ಸುಳ್ಯ: ಲೋಕಸಭಾ ಚುನಾವಣೆಗೆ ಮತದಾನ ಆರಂಭಗೊಂಡಿದೆ. ಸುಳ್ಯ ತಾಲೂಕಿನಾದ್ಯಂತ ಮತದಾನಕ್ಕೆ ಜನರು ಮತಗಟ್ಟೆಗೆ ಆಗಮಿಸುತ್ತಿದ್ದಾರೆ.ಸುಳ್ಯ ಶಾಸಕ ಎಸ್ ಅಂಗಾರ ಅವರು ದೊಡ್ಡತೋಟ ಹಿರಿಯ ಪ್ರಾಥಮಿಕ ಶಾಲಾ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಬಳಿಕ ಬಿಜೆಪಿ ಚುನಾವಣಾ ಬೂತ್‍ನಲ್ಲಿ ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸಿ ತಾವೂ ಸ್ವತ: ಕುಳಿತುಕೊಂಡರು.
ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ 99,631 ಪುರುಷ ಮತ್ತು 1,00948 ಮಹಿಳೆಯರು ಸೇರಿ ಒಟ್ಟು 2,00,579 ಮತದಾರರಿದ್ದಾರೆ. ಕ್ಷೇತ್ರದಲ್ಲಿ ಒಟ್ಟು 231 ಬೂತ್‍ಗಳಿವೆ. ಇದರಲ್ಲಿ ಗುತ್ತಿಗಾರು ಹಿರಿಯ ಪ್ರಾಥಮಿಕ ಶಾಲೆಯ ಬೂತನ್ನು ಮತ್ತು ಕಡಬ ಹಿರಿಯ ಪ್ರಾಥಮಿಕ ಶಾಲೆ ಬೂತನ್ನು ಮಹಿಳಾ ಮತಗಟ್ಟೆ ಎಂದು ಗುರುತಿಸಲಾಗಿದೆ. ಬಡ್ಡಡ್ಕ ಶ್ರೀ ರಾಮಕೃಷ್ಣ ಹಿರಿಯ ಪ್ರಾಥಮಿಕ ಶಾಲೆಯ ಬೂತನ್ನು ಪಾರಂಪರಿಕ ಬೂತ್ ಎಂದು ಗುರುತಿಸಲಾಗಿದೆ.
13 ಬೂತ್‍ಗಳಲ್ಲಿ ವೆಬ್‍ಕಾಸ್ಟೀಂಗ್ ಮಾಡಲಾಗುತ್ತಿದೆ. ಕ್ರಿಟಿಕಲ್ ಬೂತ್‍ಗಳಲ್ಲಿ ಹೆಚ್ಚಿನ ಭದ್ರತಾ ವ್ಯವಸ್ಥೆಯನ್ನು ಒದಗಿಸಲಾಗಿದೆ. 58 ಮೈಕ್ರೋ ಆಬ್ಸರ್‍ವರ್ಸ್‍ನ್ನು ನೇಮಕ ಮಾಡಲಾಗಿದೆ.
22.12.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು, ದಕ್ಷಿಣ…
ಒಡಿಶಾ ರಾಜ್ಯ ಸರ್ಕಾರವು ಕೃಷಿಯಲ್ಲಿ ಹೊಸವಿಧಾನಗಳ, ಪರ್ಯಾಯ ಕೃಷಿಯ ಪಾತ್ರವನ್ನು ಪರೋಕ್ಷವಾಗಿ ಕೃಷಿಕರಿಗೆ…
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್…
ಗದಗ ಜಿಲ್ಲೆಯ ಹುಲಕೋಟಿ ಗ್ರಾಮದ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಮಾಡಲಗೇರಿ ಗ್ರಾಮದಲ್ಲಿ…
ಹವಾಮಾನದ ಕಾರಣದಿಂದ ಕೃಷಿ ಹಾನಿ ಉಂಟಾಗಿ ನಷ್ಟವಾದ ಸಂದರ್ಭದಲ್ಲಿ ಅಥವಾ ಬೆಲೆ ಕುಸಿತದಂತಹ…
ಚಳಿಗಾಲ ಆರಂಭವಾಗಿದೆ, ಬಿಸಿಲು ಹೆಚ್ಚಾಗುತ್ತಿದ್ದಂತೆಯೇ ಮಲೆನಾಡು ಭಾಗದಲ್ಲಿ ಮಂಗನಕಾಯಿಲೆ ಹರಡುವ ಸಾಧ್ಯತೆ ಇದೆ.…