(ಕಡತ ಚಿತ್ರ )
ನೆಟ್ಟಣ: ಮಂಗಳೂರು-ಬೆಂಗಳೂರು ನಡುವಿನ ರೈಲು ಮಾರ್ಗದಲ್ಲಿ ಸುಬ್ರಹ್ಮಣ್ಯದಿಂದ ಸಕಲೇಶಪುರ ನಡುವಿನ ರೈಲು ಹಳಿಯಲ್ಲಿ ಮಣಿಬಂಡ ಎಂಬಲ್ಲಿ ಬಂಡೆಯೊಂದು ರೈಲು ಹಳಿ ಮೇಲೆ ಉರುಳಿ ಬೀಳಲು ಸಿದ್ದವಾಗಿದೆ. ಬಂಡೆ ತೆರವು ಕಾಮಗಾರಿಯನ್ನು ಶನಿವಾರ ನಡೆಸಲು ರೈಲ್ವೆ ಅಧಿಕಾರಿಗಳು ಸಿದ್ದತೆ ಮಾಡಿಕೊಂಡಿದ್ದಾರೆ.
ಶನಿವಾರ ಬಂಡೆ ಸ್ಪೋಟಿಸುವ ಕಾಮಗಾರಿ ವೇಳೆ ಮತ್ತಷ್ಟು ಭೂಕುಸಿತ ಆದಲ್ಲಿ ಈ ಮಾರ್ಗದಲ್ಲಿ ಶನಿವಾರ ಹಗಲು ಅಥವಾ ರಾತ್ರಿ ಅವಧಿ ರೈಲು ಓಡಾಟಗಳಲ್ಲಿ ವ್ಯತ್ಯಯಗಳು ಉಂಟಾಗುವ ಸಾಧ್ಯತೆ ಇದೆ. ಸುಬ್ರಹ್ಮಣ್ಯ ರಸ್ತೆ ಮತ್ತು ಸಿರಿಬಾಗಿಲು ನಡುವಿನ 86 ನೇ ಕಿ.ಮೀ ನಲ್ಲಿ ಹಳಿಯ ಮೇಲೆ ಕಳೆದ ಮಳೆಗಾಲ ಆಗಸ್ಟ್ ನಲ್ಲಿ ಭಾರಿ ಭೂಕುಸಿತ ಸಂಭವಿಸಿತ್ತು. ಹಲವು ಕಡೆ ಭೂಕುಸಿತ ಸಂಭವಿಸಿ ಅನಾಹುತ ಸೃಷ್ಟಿಸಿತ್ತು. ಅಂದು ಭೂಕುಸಿತಗೊಂಡ ಸ್ಥಳದಲ್ಲಿ ಈ ಅಪಾಯಕಾರಿ ಬಂಡೆ ಇದೆ. ಈ ಸ್ಥಳದಲ್ಲಿ ಇನ್ನಷ್ಟು ಭೂಕುಸಿತ ನಡೆಯುವ ಸಾಧ್ಯ ತೆಗಳು ಕಂಡುಬಂದಿವೆ. ಶುಕ್ರವಾರ ರಾತ್ರಿ ರೈಲು ಓಡಾಟ ನಡೆಸಿದ ಬಳಿಕವಷ್ಟೆ ಬಂಡೆ ತೆರವು ಕಾಮಗಾರಿ ಕುರಿತು ರೈಲ್ವೆ ಅಧಿಕಾರಿಗಳು ನಿರ್ಧಾರಿಸಲಿದ್ದಾರೆ.
ದಕ್ಷಿಣ ಪಶ್ಚಿಮ ರೈಲ್ವೆ ವಿಭಾಗದ ತಾಂತ್ರಿಕ ಅಧಿಕಾರಿಗಳು ಈ ಭಾಗದಲ್ಲಿ ಮೊಕ್ಕಂ ಹೂಡಿ ಪರಿಶೀಲನೆ ನಡೆಸುತಿದ್ದಾರೆ.ಅತೀವ ಮಳೆ ಇರುವ ಕಾರಣ ಈ ಮಾರ್ಗದಲ್ಲಿ ರೈಲು ಯಾನದ ಕುರಿತು ತೀವ್ರ ನಿಗಾವಹಿಸಲಾಗಿದೆ.
ಧರ್ಮಸ್ಥಳಕ್ಕೆ ಸಂಬಂಧಿಸಿದಂತೆ “ಮಾತು ಬಿಡ ಮಂಜುನಾಥ” ಎಂಬ ಮಾತು ಎಲ್ಲರಿಗೂ ಚಿರಪರಿಚಿತವಾಗಿದೆ. ಮಾತೇ…
ಮಂಗಳೂರು ಮಹಾನಗರಪಾಲಿಕೆ ವತಿಯಿಂದ ತುಂಬೆಯಲ್ಲಿರುವ ಕಿಂಡಿ ಅಣೆಕಟ್ಟಿನ ಬಳಿ ನೇತ್ರಾವತಿ ನದಿಗೆ ಗಂಗಾ…
ಈ ಬಾರಿ ಫೆಬ್ರವರಿ ತಿಂಗಳಲ್ಲಿ ವಾಡಿಕೆಗಿಂತ 2.5 ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿಲು…
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಮತ್ತು ನಿರ್ವಾಹಕರ ಮೇಲೆ ಪ್ರಯಾಣಿಕರು…
ಕೃಷಿ ಹಾಗೂ ರೈತರ ಅಭ್ಯುದಯವೇ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳ ಮೂಲ ಆಶಯವಾಗಿದೆ…
ಏರುತ್ತಿರುವ ತಾಪಮಾನ ಮತ್ತು ಹವಾಮಾನ ಬದಲಾವಣೆಯು ಮುಂದಿನ ಐದು ವರ್ಷಗಳಲ್ಲಿ ಕೃಷಿ ಮೇಲೆ…