ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಸಂಪುಟ ನರಸಿಂಹ ಸ್ವಾಮಿ ಮಠದ ನಡುವಿನ ವಿವಾದ ಬಗೆಹರಿಸಲು ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಅವರು ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ ಸಂದರ್ಭ ಜಿಲ್ಲೆಯಿಂದ ವಿಹಿಂಪ ಮುಖಂಡರು ಹಾಗೂ ಬಜರಂಗದಳ ಮುಖಂಡರು ಆಗಮಿಸಿದರೂ ಸ್ಥಳೀಯ ವಿಹಿಂಪ ಮುಖಂಡರು ಹಾಗೂ ಸುಳ್ಯ ತಾಲೂಕಿನ ವಿಹಿಂಪ ಮುಖಂಡರೂ ಸಭೆಯಲ್ಲಿ ಇರಲಿಲ್ಲ. ಈ ಹಿಂದೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನನದ ಆಡಳಿತವನ್ನೂ ಸಂಘಪರಿವಾರ ವಹಿಸಿಕೊಂಡಿತ್ತು. ಆಗಲೂ ಸರ್ಪಸಂಸ್ಕಾರ ಸೇರಿದಂತೆ ವಿವಿಧ ಚರ್ಚೆಗಳು ನಡೆಯುತ್ತಿತ್ತು. ಇದೀಗ ಹಿಂದೂ ಸಮಾಜದ ಪ್ರಮುಖ ಹಾಗೂ ಪ್ರಭಾವಿ ಸ್ವಾಮೀಜಿಗಳಾದ ಪೇಜಾವರ ಶ್ರೀಗಳು ಆಗಮಿಸಿದ ಸಂದರ್ಭ ಈ ಹಿಂದಿನ ಆಡಳಿತ ಸಮಿತಿ ಸದಸ್ಯ ಕಿಶೋರ್ ಶಿರಾಡಿ ಹೊರತುಪಡಿಸಿ ಉಳಿದ ಯಾರೊಬ್ಬರೂ ಕಂಡುಬಂದಿರಲಿಲ್ಲ. ಈ ಬಗ್ಗೆ ತಾಲೂಕಿನ ವಿಹಿಂಪ ಮುಖಂಡರು ಈ ಬಗ್ಗೆ ನಮಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಸ್ಥಳೀಯ ವಿಹಿಂಪ ಮುಖಂಡರೂ ಸಭೆಯಲ್ಲಿ ಕಾಣಿಸಲಿಲ್ಲ.
ಈ ಹಿಂದೆ ದೇವಸ್ಥಾನದ ಪರವಾಗಿ ಮಾತನಾಡಿದ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಕಿಶೋರ್ ಶಿರಾಡಿ ಅವರನ್ನು ಬಿಜೆಪಿಯ ಹಾಗೂ ಸಂಘಪರಿವಾರದ ಎಲ್ಲಾ ಹುದ್ದೆಯಿಂದ ವಜಾ ಮಾಡಲಾಗಿತ್ತು. ದೇವಸ್ಥಾನ ಹಾಗೂ ಮಠ ಎರಡೂ ಸಮಾಜ ಎಂದು ಸಂಘ ಪರಿವಾರ ಸೂಚಿಸಿದ ಹಿನ್ನೆಲೆಯಲ್ಲಿ ಕಿಶೋರ್ ಶಿರಾಡಿ ಅವರ ಹುದ್ದೆಯಿಂದ ವಜಾ ಮಾಡಲಾಗಿತ್ತು. ಆದರೆ ವಿಶ್ವ ಹಿಂದೂ ಪರಿಷದ್ ಸಂಘಪರಿವಾರದ ಧಾರ್ಮಿಕ ಸಂಘಟನೆಯಾಗಿ ಸ್ಥಳೀಯ ಘಟಕಗಳಿಗೆ, ತಾಲೂಕು ಘಟಕಗಳಿಗೆ ಸಹಿತ ಯಾರಿಗೂ ಮಾಹಿತಿ ನೀಡದೆ ಮಠದ ಪರವಾಗಿ ಮಾತನಾಡಿರುವುದು ಸರಿಯೇ ಕಿಶೋರ್ ಶಿರಾಡಿ ಅಭಿಮಾನಿ ಬಳಗ ಅಸಮಾಧಾನ ವ್ಯಕ್ತಪಡಿಸುತ್ತದೆ.
ಅರಬ್ಬಿ ಸಮುದ್ರದ ದಕ್ಷಿಣ ಭಾಗದಲ್ಲಿ ಮುಂಗಾರು ದುರ್ಬಲಗೊಳ್ಳುವ ಲಕ್ಷಣಗಳಿವೆ. ಇದರಿಂದ ಜುಲೈ ತಿಂಗಳ…
ಮುಂದಿನ 24 ಗಂಟೆಗಳಲ್ಲಿ ದೆಹಲಿಯನ್ನು ಮುಂಗಾರು ಆವರಿಸುವ ಸಾಧ್ಯತೆಯಿದೆ. ಎರಡು ದಿನಗಳ ಹಿಂದೆ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಬಲಿತ ಹಲಸಿನ ಕಾಯಿ ಬ್ರೇಡ್ ರೋಲ್ : ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ…
ಪರಿಸರಕ್ಕೆ ಸಂಬಂಧಿಸಿದ ವಿವಿಧ ವಿಷಯಗಳಲ್ಲಿ ಸರ್ಕಾರ ಬೇಜಾವಾಬ್ದಾರಿ ತೋರಿದೆ ಎಂದು ಲೇಖಕ ಅರವಿಂದ್…
ಕಣ್ಣೂರು-ಬೆಂಗಳೂರು ರೈಲು ತಡವಾಗಿ ಆಗಮಿಸುತ್ತಿದ್ದು ರೈಲು ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿದೆ. ಹೀಗಾಗಿ ತಕ್ಷಣವೇ ಇಲಾಖೆ…