ಸುಬ್ರಹ್ಮಣ್ಯ: ಅಖಿಲ ಭಾರತ ಅಯ್ಯಪ್ಪ ಸೇವಾ ಸಂಘ ಸುಬ್ರಹ್ಮಣ್ಯ ಇದರ ಆಶ್ರಯದಲ್ಲಿ ನಡೆಯುವ 13ನೇ ವರ್ಷದ ಅಯ್ಯಪ್ಪ ದೀಪೋತ್ಸವ ಸಮಿತಿಯ ಅಧ್ಯಕ್ಷರಾಗಿ ಪತ್ರಿಕಾ ಛಾಯಾಗ್ರಾಹಕ ಹಾಗೂ ಪತ್ರಕರ್ತ ಲೋಕೇಶ್ ಬಿ.ಎನ್ ಆಯ್ಕೆಯಾಗಿದ್ದಾರೆ.
ಪ್ರಧಾನ ಕಾರ್ಯದರ್ಶಿಯಾಗಿ ಉಮೇಶ್.ಜೆ ನೇಮಕಗೊಂಡಿದ್ದಾರೆ. ಸೇವಾ ಸಂಘದ ಅಧ್ಯಕ್ಷ ಉಮೇಶ್ ಕೆ.ಎನ್ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ನೇಮಕ ನಡೆಯಿತು. ಸಮಿತಿಯ ನಿಕಟಪೂರ್ವ ಅಧ್ಯಕ್ಷ ಪ್ರಭಾಕರ ಪಡ್ರೆ, ಚಿದಾನಂದ ಗುರುಸ್ವಾಮಿ ಉಪಸ್ಥಿತರಿದ್ದರು.
ಜಯರಾಮ ನೂಚಿಲ, ಭರತ್ ನೆಕ್ರಾಜೆ, ಜಯರಾಮ ಎಚ್.ಎಲ್, ದೀಪಕ್ ನಂಬಿಯಾರ್ (ಉಪಾಧ್ಯಕ್ಷರು), ಪ್ರಸನ್ನ ನೂಚಿಲ(ಕಾರ್ಯದರ್ಶಿ), ಗಣೇಶ್ ಎಚ್.ಎಲ್ (ಪ್ರಧಾನ ಕೋಶಾಧಿಕಾರಿ), ರತ್ನಾಕರ.ಎಸ್(ಕೋಶಾಧಿಕಾರಿ), ಚರಣ್ ಕಾನಡ್ಕ, ದಿನೇಶ್ ಮೊಗ್ರ(ಜತೆ ಕಾರ್ಯದರ್ಶಿಗಳು), ಲೋಕೇಶ್ ಎಂ.ಆರ್, ಉದಯ ನೂಚಿಲ, ಮಣಿ ಸ್ವಾಮಿ, ಮನೋಜ್ ಕೈಕಂಬ(ಸಂಚಾಲಕರು), ಮಹೇಶ್ ದೇವರಗದ್ದೆ, ಸಂಕೇತ್ ಸ್ವಾಮಿ, ಶೋಭಿತ್ ಸ್ವಾಮಿ(ಉಪ ಕೋಶಾಧಿಕಾರಿಗಳು), ರವಿ ಕಕ್ಕೆಪದವು, ಮೋನಪ್ಪ.ಡಿ, ವೆಂಕಟೇಶ್ ಎಚ್.ಎಲ್ (ಪ್ರಧಾನ ಸಂಚಾಲಕರು) ನೇಮಕಗೊಂಡರು. ಉಳಿದಂತೆ ಬಾಲಕೃಷ್ಣ ಬಿಳಿನೆಲೆ, ದೇವಿದಾಸ್ ಹರಿಹರ, ಹೇಮಂತ್, ದಿನೇಶ್, ಗುರುಪ್ರಸಾದ್, ಹರಿಪ್ರಸಾದ್, ಯಶೋಧರ ದೋಣಿಮನೆ, ದಯಾನಂದ ದೋಣಿಮನೆ, ಯತೀಶ್, ಪದ್ಮನಾಭ, ರಾಜಶೇಖರ ರೈ, ವೀರಭದ್ರ, ಪ್ರಕಾಶ್, ಗುರು, ಉಲ್ಲಾಸ್ ಅವರನ್ನು ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…