ಸುಳ್ಯ: ಸುಳ್ಯದಲ್ಲಿ ಬುಧವಾರ ಬೆಳಿಗ್ಗಿನಿಂದ ಉತ್ತಮ ಮಳೆ ಸುರಿದಿದೆ. ಜೂನ್ ತಿಂಗಳಲ್ಲಿ ದುರ್ಬಲವಾಗಿದ್ದ ಮುಂಗಾರು ಮಳೆ ಜುಲೈ ಆರಂಭದಿಂದ ಚುರುಕಾಗುವ ಲಕ್ಷಣ ತೋರಿದೆ. ಮಂಗಳವಾರ ಹಗಲು ಮತ್ತು ರಾತ್ರಿ ಸಾಮಾನ್ಯ ಮಳೆಯಾಗಿತ್ತು. ಇದರಿಂದ ಮಳೆಗಾಲದ ಲಕ್ಷಣಗಳು ಗೋಚರಿಸಿದ್ದವು. ಬುಧವಾರ ಬೆಳಿಗ್ಗನಿಂದ ಮಳೆಯಾಗುವುದು ನಿರೀಕ್ಷೆ ಹುಟ್ಟಿಸಿದೆ. ಜೂನ್ ತಿಂಗಳಲ್ಲಿ ಮಳೆ ಬಾರದೇ ಇದ್ದುದು ಜನರಲ್ಲಿ ದಿಗಿಲು ಹುಟ್ಟಿಸಿತ್ತು.
ಅಪರೂಪಕ್ಕೆ ಮಾತ್ರ ಬರುವ ಹನಿ ಮಳೆ, ಕಡು ಬಿಸಿಲು, ಏರಿದ ಉಷ್ಣಾಂಶದ ವಾತಾವರಣ ಜನರನ್ನು ಕಂಗೆಡಿಸಿತ್ತು. ಇದೀಗ ಜುಲೈನಲ್ಲಿ ಮಳೆಗಾಲ ಬಲಗೊಳ್ಳುವ ಸೂಚನೆ ನೀಡಿದೆ.
ಹವಾಮಾನ ಇಲಾಖೆ ನೀಡಿದ ಎಲ್ಲಾ ಮುನ್ಸೂಚನೆಯನ್ನೂ ತಲೆ ಕೆಳಗಾಗಿಸಿ ಮಳೆಯಿಲ್ಲದ ಶತಮಾನದ ಕಠಿಣ ಜೂನ್ ತಿಂಗಳು ಮುಗಿದು ಹೋಯಿತು. ಜುಲೈನಲ್ಲಾದರೂ ಮುಂಗಾರು ತನ್ನ ವೈಭವವನ್ನು ಪ್ರದರ್ಶಿಸಬಹುದು ಎಂಬ ನಿರೀಕ್ಷೆ ಹುಟ್ಟಿಸಿದೆ.
ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಮಳೆ ಚಟುವಟಿಕೆ ಆರಂಭವಾಗಿದೆ. ಏಪ್ರಿಲ್ 15…
ಜನನ-ಮರಣ ಘಟನೆಗಳನ್ನು 21 ದಿನಗಳೊಳಗೆ ಕಡ್ಡಾಯವಾಗಿ ನೋಂದಣಿ ಮಾಡಬೇಕು ಎಂದು ಸೂಚನೆ.
ರಾಜ್ಯದಲ್ಲಿ ಬಿಸಿಲಿನ ತಾಪ ಹೆಚ್ಚಾಗಿ ಮುಂದುವರಿಯುತ್ತಿದ್ದು, ಮಳೆಯ ಚಟುವಟಿಕೆ ಕಡಿಮೆಯಾಗಿದೆ. ಏಪ್ರಿಲ್ 15…
ರಾಜ್ಯದಲ್ಲಿ ಇಂದಿನಿಂದ ಮಳೆಯ ಚಟುವಟಿಕೆ ಮತ್ತೆ ಆರಂಭವಾಗಲಿದೆ. ಕರಾವಳಿ ಮತ್ತು ಮಲೆನಾಡಿನಲ್ಲಿ ಗುಡುಗು…
ದಕ್ಷಿಣ ಒಳನಾಡಿನಲ್ಲಿ ಗುಡುಗು ಮಳೆಯ ಸಾಧ್ಯತೆ ಇದೆ. ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ…
ರಾಜ್ಯದಲ್ಲಿ ಆಟೋ ಗ್ಯಾಸ್ ಕೊರತೆ ಎಂಬುದು ಕೇವಲ ವದಂತಿ ಎಂದು ಸರ್ಕಾರ ಸ್ಪಷ್ಟಪಡಿಸಿದೆ.…