ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಸಂಪುಟ ನರಸಿಂಹ ಸ್ವಾಮಿ ಮಠದ ನಡುವೆ ಕಳೆದ ಕೆಲವು ಸಮಯಗಳಿಂದ ಚರ್ಚೆ, ವಿವಾದ, ಮಾತುಕತೆಗಳು ನಡೆಯುತ್ತಿವೆ. ಕಾರಣ ಸರ್ಪಸಂಸ್ಕಾರ ಸೇವೆ.
ಈ ವಿವಾದ ತೀವ್ರ ಸ್ವರೂಪ ಪಡೆಯುವ ವೇಳೆ ವಿಶ್ವ ಹಿಂದೂ ಪರಿಷದ್ ಪ್ರವೇಶ ಪಡೆದು ರಾಜಿಯಲ್ಲಿ ಮುಗಿಸುವ ಹಂತಕ್ಕೆ ಬಂದಾಗ ಜಿಲ್ಲಾ ವಿಶ್ವಹಿಂದೂ ಪರಿಷದ್ ಮಠದ ಪರವಾಗಿ ನಿಂತು ಮಾತುಕತೆ ನಡೆಸಿತು.
ಇದೀಗ ಕುಕ್ಕೆ ಸುಬ್ರಹ್ಮಣ್ಯದ ಸ್ಥಾನೀಯ ವಿಶ್ವಹಿಂದೂ ಪರಿಷದ್ ಮುಖಂಡರು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪರವಾಗಿ ನಿಂತು ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡಿದ್ದಾರೆ ಮಾತ್ರವಲ್ಲ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಸಂಘಪರಿವಾರದಲ್ಲಿ ಗುರುತಿಸಿಕೊಂಡಿದ್ದ ಕಿಶೋರ್ ಶಿರಾಡಿ ದೇವಸ್ಥಾನ ಪರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.
ಇಷ್ಟೆಲ್ಲಾ ವಿವಾದವಾದಾಗಲೂ ಸಂಘ ಪರಿವಾರದ ಹಿರಿಯರು ಮಧ್ಯಸ್ಥಿಕೆಗೆ ಮುಂದಾಗಲಿಲ್ಲ. ಆದರೆ ವಿ ಹಿಂ ಪ ಮಾತ್ರಾ ಸ್ಥಳೀಯ ಘಟಕ ಹಾಗೂ ಜಿಲ್ಲಾ ಘಟಕದ ನಡುವೆ ಅಭಿಪ್ರಾಯ ವ್ಯತ್ಯಾಸ ಇರುವುದು ಸ್ಟಷ್ಟವಾಗಿದೆ.
ಕಳೆದ ಕೆಲವು ಸಮಯಗಳಿಂದ ಸಂಘ ಪರಿವಾರದ ನಿಲುವಿನಲ್ಲಿ ವ್ಯತ್ಯಾಸ ಕಾಣುತ್ತಿದೆ. ಜಾತಿ ರಹಿತ, ಹಿಂದೂ ಸಮಾಜ ಎನ್ನುವ ಸಿದ್ಧಾಂತ ಈಗ ದೂರವಾಗುತ್ತಿದೆಯೇ ಎಂಬ ಪ್ರಶ್ನೆ ಕಾರ್ಯಕರ್ತರಲ್ಲಿ ಮೂಡಿದೆ. ಸುಬ್ರಹ್ಮಣ್ಯದ ವಿಚಾರದಲ್ಲೂ ಮಠದ ಪರವಾಗಿ ವಿ ಹಿಂ ಪ ಜಿಲ್ಲಾ ಸಮಿತಿ ಮಾತನಾಡಿದರೆ ಸ್ಥಳೀಯ ವಿ ಹಿಂಪ ದೇವಸ್ಥಾನದ ಪರವಾಗಿ ಮಾತನಾಡಲು ಕಾರಣವೇನು ? ಎಂಬುದು ಸಾಮಾನ್ಯ ಕಾರ್ಯಕರ್ತರಲ್ಲೂ ಚಿಂತನೆಗೆ ಕಾರಣವಾಗುತ್ತದೆ.
ದಕ್ಷಿಣ ಕನ್ನಡದಲ್ಲಿ ಸಂಘ ಪರಿವಾರದ ಇತ್ತೀಚೆಗಿನ ನಡೆಗಳು ತೀವ್ರ ಚರ್ಚೆಗೆ ಕಾರಣವಾಗುತ್ತಿದೆ. ಒಂದು ಸಮುದಾಯದ ಕಡೆಗೆ ಓಲೈಕೆ, ಕೆಲವು ನಿರ್ಧಾರಗಳಲ್ಲಿ ತಾರತಮ್ಯ ಸೇರಿದಂತೆ ವಿವಿಧ ಘಟನೆಗಳ ಬಗ್ಗೆ ಈಗ ಚರ್ಚೆಯಾಗುತ್ತಿದೆ. ಕೆಲವು ಸಮಯದ ಹಿಂದೆ ಡಿ ಸಿ ಸಿ ಬ್ಯಾಂಕ್ ಚುನಾವಣೆಯ ಸಂದರ್ಭ ನಡೆದ ಅಡ್ಡ ಮತದಾನ , ಈ ಸಂದರ್ಭ ಸಹಕಾರ ಭಾರತಿ ನಡೆ, ಸಂಘ ಪರಿವಾರದ ನಿರ್ಧಾರಗಳು, ಚುನಾವಣೆಯ ಸಂದರ್ಭ ಬಿಜೆಪಿ ನಡೆ ಇದರಲ್ಲೂ ಸಂಘ ಪರಿವಾರದ ನಡೆಗಳು ಚರ್ಚೆಗೆ ಕಾರಣವಾದರೆ ಇಂತಹ ಹಲವು ಸಂಗತಿಗಳು ಈಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚರ್ಚೆಗೆ ಕಾರಣವಾಗುತ್ತಿದೆ. ಈಗ ಅದೇ ಸಾಲಿಗೆ ಕುಕ್ಕೆ ಸುಬ್ರಹ್ಮಣ್ಯದ ವಿವಾದವೂ ಸೇರಿಕೊಂಡಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮೇಘಾಲಯಕ್ಕೆ ಭೇಟಿ ನೀಡಿದ ಸಂದರ್ಭ ಹಲಸಿನ…
ವ್ಯಾಪಾರದ ಯಶಸ್ಸು ಒಂದು ಕಾಲದಿಂದ ಇನ್ನೊಂದು ಕಾಲಕ್ಕೆ ಬದಲಾಗುತ್ತದೆ, ಮತ್ತು ಜ್ಯೋತಿಷ್ಯ ಶಾಸ್ತ್ರದ…
ಭಾರತೀಯ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಮತ್ತು ಇತರ ಮೂವರು ಸಿಬ್ಬಂದಿಯನ್ನು…
ಸಾಮಾಜಿಕ ವ್ಯವಸ್ಥೆಯಲ್ಲಿ ‘ಸೇವೆ’ಗೆ ಮೌಲ್ಯ ನಿರ್ಧರಿಸಲು ಕಷ್ಟಸಾಧ್ಯ. ಆತ್ಮಾರ್ಥ ಸೇವೆಗಳು ಸದ್ದಾಗುವುದಿಲ್ಲ. ಫಕ್ಕನೆ…
15.07.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…
ಧಾತ್ರಿ ಕೆ ರಾವ್ , 7ನೇ ತರಗತಿ ಶ್ರೀ ಅನ್ನಪೂರ್ಣೇಶ್ವರಿ ವಿದ್ಯಾಮಂದಿರ, ನಿಲುವಾಗಿಲು,…