ಸುಳ್ಯ: ಎಸ್ ಕೆಎಸ್ ಎಸ್ ಎಫ್ ವಿಖಾಯ ಸಮಿತಿಯ ವತಿಯಿಂದ ವಿಖಾಯ ಕಾರ್ಯಕರ್ತರ ಸ್ನೇಹಸಮ್ಮಿಲನ ಹಾಗೂ ನೂತನ ಶಾಖಾ ಪ್ರತಿನಿಧಿಗಳಿಗೆ ಅಭಿನಂದನಾ ಸಮಾರಂಭವು ಸುಳ್ಯ ಸುಪ್ರೀಂ ಕಾಂಪೌಂಡ್ ನಲ್ಲಿ ಜನವರಿ 17 ರಂದು ನಡೆಯಿತು.
ಐವರ್ನಾಡು ಮಸೀದಿಯ ಖತೀಬ್ ಉಸ್ತಾದ್, ಅಬ್ದುಲ್ ಲತೀಫ್ ಫೈಝಿ ಕಾರ್ಯಕ್ರಮ ಉದ್ಘಾಟಿಸಿದರು. ಸುಳ್ಯ ವಲಯ ಎಸ್ ಕೆಎಸ್ ಎಸ್ ಎಫ್ ಅಧ್ಯಕ್ಷರಾದ ಹಸ್ಸನ್ ಆರ್ಷದಿ ಸಮಸ್ಥದ ಕಾರ್ಯವೈಖರಿ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಕಾರ್ಯಕರ್ತರಿಗೆ ತರಭೇತಿ ನೀಡಿದರು. ವಿಖಾಯ ಕಾರ್ಯಕರ್ತರ ಹೊಣೆಗಾರಿಕೆ ಹಾಗೂ ಮಾಡಬೇಕಾದ ಕೆಲಸಕಾರ್ಯಗಳ ಬಗ್ಗೆ ಅಜ್ಜಾವರ ಖತೀಬ್ ಉಸ್ತಾದ್, ಉಮ್ಮರ್ ಫೈಝಿ ನೆಲ್ಯಾಡಿ
ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಮದ್ರಸಾ ಮೆನೇಜ್ ಮೆಂಟ್ ಅಧ್ಯಕ್ಷರಾದ ತಾಜ್ ಮಹಮ್ಮದ್ ಸಂಪಾಜೆ, ಸುನ್ನಿ ಮಹಲ್ ಫೆಡರೇಷನ್ ಸುಳ್ಯ ಇದರ ಅಧ್ಯಕ್ಷರಾದ ಖತ್ತರ್ ಇಬ್ರಾಹಿಂ ಹಾಜಿ,ಎಸ್ ವೈ ಎಸ್ ಅಧ್ಯಕ್ಷರಾದ ಹಮೀದ್ ಹಾಜಿ ಸುಳ್ಯ, ಬೆಳ್ಳಾರೆ ಶಂಸುಲ್ ಉಲಮಾ ಟ್ರಸ್ಟ್ ಅಧ್ಯಕ್ಷರಾದ ಮಂಗಳ ಅಬೂಬಕ್ಕರ್, ರಝಾಕ್ ಉಸ್ತಾದ್ ಅಜ್ಜಾವರ, ಶಾಫಿ ಮುಕ್ರಿ,ಫಾರೂಕ್ ಅಡ್ಕ, ಕಳಂದರ್ ಎಲಿಮಲೆ,ಷರೀಫ್ ಅಜ್ಜಾವರ, ತಾಜುದ್ದೀನ್ ಅರಂತೋಡು ಹಾಗೂ ಸುಮಾರು ನೂರೈವತ್ತು ಜನ ವಿಖಾಯ ಕಾರ್ಯಕರ್ತರು ಭಾಗವಹಿಸಿದ್ದರು. ವಿಖಾಯ ಕನ್ವೀನರ್ ತಾಜುದ್ದೀನ್ ಟರ್ಲಿ ಸ್ವಾಗತಿಸಿ, ಚೇರ್ಮನ್ ಜಮಾಲ್ ಬೆಳ್ಳಾರೆ ವಂದಿಸಿದರು.
ಅಡಿಕೆಯಂತಹ ಕ್ಯಾನ್ಸರ್ ಉಂಟುಮಾಡುವ ಏಜೆಂಟ್ಗಳ ನಿಯಂತ್ರಣಕ್ಕೆ ನೀತಿಗಳು ಮತ್ತು ಮಾರ್ಗದರ್ಶನದ ಕೊರತೆಯಿದೆ ಎಂದು…
ಯಾವುದೇ ಬ್ಯಾಂಕು ಅಥವಾ ಸಹಕಾರಿ ಸಂಸ್ಥೆ ರೈತನಿಗೆ ಬೇಕಾಬಿಟ್ಟಿಯಾಗಿ ಅಲ್ಪಾವಧಿ ಬೆಳೆ ಸಾಲ…
ಆರ್ಥಿಕತೆಯ ಬಗ್ಗೆ ಸಮರ್ಥವಾಗಿ ವಿಷಯ ಮಂಡಿಸಬಲ್ಲ ಕೃಷಿಕ, ಸಾಮಾಜಿಕ ಮುಖಂಡ ವಿಶ್ವೇಶ್ವರ ಭಟ್…
ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ಮಲೆನಾಡಿನ ಗ್ರಾಮೀಣ ಭಾಗಕ್ಕೂ ಶುದ್ಧವಾಗಿರುವ ಕುಡಿಯುವ…
ದೇಶಾದ್ಯಂತ ನಗರೀಕರಣ ಬೆಳವಣಿಗೆಯಾದಂತೆ ಸಮುದಾಯದ ಸ್ಥಳಗಳು ಕಣ್ಮರೆಯಾಗಿವೆ. ಕರಾವಳಿ ನಗರದಾದ್ಯಂತ ಸುಮಾರು 250…