Advertisement
ನಮ್ಮೂರ ಸುದ್ದಿ

ಸುಬ್ರಹ್ಮಣ್ಯದಲ್ಲಿ ಮರದ ಕೊಂಬೆ ಬಿದ್ದು ಗಾಯ

Share

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ  ಕೆ ಎಸ್ ಆರ್ ಟಿಸಿ  ಬಸ್ ನಿಲ್ದಾಣದ ಮುಂಭಾಗದ ರಸ್ತೆ ಬದಿ ಖಾಸಗಿ ವಾಹನಗಳು ಪಾರ್ಕಿಂಗ್ ಮಾಡುತ್ತಿರುವ ಸ್ಥಳದಲ್ಲಿದ್ದ ಅಶ್ವತ್ಥ ಮರದ ಕೊಂಬೆ  ಮುರಿದು ಬಿದ್ದು ಬಿಳಿನೆಲೆ ನಿವಾಸಿ ಹರಿಶ್ಚಂದ್ರ ಎಂಬವರು  ಗಾಯಗೊಂಡ ಘಟನೆ ಮಂಗಳವಾರ ಸಂಜೆ ನಡೆದಿದೆ.

ಹರಿಶ್ಚಂದ್ರ ಅವರು ಕೆಲಸ ಮುಗಿಸಿ ಮನೆಗೆ ತೆರಳಲೆಂದು ಖಾಸಗಿ ವಾಹನ ನಿಲುಗಡೆಯ ಮರದ ಕೆಳಗೆ ವಾಹನಕ್ಕೆ ಕಾದು ನಿಂತಿದ್ದರು . ಇದೇ ವೇಳೆ ಮರದ ಕೊಂಬೆ ತುಂಡಾಗಿ  ಬಿದ್ದು ಗಾಯಗೊಂಡಿದ್ದಾರೆ. ತಲೆಗೆ ಹಾಗು ಎಡ ಭುಜಕ್ಕೆ ತೀವ್ರಸ್ವರೂಪದ ಗಾಯಗಳಾಗಿದೆ. ಗಾಯಾಳುವನ್ನು ತಕ್ಷಣ   ಆಂಬುಲೆನ್ಸ್ ವಾಹನದ ಮೂಲಕ ನಿಟ್ಟೆ ಸದಾನಂದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮರದ ಬುಡದಲ್ಲಿ ಅನೇಕ ಮಂದಿ ಇದ್ದು ಕೊಂಬೆ ಮುರಿಯುವ ಶಬ್ಧ ಕೇಳಿ ಅವರೆಲ್ಲರು ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

2026 ಜೂನ್‌ನಲ್ಲಿ ಭಾರತದಲ್ಲಿ ಸಾಮಾನ್ಯ ಮುಂಗಾರು ಮುನ್ಸೂಚನೆ | ಪಶ್ಚಿಮ ಘಟ್ಟ-ಕರಾವಳಿ ಭಾಗದಲ್ಲಿ ಭಾರೀ ಮಳೆ ಸಾಧ್ಯತೆ

2026ರ ಮುಂಗಾರು ಸಾಮಾನ್ಯವಾಗಿ ಆರಂಭವಾದರೂ ನಂತರ ಮಳೆಯ ಕೊರತೆ ಸಂಭವಿಸಬಹುದು. ಎಲ್‌ನಿನೋ ಪರಿಣಾಮದಿಂದ…

5 hours ago

ಹವಾಮಾನ ವರದಿ | 12-04-2026 | ಬಿಸಿಲಿನ ತಾಪ ಹೆಚ್ಚಳದ ನಡುವೆ ಮಳೆಯ ನಿರೀಕ್ಷೆ| ಎಪ್ರಿಲ್ 15 ನಂತರ ಗುಡುಗು ಮಳೆ ಸಾಧ್ಯತೆ

ಕರ್ನಾಟಕದಲ್ಲಿ ಇನ್ನೂ ಕೆಲ ದಿನಗಳು ಬಿಸಿಲು ತಾಪಮಾನ ಹೆಚ್ಚಾಗಿದ್ದು, ತುಂತುರು ಮಳೆ ಮಾತ್ರ…

5 hours ago

ಹವಾಮಾನ ವರದಿ | 11-04-2026 | ದಕ್ಷಿಣದಲ್ಲಿ ಮಳೆ, ಉತ್ತರದಲ್ಲಿ ಬಿಸಿ… ಮುಂದೇನು?

ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಮಳೆ ಚಟುವಟಿಕೆ ಆರಂಭವಾಗಿದೆ. ಏಪ್ರಿಲ್ 15…

1 day ago

ಜನನ-ಮರಣ ನೋಂದಣಿ 21 ದಿನಗಳೊಳಗೆ ಕಡ್ಡಾಯ ನೋಂದಣಿ – ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ

ಜನನ-ಮರಣ ಘಟನೆಗಳನ್ನು 21 ದಿನಗಳೊಳಗೆ ಕಡ್ಡಾಯವಾಗಿ ನೋಂದಣಿ ಮಾಡಬೇಕು ಎಂದು ಸೂಚನೆ.

2 days ago

ಹವಾಮಾನ ವರದಿ | 10-04-2026 | ಕರ್ನಾಟಕ ಹವಾಮಾನ ಅಪ್ಡೇಟ್‌- ಎಪ್ರಿಲ್ 15 ನಂತರ ಮಳೆ …! ಬಿಸಿಲಿನ ಬಿಸಿ ಮುಂದುವರಿಕೆ

ರಾಜ್ಯದಲ್ಲಿ ಬಿಸಿಲಿನ ತಾಪ ಹೆಚ್ಚಾಗಿ ಮುಂದುವರಿಯುತ್ತಿದ್ದು, ಮಳೆಯ ಚಟುವಟಿಕೆ ಕಡಿಮೆಯಾಗಿದೆ. ಏಪ್ರಿಲ್ 15…

2 days ago

ಹವಾಮಾನ ವರದಿ | 09-04-2026 | ಕರ್ನಾಟಕದಲ್ಲಿ ಮಳೆ ಸಾಧ್ಯತೆ | ಕರಾವಳಿ–ಮಲೆನಾಡಿನಲ್ಲಿ ಗುಡುಗು ಮಳೆ ಎಚ್ಚರಿಕೆ..!

ರಾಜ್ಯದಲ್ಲಿ ಇಂದಿನಿಂದ ಮಳೆಯ ಚಟುವಟಿಕೆ ಮತ್ತೆ ಆರಂಭವಾಗಲಿದೆ. ಕರಾವಳಿ ಮತ್ತು ಮಲೆನಾಡಿನಲ್ಲಿ ಗುಡುಗು…

3 days ago