ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರ ಹಿತರಕ್ಷಣಾ ಸಮಿತಿ ಸಭೆ ಶುಕ್ರವಾರ ನಡೆಯಿತು. ಈ ಸಭೆಯಲ್ಲಿ ಉಡುಪಿನಲ್ಲಿ ನಡೆದ ಮಾತುಕತೆಯ ಬಗ್ಗೆ ಭಕ್ತರಿಗೆ ಮಾಹಿತಿ ನಿಡಲಾಯಿತು. ಇದೇ ಸಂದರ್ಭ ಭಕ್ತರ ಸಲಹೆಗಳನ್ನೂ ಸ್ವೀಕರಿಸಲಾಯಿತು.
ಸಭೆಯಲ್ಲಿ 3 ಪ್ರಮುಖ ವಿಷಯಗಳ ಬಗ್ಗೆ ಚರ್ಚೆಯಾಯಿತು , ದೇವಸ್ಥಾನದ ಗಣಪತಿ ಗುಡಿ ಮೊದಲಿದ್ದ ಜಾಗದಲ್ಲೇ ನಿರ್ಮಾಣ ಹಾಗೂ ಸುಬ್ರಹ್ಮಣ್ಯ ಮಠ ಎಂಬ ಹೆಸರು ಹಾಗೂ ಸರ್ಪಸಂಸ್ಕಾರ ಸೇವೆಯ ಬಗ್ಗೆ ಮೊದಲಿದ್ದ ನಿಲುವಿನಲ್ಲಿ ಯಾವುದೇ ಬದಲಾವಣೆ ಮಾಡಬಾರದು ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಪೇಜಾವರ ಶ್ರೀಗಳು ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸುವ ಸಂದರ್ಭ ಆತ್ಮೀಯವಾಗಿ ಸ್ವಾಗತಿಸಿ ಸಂಧಾನ ಸಭೆಯಲ್ಲಿ ತೊಡಗಿಸಕೊಳ್ಳಲು ನಿರ್ಧರಿಸಲಾಯಿತು.
ಇತರ ವಿಷಯಗಳಲ್ಲಿ ರಾಜಿ ಮಾಡಿಕೊಂಡರೂ 3 ಪ್ರಮುಖ ಅಂಶಗಳಲ್ಲಿ ಯಾವುದೇ ರಾಜಿ ಇಲ್ಲ ಎಂದು ನಿರ್ಧರಿಸಲಾಯಿತು.
ಇದೇ ಸಂದರ್ಭ ಅಷ್ಟಮಂಗಲ ಪ್ರಶ್ನೆಯಲ್ಲಿ ನಂಬಿಕೆ ಇಲ್ಲ ಎಂದು ನಿನ್ನೆ ಉಡುಪಿಯಲ್ಲಿ ವಿಹಿಂಪ ಅಧ್ಯಕ್ಷ ಎಂ ಬಿ ಪುರಾಣಿಕ್ ಹೇಳಿರುವುದು ಚರ್ಚೆಗೆ ಕಾರಣವಾಯಿತು.
ಸಭೆಯಲ್ಲಿ ಕುಕ್ಕೆ ಭಕ್ತರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಮಹೇಶ್ ಕುಮಾರ್ ಕರಿಕಳ ಹಾಗೂ ಕಿಶೋರ್ ಶಿರಾಡಿ, ಮೋನಪ್ಪ ಮಾನಾಡು, ಬಾಲಕೃಷ್ಣ ರೈ , ಶಿವರಾಮ ರೈ ಮೊದಲಾದವರು ಉಪಸ್ಥಿತರಿದ್ದರು.
ಮಿಜೋರಾಂನ ಚಾಂಫೈನಲ್ಲಿ ಅಸ್ಸಾಂ ರೈಫಲ್ಸ್ 466 ಚೀಲ ಅಡಿಕೆಯನ್ನು ವಶಕ್ಕೆ ಪಡೆದಿದೆ. ಈ…
ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ ಇರುವ ದೇವಾಲಯಗಳಲ್ಲಿ ಕಡ್ಡಾಯವಾಗಿ ನೀರಿನ ಬಾಟಲ್ ಸೇರಿದಂತೆ ಪ್ಲಾಸ್ಟಿಕ್ …
ಪ್ರತಿ 15 ದಿನಗಳಿಗೊಮ್ಮೆ ಶಾಲೆ ಮತ್ತು ಅಂಗನವಾಡಿಗಳ ಕುಡಿಯುವ ನೀರನ್ನು ಪರೀಕ್ಷೆಗೊಳಪಡಿಸಿ ತಪಾಸಣೆ…
ಬಂಗಾಳಕೊಲ್ಲಿಯ ಆಂದ್ರಾ ಕರಾವಳಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಒಡಿಸ್ಸಾ ಕರಾವಳಿ ತನಕ ಸಾಗಿ,…
ರಾಜ್ಯದಲ್ಲಿ ತೋಟಗಾರಿಕಾ ಬೆಳೆಗಳ ಅಭಿವೃದ್ಧಿಗೆ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು, ತೋಟಗಾರಿಕಾ ಬೆಳೆಗಳಿಗೆ…
ರಾಜ್ಯದ ಕರಾವಳಿಯಲ್ಲಿ ವ್ಯಾಪಕ ಮಳೆಯಾಗಿದೆ. ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಕರಾವಳಿ ಹಾಗೂ ಉತ್ತರ…