ಸುಬ್ರಹ್ಮಣ್ಯ: ಮರದ ಗೆಲ್ಲು ಕಡಿಯುವಾಗ ಹಗ್ಗ ಸಿಕ್ಕಿಹಾಕಿಕೊಂಡು ಯುವಕನೋರ್ವ ಮರದಲ್ಲೇ ಮೃತಪಟ್ಟ ಘಟನೆ ಗುರುವಾರ ಸುಬ್ರಹ್ಮಣ್ಯ ಬಳಿಯ ನೂಚಿಲದಲ್ಲಿ ನಡೆದಿದೆ.
ಸುನಿಲ್ ಅರಂಪಾಡಿ ಘಟನೆಯಲ್ಲಿ ಮೃತಪಟ್ಟ ದುರ್ದೈವಿ. ನೂಚಿಲ ಎಂಬಲ್ಲಿ ಜಯರಾಮ ರಾವ್ ಮನೆ ಎದುರಿನ ಗುಡ್ಡದಲ್ಲಿರುವ ಮರದ ಕೊಂಬೆಯನ್ನು ಕಡಿದು ಉರುಳಿಸುತ್ತಿದ್ದ ವೇಳೆ ಮರದ ತುದಿಯಲ್ಲಿರುವ ಕೊಂಬೆಯಲ್ಲಿ ಹಗ್ಗ ಸಹಿತ ಸಿಕ್ಕಿಹಾಕಿಕೊಂಡು ಪ್ರಾಣ ಕಳೆದುಕೊಂಡಿದ್ದಾರೆ.
ಸ್ಥಳೀಯರಿಂದ ಬೃಹತ್ ಮರದಿಂದ ಮೃತದೇಹವನ್ನು ಇಳಿಸುವ ವ್ಯವಸ್ಥೆ ಮಾಡಲಾಗಿದೆ. ಸ್ಥಳಕ್ಕೆ ಸುಬ್ರಹ್ಮಣ್ಯ ಠಾಣಾ ಪೊಲೀಸರು ಆಗಮಿಸಿದ್ದಾರೆ.
ಯಾವುದೇ ಬ್ಯಾಂಕು ಅಥವಾ ಸಹಕಾರಿ ಸಂಸ್ಥೆ ರೈತನಿಗೆ ಬೇಕಾಬಿಟ್ಟಿಯಾಗಿ ಅಲ್ಪಾವಧಿ ಬೆಳೆ ಸಾಲ…
ಆರ್ಥಿಕತೆಯ ಬಗ್ಗೆ ಸಮರ್ಥವಾಗಿ ವಿಷಯ ಮಂಡಿಸಬಲ್ಲ ಕೃಷಿಕ, ಸಾಮಾಜಿಕ ಮುಖಂಡ ವಿಶ್ವೇಶ್ವರ ಭಟ್…
ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ಮಲೆನಾಡಿನ ಗ್ರಾಮೀಣ ಭಾಗಕ್ಕೂ ಶುದ್ಧವಾಗಿರುವ ಕುಡಿಯುವ…
ದೇಶಾದ್ಯಂತ ನಗರೀಕರಣ ಬೆಳವಣಿಗೆಯಾದಂತೆ ಸಮುದಾಯದ ಸ್ಥಳಗಳು ಕಣ್ಮರೆಯಾಗಿವೆ. ಕರಾವಳಿ ನಗರದಾದ್ಯಂತ ಸುಮಾರು 250…
ರಾಜ್ಯದ ಕಾಡಂಚಿನ ಪ್ರದೇಶದಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಸರ್ಕಾರ…