ಸುಬ್ರಹ್ಮಣ್ಯ: ಸಂಪುಟ ಶ್ರೀನರಸಿಂಹ ಸ್ವಾಮಿ ಮಠದಲ್ಲಿ ಶ್ರೀಗಳ 23 ನೇ ಚಾತುರ್ಮಾಸ್ಯ ವ್ರತಾಚರಣೆ ಪ್ರಯುಕ್ತ ಅನಿರುದ್ಧ ವೇದಿಕೆಯಲ್ಲಿ ಆರಂಭಗೊಂಡ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಉದ್ಘಾಟನೆ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಸಂಪುಟ ಶ್ರೀ ನರಸಿಂಹ ಸ್ವಾಮಿ ಮಠದ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನ ತಿರ್ಥ ಶ್ರೀಗಳು, ಕಲಿಯುಗದಲ್ಲಿ ಶ್ರೀಕೃಷ್ಣನ ಆರಾಧನೆ ಮಾಡಿದಲ್ಲಿ ಬೇಗ ಅನುಗ್ರಹ ಪ್ರಾಪ್ತಿಯಾಗುತ್ತದೆ. ಶ್ರೀ ಕೃಷ್ಣನ ಉಪಾಸನೆಗೆ ಅನಂತ ಅನುಗ್ರಹವಿದೆ ಎಂದು ಹೇಳಿದರು.
ಚಾತುರ್ಮಾಸವು ಧಾರ್ಮಿಕ ಆಧ್ಯಾತ್ಮಿಕ ಮಹತ್ವದ ಆಚರಣೆಯೆ ಆಗಿದೆ. ಮಹತ್ವ ಅರಿತು ಸನ್ಮಾರ್ಗದಲ್ಲಿ ನಡೆಯಲು ಸರ್ವಶಕ್ತನಾದ ಭಗವಂತನ ಅನುಗ್ರಹ ಪ್ರಾಪ್ತಿಗಾಗಿ ಈ ವ್ರತವನ್ನು ಆಚರಿಸಲಾಗುತ್ತದೆ ಎಂದರು.
ಆರಂಭದಲ್ಲಿ ಸ್ಥಳೀಯ ಕಲಾವಿದರಿಂದ ವಾದ್ಯ ಸಂಗೀತ ಹಾಗೂ ಮಂಗಳ ವಾದ್ಯ ನಡೆಯಿತು. ಬಳಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿಶೇಷ ಕೃಷ್ಣಗಾನಾಮೃತವು ಸ್ಥಳೀಯ ಕಲಾವಿದರುಗಳಿಂದ ನೆರವೇರಿತು. ಕಲಾವಿದ ಯಜ್ಞೇಶ್ ಆಚಾರ್, ರವೀಂದ್ರ ನೂಚಿಲ ಕಾರ್ಯಕ್ರಮ ನಿರ್ವಹಿಸಿದರು.
ಆ.24ರಂದು ಯತಿಗಳಿಂದ ಪ್ರವಚನ ನಡೆಯಿತು. ಸಂಜೆ 5.30 ರಿಂದ ಧಾರ್ಮಿಕ ಆಚರಣೆಗಳಲ್ಲಿ ಸುಧಾರಣೆ ಅನಿವಾರ್ಯವೇ? ಎಂಬ ಕುರಿತು ಚಿಂತನ-ಮಂಥನ ಕಾರ್ಯಕ್ರಮ ನಡೆಯಿತು. ಚಿಂತನ ಮಂಥನದ ಸಮನ್ವಯಕಾರರಾಗಿ ಪುತ್ತೂರು ವಿವೇಕಾನಂದ ಕಾಲೇಜಇನ ಉಪನ್ಯಾಸಕ ಡಾ.ಶ್ರೀಶ ಕುಮಾರ್ ಭಾಗವಹಿಸಿದ್ದರು. ಸಂವಾದಕರಾಗಿ ರಾಜ್ಯ ಸಂಪನ್ಮೂಲ ವ್ಯಕ್ತಿ, ಪ್ರಕಾಶ್ ಮೂಡಿತ್ತಾಯ, ಉಪನ್ಯಾಸಕ ರಾಕೇಶ್ ಕುಮಾರ್ ಕಮ್ಮಾಜೆ, ವೆಂಕಟ್ರಾಂ ಭಟ್ ಭಾಗವಹಿಸಿದ್ದರು.
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು…
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…
ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.