಲಿ ಗುರುವಾರ ನಡೆದ ಜ್ಞಾನ ಯಾತ್ರೆ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ಯಶಸ್ವಿನ ಸಾಧನೆಗೆ ಕಠಿಣ ಅಭ್ಯಾಸ, ಶ್ರಮದ ಅವಶ್ಯಕತೆ ಇದ್ದು ಅದಕ್ಕೆ ಏಕಾಗ್ರತೆ ಹೊಂದುವುದು ತೀರಾ ಅವಶ್ಯಕ ಎಂದರು.
ಕಾಲೇಜು ಪ್ರಾಂಶುಪಾಲ ಪ್ರೊ.ಉದಯಕುಮಾರ್ ಕೆ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಹೊರ ಹೊಮ್ಮಲು ಧ್ಯಾನವೂ ಅಗತ್ಯ ಸಾಧನ ಎಂದರು. ಸಂಸ್ಕೃತ ವಿಭಾಗದ ಮುಖ್ಯಸ್ಥ ಪ್ರೊ.ರಾಮಪ್ರಸಾದ್ ಸ್ವಾಗತಿಸಿ ವಂದಿಸಿದರು. ಭೂಮಿಕ ಕಾರ್ಯಕ್ರಮ ನಿರೂಪಿಸಿದರು.
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…
ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.
ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…