ಸುಳ್ಯ: ಸುಳ್ಯದ ರೋಟರಿ ಕ್ಲಬ್ ಮತ್ತು ಸುಳ್ಯದ ರೋಟರಿ ಕ್ಲಬ್ ಸಿಟಿ ಇವರ ಜಂಟಿ ಪ್ರಾಯೋಜಕತ್ವದಲ್ಲಿ ಮಿತ್ತಡ್ಕದ ರೋಟರಿ ವಿದ್ಯಾಸಂಸ್ಥೆಗಳ ವಠಾರದಲ್ಲಿ ಎರಡು ದಿನಗಳ ಇಂಟರಾಕ್ಟ್ ಕ್ಲಬ್‌ಗಳ ಜಿಲ್ಲಾ ಸಮಾವೇಶ `ಚಿನ್ನಾರಿ’ ನಡೆಯಿತು.
ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ರೋಟರಿ ಜಿಲ್ಲಾ ಗವರ್ನರ್ ಜೋಸೆಫ್ ಮ್ಯಾಥ್ಯೂ ‘ವಿದ್ಯಾರ್ಥಿ ದೆಸೆಯಲ್ಲಿಯೇ ನಾಯಕತ್ವವನ್ನು ಬೆಳೆಸಿಕೊಳ್ಳಲು ಇಂಟರಾಕ್ಟ್ ಪೂರಕವಾಗಿ ಕೆಲಸ ಮಾಡುತ್ತದೆ. ಆ ಮೂಲಕ ಸಮಾಜಮುಖಿಯಾಗಿ ತೊಡಗಿಸಿಕೊಳ್ಳಲು ಇದು ಸಹಕಾರಿಯಾಗುತ್ತದೆ ಎಂದು ಹೇಳಿದರು. ಜಿಲ್ಲಾ ಇಂಟರಾಕ್ಟ್ ಪ್ರತಿನಿಧಿ ತುಷಾರ್ ಕೆ., ರೋಟರಿ ವಲಯ 5ರ ಅಸಿಸ್ಟೆಂಟ್ ಗವರ್ನರ್ ಡಾ. ಕೇಶವ ಪಿ.ಕೆ. ಜಿಲ್ಲಾ ಇಂಟರಾಕ್ಟ್ ಸಭಾಪತಿ ಡಾ. ಸೂರ್ಯನಾರಾಯಣ ಅತಿಥಿಗಳಾಗಿ ಭಾಗವಹಿಸಿದರು.
ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷ ಡಾ.ಕೆ.ಜಿ. ಪುರುಷೋತ್ತಮ ಸ್ವಾಗತಿಸಿದರು. ಸಮಾವೇಶದ ಸಂಯೋಜಕ ಎನ್.ಎ.ಜಿತೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಳ್ಯ ಸಿಟಿ ಕ್ಲಬ್ ಅಧ್ಯಕ್ಷ ಭಾನುಪ್ರಕಾಶ್ ವಂದಿಸಿದರು. ವಿದ್ಯಾರ್ಥಿಗಳಾದ ದೃತಿ ಕೆ.ಹೆಚ್, ಸಂಹಿತಾ ವಿ.ಆರ್. ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಶಿಕ್ಷಕ ಅಚ್ಚುತ ಅಟ್ಲೂರು ಸಹಕಾರ ನೀಡಿದರು.
ಇಂಟರಾಕ್ಟ್ ಜಿಲ್ಲಾ ಉಪ ಸಭಾಪತಿ ನವೀನ್ ಕುಮಾರ್, ಸುಳ್ಯ ರೋಟರಿ ಕಾರ್ಯದರ್ಶಿ ಸನತ್, ಇಂಟರಾಕ್ಟ್ ಅಧ್ಯಕ್ಷೆ ಶ್ರಾವ್ಯ ಬೇರಿಕೆ, ಕಾರ್ಯದರ್ಶಿ ಮಹಿಮಾ ವೇದಿಕೆಯಲ್ಲಿದ್ದರು.
ಉದ್ಘಾಟನೆಯ ಬಳಿಕ ವ್ಯಕ್ತಿತ್ವ ವಿಕಸನ ಹಾಗೂ ಸಂವಹನ ಕಲೆ ವಿಷಯವಾಗಿ ಎಂ.ಬಿ.ಜಯರಾಮರು ಮಾಹಿತಿ ನೀಡಿದರು.
ಡಿ.14ರಂದು ಆರಂಭಗೊಂಡ ಸಮಾವೇಶದಲ್ಲಿ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮಗಳು ನಡೆಯಿತು. ಮಿಸೆಸ್ ಕರ್ನಾಟಕ ಪ್ರಶಸ್ತಿ ವಿಜೇತೆ ದೀಪಿಕಾ ಅಡ್ತಲೆ ಉದ್ಘಾಟನೆ ನೆರವೇರಿಸಿದರು.
ವರುಷದಿಂದ ವರುಷಕ್ಕೆ ಬಿಸಿ ಏರುತ್ತಿರುವ ಭೂಮಿ, ಕಳಕೊಳ್ಳುತ್ತಿರುವ ಸಸ್ಯ ಸಂಪತ್ತು, ಭೂಮಿಯನ್ನು ತಂಪಾಗಿಸಲು…
ಹಲಸು ಮೌಲ್ಯವರ್ಧನೆಯಾಗಿ ಅಡುಗೆ ಮನೆ ಸೇರುತ್ತಿದೆ. ಅದರ ಜೊತೆಗೇ ಹಲಸು ವಿವಿಧ ರೂಪದಲ್ಲಿ…
ಸಮಾಜಕ್ಕೆ, ರಾಷ್ಟ್ರಕ್ಕೆ ವಿಶ್ವಕ್ಕೆ ಬೆಳಕು ನೀಡುವ ವ್ಯವಸ್ಥೆಯನ್ನು ಬೆಳೆಸುವುದು ಇಡೀ ಸಮಾಜದ ಜವಾಬ್ದಾರಿ…
ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತ ಧನಂಜಯ ವಾಗ್ಲೆ ಅವರು ಈಚೆಗೆ ನಿಧನರಾದರು.…
ಬಾಂಗ್ಲಾ ದೇಶದ ಕರಾವಳಿಯಲ್ಲಿ ಉಂಟಾಗಿರುವ ತಿರುವಿಕೆಯ ಪರಿಣಾಮದಿಂದ ನಮ್ಮ ಕರಾವಳಿಯಲ್ಲಿ ಮಳೆಯ ಪ್ರಮಾಣ…
ಮೊಬೈಲ್ ಎಷ್ಟು ಅಪಾಯಕಾರಿ ಸ್ಥಿತಿಗೆ ಮಕ್ಕಳನ್ನು ದೂಡುತ್ತದೆ ಎಂದರೆ, ಕಣ್ಣು ಮಾತ್ರವಲ್ಲ ಮನಸ್ಸುಗಳನ್ನೂ…