ಸುಳ್ಯ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸುಳ್ಯ ಇದರ ನಗರ ಅಭ್ಯಾಸ ವರ್ಗವು ಸುಳ್ಯ ಎ. ಪಿ. ಎಂ. ಸಿ ಸಭಾಂಗಣದಲ್ಲಿ ನಡೆಯಿತು. ಅಭ್ಯಾಸವರ್ಗವನ್ನು ಅಮರ ಜ್ಯೋತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಯಶೋಧ ರಾಮಚಂದ್ರ ಉದ್ಘಾಟಿಸಿದರು.
ಬಳಿಕ ಮಾತನಾಡಿ, ರಾಷ್ಟ್ರೀಯ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡು ವಿದ್ಯಾರ್ಥಿ ಪರಿಷತ್ ಒಂದಿಂಚೂ ತನ್ನ ಸಿದ್ದಾಂತವನ್ನು ಬದಲಿಸದೆ 70 ವರ್ಷದಿಂದ ದೇಶದೆಲ್ಲೆಡೆ ವಿದ್ಯಾರ್ಥಿಗಳಿಗೆ ಪೂರಕವಾಗಿ ಕೆಲಸ ಮಾಡುತ್ತಿದೆ ಎಂದರು.
ವೇದಿಕೆಯಲ್ಲಿ , ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸುಳ್ಯ ನಗರ ಇದರ ಅಧ್ಯಕ್ಷರಾದ ಕುಲದೀಪ್ ಪೆಲ್ತಡ್ಕ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಇದರ ವಿಭಾಗ ಪ್ರಮುಖರು ಮತ್ತು ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾದ ಕೇಶವ ಬಂಗೇರ ಮತ್ತು ನಗರ ಕಾರ್ಯದರ್ಶಿ ಧನ್ಯರಾಜ್ ಕಾಪುಮಲೆ ಉಪಸ್ಥಿತರಿದ್ದರು.
ವರ್ಗದ ಮೊದಲ ಅವಧಿ ಸೈದ್ಧಾಂತಿಕ ಭೂಮಿಕೆ ಯ ವಿಚಾರವಾಗಿ ಕೇಶವ ಬಂಗೇರ ಮಾತನಾಡಿದರು. ಬಳಿಕ ಅನೌಪಚಾರಿಕ ಬೈಠಕ್ ನ್ನು ಕಿಶನ್ ಜಬಳೆ ನಡೆಸಿದರು.
ಕಾರ್ಯ ಪದ್ದತಿ ಅವಧಿಯನ್ನು ಮಂಗಳೂರು ವಿಭಾಗ ಸಂಘಟನಾ ಕಾರ್ಯದರ್ಶಿ ಬಸವೇಶ್ ಕೋರಿ ನಡೆಸಿದರು. ವಿಶೇಷ ಭಾಷಣವನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ವಿಶೇಷ ಆಡಳಿತಾಧಿಕಾರಿಯಾದ ವೆಂಕಟೇಶ್ ನಡೆಸಿಕೊಟ್ಟರು.ಕ್ಯಾಂಪಸ್ ಕಾರ್ಯ ಮತ್ತು ನೇತೃತ್ವ, ಪ್ರಶಿಕ್ಷಣ ಅವಧಿಯನ್ನು ವಿವೇಕಾನಂದ ಕಾಲೇಜಿ ಅಂತಿಮ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿನಿ ಮತ್ತು ಪುತ್ತೂರು ಜಿಲ್ಲಾ ವಿದ್ಯಾರ್ಥಿನಿ ಪ್ರಮುಖ್ ತೇಜಶ್ರೀ ವೆಂಕಟೇಶ್ ಇವರು ನಡೆಸಿಕೊಟ್ಟರು.
ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಸುಳ್ಯ ರೋಟರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಹಿಂದಿ ಶಿಕ್ಷಕಿ ನಳಿನಾಕ್ಷಿ ಕಲ್ಮಡ್ಕ ಮಾತನಾಡಿ ರಾಷ್ಟ್ರೀಯ ವಿಚಾರಧಾರೆಗಳನ್ನು ಮೈಗೂಡಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಇಂತಹ ಸಂಘಟನೆಗಳು ಬಹು ಪೂರಕ ಎಂದು ಹೇಳಿದರು.
ವೇದಿಕೆಯಲ್ಲಿ ಮಂಗಳೂರು ವಿಭಾಗ ಸಂಘಟನಾ ಕಾರ್ಯದರ್ಶಿ ಬಸವೇಶ್ ಕೋರಿ, ಪುತ್ತೂರು ಜಿಲ್ಲಾ ಸಂಚಾಲಕ ಮಂಜುನಾಥ್ ಕುಕ್ಕೆ ಸುಬ್ರಹ್ಮಣ್ಯ ಮತ್ತು ಸುಳ್ಯ ನಗರ ಕಾರ್ಯದರ್ಶಿ ಧನ್ಯರಾಜ್ ಕಾಪುಮಲೆ ಉಪಸ್ಥಿತರಿದ್ದರು. ನಂತರ ಸುಳ್ಯ ನಗರದ 2019-20 ನೇ ನೂತನ ಕಾರ್ಯಕಾರಣಿಯನ್ನು ಘೋಷಿಸಲಾಯಿತು.
ಯಕ್ಷಗಾನ ಕಲಾವಿದ ಕುಂಬಳೆ ಶ್ರೀಧರ ರಾವ್ ಅವರ ಸ್ಮೃತಿ ಕಾರ್ಯಕ್ರಮ ಹಾಗೂ ʼಕಲಾ…
ಬಂಗಾಳಕೊಲ್ಲಿಯ ವಾಯುಭಾರ ಕುಸಿತವು ಶಿಥಿಲಗೊಳ್ಳುತ್ತಿದ್ದು, ಬಂಗಾಳಕೊಲ್ಲಿಯ ಕಡೆಯಿಂದ ಗಾಳಿಯು ಹಿಂಗಾರು ರೀತಿ ಬೀಸುತ್ತಿರುವುದರಿಂದ…
ಬಾಂಗ್ಲಾವನ್ನು ಕಟ್ಟಿಹಾಕುವ ಎಲ್ಲಾ ಭೌಗೋಳಿಕ ಅನುಕೂಲಗಳಿದ್ದರೂ ಸರಕಾರವು ಅಂತಹ ಕ್ರಮಗಳಿಗೆ ಉದ್ಯುಕ್ತವಾಗಿಲ್ಲ. ಬಾಂಗ್ಲಾವನ್ನು…
26.12.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಇಂದು ರಾಷ್ಟ್ರೀಯ ರೈತ ದಿನ. ಈ ದೇಶದಲ್ಲಿ ಕೃಷಿಯ ಪ್ರಾಧಾನ್ಯತೆ ಬಹಳಷ್ಟಿದೆ. ಕೃಷಿಗಾಗಿ…
ಬಂಗಾಳಕೊಲ್ಲಿಯ ವಾಯುಭಾರ ಕುಸಿತವು ಡಿ.26 ರಂದು ತಮಿಳುನಾಡು ಕರಾವಳಿಯ ಬಳಿ ಶಿಥಿಲಗೊಳ್ಳುತ್ತಿದ್ದಂತೆಯೇ ಹಿಂಗಾರು…