* ಸ್ಪೆಷಲ್ ಕರೆಸ್ಪಾಂಡೆಂಟ್, ಸುಳ್ಯನ್ಯೂಸ್.ಕಾಂ
ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಸಾರಥ್ಯ ಈ ಬಾರಿ ಸುಳ್ಯಕ್ಕೆ ಒಲಿದು ಬರುವ ಸಾಧ್ಯತೆ ಇದೆ. ಹೀಗೊಂದು ಚರ್ಚೆ ಇದೀಗ ಆರಂಭಗೊಂಡಿದೆ. ಸಂಸದ ನಳಿನ್ ಕುಮಾರ್ ಕಟೀಲ್ ಮೂಲಕ ದಕ್ಷಿಣ ಕನ್ನಡ ಜಿಲ್ಲೆಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಒಲಿದು ಬಂದಂತೆ ಜಿಲ್ಲಾಧ್ಯಕ್ಷ ಸ್ಥಾನ ಈ ಬಾರಿ ಸುಳ್ಯದ ನಾಯಕರಿಗೆ ದಕ್ಕಲಿದೆ ಎಂಬ ಸುದ್ದಿ ರಾಜಕೀಯ ಪಡಸಾಲೆಯಲ್ಲಿ ಭಾರೀ ಸುದ್ದಿ ಹರಿದಾಡುತ್ತಿದೆ.
ಜಿಲ್ಲೆಯ ಸಂಸದ, ತಮ್ಮ ನೆಚ್ಚಿನ ನಾಯಕ ನಳಿನ್ ಕುಮಾರ್ ಕಟೀಲ್ ರಾಜ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿದರೂ ಬಿಜೆಪಿಯ ಭದ್ರ ಕೋಟೆ ಸುಳ್ಯದ ಕಾರ್ಯಕರ್ತರಲ್ಲಿ ಆ ಸಂಭ್ರಮ, ಉತ್ಸಾಹ ಅಸ್ಟಾಗಿ ಕಂಡು ಬಂದಿಲ್ಲ. ಸುಳ್ಯದ ಜನತೆಯಂತೆ ಕಾರ್ಯಕರ್ತರೂ ಬಹುನಿರೀಕ್ಷೆಯಿಂದ ಕಾದಿದ್ದ ಸಚಿವ ಸ್ಥಾನ ಈ ಬಾರಿಯೂ ಶಾಸಕ ಅಂಗಾರ ಅವರಿಗೆ ಒಲಿದು ಬಾರದ ಕಾರಣ ಉಂಟಾಗಿರುವ ಅತೃಪ್ತಿ ರಾಜ್ಯಾಧ್ಯಕ್ಷತೆ ಜಿಲ್ಲೆಗೆ ಒಲಿದು ಬಂದರೂ ಸುಳ್ಯದ ಬಿಜೆಪಿ ಸಂಭ್ರಮಿಸುತ್ತಿಲ್ಲ. ಬಹುತೇಕ ನಾಯಕರು, ಕಾರ್ಯಕರ್ತರು ಸಂಭ್ರಮಾಚರಣೆಯಿಂದ ದೂರವೇ ಉಳಿದಿದ್ದಾರೆ. ಅಸಹಕಾರ ಚಳವಳಿಯ ಮಧ್ಯೆಯೂ ಕೆಲವು ಪ್ರಮುಖ ನಾಯಕರು ಮಾತ್ರ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿದ್ದರೂ ಬಹುತೇಕ ಮಂದಿ ನಾಯಕರು ಕಾರ್ಯಕರ್ತರು ದೂರ ಉಳಿದಿದ್ದಾರೆ. ಸಮಾರಂಭದಲ್ಲಿ ಭಾಗವಹಿಸಿರುವುದಕ್ಕೆ ಕಾರ್ಯಕರ್ತರೂ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಮುನಿಸಿಕೊಂಡಿರುವ ಕಾರ್ಯಕರ್ತರನ್ನೂ , ನಾಯಕರನ್ನೂ ಸಮಾಧಾನಪಡಿಸಲು ಜಿಲ್ಲಾಧ್ಯಕ್ಷ ಪಟ್ಟ ಸುಳ್ಯಕ್ಕೆ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಕಳೆದ ಬಾರಿ ಜಿಲ್ಲಾಧ್ಯಕ್ಷತೆ ಪುತ್ತೂರಿನವರಾದ ಸಂಜೀವ ಮಠಂದೂರು ಅವರಿಗೆ ಒಲಿದು ಬಂದಿತ್ತು. ಮಠಂದೂರು ಶಾಸಕರಾಗಿರುವ ಕಾರಣ ಅವರು ಅಧ್ಯಕ್ಷರಾಗಿ ಮುಂದುವರಿಯುವ ಸಾಧ್ಯತೆ ಇಲ್ಲ. ಈ ಹಿಂದೆ ಬೆಳ್ತಂಗಡಿಯವರೂ ಬಂಟ್ವಾಳದವರೂ ಜಿಲ್ಲಾಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸಿದ್ದರು. ಹಾಗಿರುವಾಗ ಈ ಬಾರಿ ಸುಳ್ಯಕ್ಕೆ ಅಧ್ಯಕ್ಷತೆಯನ್ನು ನೀಡಿ ಸಚಿವ ಸ್ಥಾನ ತಪ್ಪಿ ಹೋಗಿರುವ ನಿರಾಸೆಯಲ್ಲಿರುವ ಕಾರ್ಯಕರ್ತರನ್ನು ಸಮಾಧಾನಪಡಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಅಧ್ಯಕ್ಷತೆ ಸುಳ್ಯಕ್ಕೆ ಒಲಿದು ಬಂದರೆ ಸುಳ್ಯದ ಬಿಜೆಪಿಯ ಪ್ರಭಾವಿ ಮುಖಂಡರೋರ್ವರು ಅಧ್ಯಕ್ಷರಾಗಬಹುದು ಎಂದು ವಿಶ್ಲೇಷಿಸಲಾಗುತ್ತದೆ.ಈ ನಡುವೆ ಜಿಲ್ಲೆಯ ಮತ್ತೊಬ್ಬ ಪ್ರಭಾವಿ ನಾಯಕ, ವಿಧಾನ ಪರಿಷತ್ ನ ಮಾಜಿ ಸದಸ್ಯರೊಬ್ಬರ ಹೆಸರೂ ಕೇಳಿಬರುತ್ತಿದೆ.
ಬಂಪರ್ ಆಫರ್ ಇನ್ನೂ ಬರಬಹುದು…?
ಆರು ಬಾರಿ ಶಾಸಕರಾದ ಎಸ್. ಅಂಗಾರ ಅವರಿಗೆ ಈ ಬಾರಿ ಇನ್ನು ಸಚಿವ ಸ್ಥಾನ ಸಿಗುವ ಸಾಧ್ಯತೆ ತೀರಾ ವಿರಳ. ನಿಗಮ ಅಧ್ಯಕ್ಷತೆಯನ್ನು ಅವರು ಸ್ವೀಕರಿಸುವ ಸಾಧ್ಯತೆಯೂ ಕಡಿಮೆ. ಹಾಗಾದರೆ ಸರಕಾರ ಉಳಿದುಕೊಂಡರೆ ಸುಳ್ಯದ ಬಿಜೆಪಿ ಮುಖಂಡರಿಗೆ ಹೆಚ್ಚಿನ ಸ್ಥಾನ ಮಾನಗಳು ದೊರೆಯಬಹುದು. ನಿಗಮಾಧ್ಯಕ್ಷತೆ, ಅಕಾಡೆಮಿಗಳ ಸಾರಥ್ಯ, ಪ್ರಮುಖ ದೇವಾಲಯಗಳ ಆಡಳಿತದ ಚುಕ್ಕಾಣಿ ಹೀಗೆ ಬಂಪರ್ ಆಫರ್ ಗಳೇ ಬರಬಹುದು ಎಂಬ ಲೆಕ್ಕಾಚಾರಗಳೂ ಇನ್ನೊಂದೆಡೆ ನಡೆಯುತ್ತಿದೆ. ಕಳೆದ ಬಿಜೆಪಿ ಅಧಿಕಾರ ಅವಧಿಯಲ್ಲಿ ಸುಳ್ಯದ ಮುಖಂಡರಿಗೆ ಪ್ರಮುಖ ನಿಗಮದ ಅಧ್ಯಕ್ಷತೆ ಒಲಿದಿತ್ತು. ಹೀಗಾಗಿ ಸುಳ್ಯಕ್ಕೆ ಸಚಿವ ಸ್ಥಾನ ಸಿಗದೇ ಇದ್ದರೂ ಈಗ ಜಿಲ್ಲೆಯ ನಾಯಕರ, ರಾಜ್ಯದ ನಾಯಕರ ವಿರೋಧವನ್ನೂ ಯಾರೂ ಕಟ್ಟಿಕೊಳ್ಳಲು ಸಿದ್ಧರಿಲ್ಲ.
ಇಂದು ರಾಷ್ಟ್ರೀಯ ರೈತ ದಿನ. ಈ ದೇಶದಲ್ಲಿ ಕೃಷಿಯ ಪ್ರಾಧಾನ್ಯತೆ ಬಹಳಷ್ಟಿದೆ. ಕೃಷಿಗಾಗಿ…
ಬಂಗಾಳಕೊಲ್ಲಿಯ ವಾಯುಭಾರ ಕುಸಿತವು ಡಿ.26 ರಂದು ತಮಿಳುನಾಡು ಕರಾವಳಿಯ ಬಳಿ ಶಿಥಿಲಗೊಳ್ಳುತ್ತಿದ್ದಂತೆಯೇ ಹಿಂಗಾರು…
ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಕಮಿಲ ಶಾಲಾ ವಠಾರದಲ್ಲಿ ಪಾವಂಜೆ ಶ್ರೀ ಜ್ಞಾನಶಕ್ತಿ…
23.12.24ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
22.12.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು, ದಕ್ಷಿಣ…
ಒಡಿಶಾ ರಾಜ್ಯ ಸರ್ಕಾರವು ಕೃಷಿಯಲ್ಲಿ ಹೊಸವಿಧಾನಗಳ, ಪರ್ಯಾಯ ಕೃಷಿಯ ಪಾತ್ರವನ್ನು ಪರೋಕ್ಷವಾಗಿ ಕೃಷಿಕರಿಗೆ…