ಸುಬ್ರಹ್ಮಣ್ಯ: ನೂತನ ಬ್ರಹ್ಮರಥ ಆಗಮನದ ವೇಳೆ ಸುಬ್ರಹ್ಮಣ್ಯ ಶ್ರೀಗಳಿಗೆ ಆಹ್ವಾನದ ಚರ್ಚೆ..!

September 18, 2019
11:00 AM

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯಕ್ಕೆ ನೂತನ ಬ್ರಹ್ಮರಥವು ಅ.2 ರಂದು ತಲುಪಲಿದೆ. ಈ ಸಂದರ್ಭ ಸುಬ್ರಹ್ಮಣ್ಯದ ಸಂಪುಟ ನರಸಿಂಹ ಸ್ವಾಮಿ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರಿಗೆ ಆಹ್ವಾನ ಇದೆಯೋ ಇಲ್ಲವೋ ಎಂಬ ಚರ್ಚೆ ಈಗ ಸಾಮಾಜಿಕ ಜಾಲತಾಣದಲ್ಲಿ ಕಂಡುಬರುತ್ತಿದೆ. ಕಳೆದ ಎರಡು ದಿನಗಳಿಂದ ಈ ಚರ್ಚೆ ನಡೆಯುತ್ತಿದೆ.

Advertisement
Advertisement
Advertisement

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ದಾನಿಗಳಿಂದ ಹಾಗೂ ಭಕ್ತರಿಂದ ನೂತನ ಬ್ರಹ್ಮರಥ ಸಮರ್ಪಣೆಯಾಗಲಿದೆ. ಈಗಾಗಲೇ ಕೋಟೇಶ್ವರದಲ್ಲಿ  ನೂತನ ಬ್ರಹ್ಮರಥ ನಿರ್ಮಾಣಗೊಂಡು ಸೆ.30 ರಂದು ಕೋಟೇಶ್ವರದಿಂದ ರಥ ಹೊರಡಲಿದ್ದು ಅ.2 ರಂದು ಕುಕ್ಕೆ ಸುಬ್ರಹ್ಮಣ್ಯಕ್ಕೆ ತಲುಪಲಿದೆ. ಇದಕ್ಕಾಗಿ ಈಗಾಗಲೇ ಪೂರ್ವಬಾವಿ ಸಭೆಯೂ ನಡೆದಿದೆ. ಅದ್ದೂರಿಯಾಗಿ ಸ್ವಾಗತ ಮಾಡಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಆದರೆ ಇದೀಗ ಚರ್ಚೆಯಾಗುತ್ತಿರುವುದು  ಸಂಪುಟ ನರಸಿಂಹ ಸ್ವಾಮಿ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರಿಗೆ ಆಹ್ವಾನ ಇದೆಯೋ ಇಲ್ಲವೋ ಎಂಬ ಬಗ್ಗೆ. ಧಾರ್ಮಿಕವಾಗಿ ಸ್ವಾಮೀಜಿಗಳಿಗೆ ಆದ್ಯತೆ ನೀಡಲಾಗುತ್ತದೆಯಾದರೂ ಸುಬ್ರಹ್ಮಣ್ಯದಲ್ಲಿ ಈ ಬಗ್ಗೆ ಯಾವ ನಿರ್ಧಾರಗಳಾಗುತ್ತವೆ ಎಂಬುದು ಚರ್ಚೆಯ ವಿಷಯವಾಗಿದೆ.

Advertisement

ಕಳೆದ ಹಲವಾರು ಸಮಯಗಳಿಂದ ದೇವಸ್ಥಾನದ ಭಕ್ತರು ಹಾಗೂ ಸಂಪುಟ ನರಸಿಂಹ ಮಠದ ನಡುವೆ ಸರ್ಪಸಂಸ್ಕಾರದ ಕಾರಣಕ್ಕಾಗಿ ಚರ್ಚೆ, ವಾದಗಳು ನಡೆಯುತ್ತಿದ್ದವು. ಈ ಕಾರಣದಿಂದ ನ್ಯಾಯಾಲಯದಿಂದ ನೋಟೀಸ್ ಜಾರಿ, ಪೊಲೀಸ್ ಠಾಣೆಯಲ್ಲಿ ಕೇಸು ಇತ್ಯಾದಿಗಳು ನಡೆದಿತ್ತು. ಹೀಗಾಗಿ ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ.

Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಭಾರತದಲ್ಲಿ ಸಮುದ್ರ ಜಲಕೃಷಿ ಚಟುವಟಿಕೆ ಉತ್ತೇಜನ | ಸಮುದ್ರ ಮೀನಿನ ಕೃಷಿಯಲ್ಲಿ ಹೊಸ ಸಾಧನೆ ಮಾಡಿದ ಸಿಎಂಎಫ್​ಆರ್​ಐ
April 24, 2024
9:33 PM
by: The Rural Mirror ಸುದ್ದಿಜಾಲ
ಪ್ಯಾರೀಸ್‌ನಲ್ಲಿ ಕ್ರೀಡೆಗಳ ಮಹಾಸಂಗಮ ಒಲಿಂಪಿಕ್ಸ್‌ಗೆ ಕೆಲವೇ ದಿನ ಬಾಕಿ | ಕೈಬೀಸಿ ಕರೆಯುತ್ತಿದೆ ಪ್ಯಾರಿಸ್‌ | ಒಲಿಂಪಿಕ್ಸ್‌ನಲ್ಲಿರಲಿದೆ ನೂರಾರು ವಿಶೇಷ
April 24, 2024
9:02 PM
by: The Rural Mirror ಸುದ್ದಿಜಾಲ
ಹೊಸ ಬೆಳೆ | ರೈತರು ಚಿಂತನೆ ಮಾಡಬೇಕಾದ್ದೇನು…? ಕರಾವಳಿ, ಮಲೆನಾಡಿನಲ್ಲಿ ಉತ್ಪತ್ತಿ ನೀಡುವ “ಪರ್ಯಾಯ ಬೆಳೆಯ ಅಗತ್ಯವಿದೆ” |
April 24, 2024
2:57 PM
by: ಪ್ರಬಂಧ ಅಂಬುತೀರ್ಥ
ಪ್ಯಾಕೆಟ್ ಹಿಟ್ಟು ಆರೋಗ್ಯಕ್ಕೆ ಒಳ್ಳೆಯದೆ ಅಥವಾ ಹಾನಿಕರವೇ? ಪ್ಯಾಕೆಟ್ ಹಿಟ್ಟು ಉಪಯೋಗಿಸಿದರೆ ಏನಾಗುತ್ತದೆ ತಿಳಿದುಕೊಳ್ಳಿ..
April 24, 2024
2:32 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror