Advertisement
ಸುದ್ದಿಗಳು

ಜ. 20 ಮತ್ತು 21 ವಿವೇಕಾನಂದ ಕಾಲೇಜಿನಲ್ಲಿ ಅಂತರ್ ಕಾಲೇಜು ಹುಡುಗರ ಕಬಡ್ಡಿ ಪಂದ್ಯಾಟ

Share

ಪುತ್ತೂರು: ನೆಹರು ನಗರದ ವಿವೇಕಾನಂದ ಕಾಲೇಜಿನಲ್ಲಿ ಜ. 20 ಮತ್ತು 21 ರಂದು ಮಂಗಳೂರು ವಿಶ್ವವಿದ್ಯಾನಿಲಯದ ಅಂತರ್ ಕಾಲೇಜು ಮಟ್ಟದ ಪುರುಷರ ಕಬಡ್ಡಿ ಪಂದ್ಯಾಟ ನಡೆಯಲಿದೆ. ಮಂಗಳೂರು ವಲಯದ ಮಂಗಳೂರು, ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಸುಳ್ಯ ತಾಲೂಕು ಮತ್ತು ಕೊಡಗು ಜಿಲ್ಲೆಯಿಂದ ಸುಮಾರು 47 ಕಾಲೇಜುಗಳು ಭಾಗವಹಿಸುತ್ತಿವೆ. ಪ್ರಥಮ ಬಾರಿಗೆ ಮ್ಯಾಟ್ ಅಂಗಳದ ಕಬಡ್ಡಿ ಪಂದ್ಯಾಟ ನಡೆಯುತ್ತಿದ್ದು, ವಿವೇಕಾನಂದ ಕಾಲೇಜು 40 ವರ್ಷಗಳ ಬಳಿಕ ಈ ಪಂದ್ಯಾಟದ ಆತಿಥ್ಯವನ್ನು ವಹಿಸಿದೆ.

Advertisement
Advertisement

ಜ.20 ರಂದು ಬೆಳಗ್ಗೆ 9.45ಕ್ಕೆ ಉದ್ಘಾಟನ ಕಾರ್ಯಕ್ರಮ ನಡೆಯಲಿದ್ದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಪಿ. ಶ್ರೀನಿವಾಸ ಪೈ ಅಧ್ಯಕ್ಷತೆ ವಹಿಸಲಿದ್ದಾರೆ. ಬೆಂಗಳೂರು ವಿಜಯ ಬ್ಯಾಂಕ್‍ನ ರಾಷ್ಟ್ರೀಯ ಕಬಡ್ಡಿ ಆಟಗಾರ ಪ್ರಶಾಂತ್ ರೈ ಕೈಕಾರ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದು, ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಎಂ. ಕೃಷ್ಣ ಭಟ್, ನಿರ್ದೇಶಕ ಗುಣಪಾಲ ಜೈನ್, ಮಂಗಳೂರು ವಿವಿಯ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಕಿಶೋರ್ ಕುಮಾರ್ ಸಿ.ಕೆ., ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ.ಎನ್., ಆಡಳಿತ ಮಂಡಳಿಯ ಸದಸ್ಯರಾದ ರಮಾನಾಥ ಶೆಣೈ, ಕೃಷ್ಣ ನಾಯ್ಕ್ ಎ., ಉಷಾ ನಾಯಕ್ ಅಭ್ಯಾಗತರಾಗಿ ಉಪಸ್ಥಿತರಿರಲಿದ್ದಾರೆ.

Advertisement

ಜ.21 ರಂದು ಸಂಜೆ 3ಕ್ಕೆ ಸಮಾರೋಪ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಪುತ್ತೂರು ತಾಲೂಕು ಆರೋಗ್ಯ ವಿಭಾಗ, ರಾಷ್ಟ್ರೀಯ ಕಬಡ್ಡಿ ಆಟಗಾರ, ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿ ರವಿ ಸುವರ್ಣ, ಬಾಯಾರು ಪ್ರಶಾಂತಿ ವಿದ್ಯಾ ಕೇಂದ್ರದ ದೈಹಿಕ ಶಿಕ್ಷಣ ನಿರ್ದೇಶಕ, ರಾಷ್ಟ್ರೀಯ ಕಬಡ್ಡಿ ಆಟಗಾರ ಪ್ರಕಾಶ್ ಮಾಣಿ, ಭದ್ರಾವತಿಯ ಕ್ಯಾಂಪ್ಕೊ ಮ್ಯಾನೇಜರ್ ಹಾಗೂ ರಾಷ್ಟ್ರೀಯ ಕಬಡ್ಡಿ ಆಟಗಾರ ಬಿಪಿನ್ ಕುಮಾರ್ ಶೆಟ್ಟಿ ಮಾಣಿ ಹಾಗೂ ಬೆಂಗಳೂರಿನ ಆಡಿ ಕಂಪೆನಿಯ ಹೆಚ್.ಆರ್. ಮ್ಯಾನೇಜರ್, ರಾಷ್ಟ್ರೀಯ ಕಬಡ್ಡಿ ಆಟಗಾರ ವಿಕಾಸ್ ಮಾಣಿ ಆಗಮಿಸಲಿದ್ದಾರೆ. ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ.ಎನ್. ಅಧ್ಯಕ್ಷತೆ ವಹಿಸಲಿದ್ದಾರೆ. ಆಡಳಿತ ಮಂಡಳಿಯ ಕೋಶಾಧಿಕಾರಿ ಜನಾರ್ದನ ಭಟ್ ಎಸ್., ಸದಸ್ಯರಾದ ಎಂ. ಅನಂತಕೃಷ್ಣ ನಾಯಕ್, ಶೋಭಾ ಕೊಳತ್ತಾಯ ಎನ್., ಕಾಲೇಜಿನ ಪ್ರಾಚಾರ್ಯ ಡಾ. ಪೀಟರ್ ವಿಲ್ಸನ್ ಪ್ರಭಾಕರ್, ಐಕ್ಯುಎಸಿ ಘಟಕದ ಸಂಯೋಜಕ ಡಾ. ಶ್ರೀಧರ ಎಚ್.ಜಿ. ಮತ್ತಿತರರು ಉಪಸ್ಥಿತರಿರಲಿದ್ದಾರೆ.

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ದಿಢೀರಾಗಿ ಬೆಳೆಯುವುದು , ಫಸಲು ನೀಡುವುದು ಅವಸರವೇ ಅಪಘಾತಕ್ಕೆ ಕಾರಣ | ಬೇಗ ಫಸಲು ಬಂದ ಸಸ್ಯ ಬೇಗನೇ ಸಾಯುತ್ತದೆ |

ದಶಕಗಳ ಹಿಂದೆ ವಿಮಾ ಸಂಸ್ಥೆಯೊಂದು ಸಾಗವಾನಿ ಬೆಳೆಯಲು ರೈತರ ಷೇರು ಪಡೆದುಕೊಂಡು ಹತ್ತೊ…

13 hours ago

ಮಾವು ಮಾಂತ್ರಿಕ ಹಾಗೂ ಸುಬ್ರಾಯ ಭಟ್ಟರ 200ಕ್ಕೂ ಹೆಚ್ಚು ನಾಡು ಮಾವು ಹಾಗೂ ಹಲಸು ತಳಿ ಸಂರಕ್ಷಣೆ

ನಾಡು ಮಾವು ಸಂರಕ್ಷಣೆ ಕೆಲಸದ ಮೊದಲ ದಿನವದು. ನವೆಂಬರ್ 2022. ಕಸಿ ಕಡ್ಡಿಗಳನ್ನು…

13 hours ago

ಭಾರತದಲ್ಲಿ ಏರಿದ ತಾಪಮಾನ | ಅತ್ತ ತಾಂಜೇನಿಯಾದಲ್ಲಿ ಭಾರೀ ಮಳೆ, ಪ್ರವಾಹ | 155 ಮಂದಿ ಸಾವು |

ಭಾರತದಲ್ಲಿ(India) ಉರಿ ಬಿಸಿಲಿನ ತಾಪ(Heat) ಏರುತ್ತಿದ್ದರೆ ತಾಂಜೇನಿಯಾದಲ್ಲಿ (Tanzania) ಕಳೆದ ವಾರದಿಂದ ಭಾರೀ…

17 hours ago

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಮುಂದಿನ ವಾರ ಕಾಡಲಿದೆ ರಣ ಬಿಸಿಲು | ದೂರ ಸಾಗಿದ ಮಳೆ | ಬಿಸಿ ಗಾಳಿಯ ಮುನ್ಸೂಚನೆ |

ಮಳೆ ಬರುವ ಕುರುಹೇ ಇಲ್ಲ. ಎಲ್ಲೆಲ್ಲೂ ಬಿಸಿಗಾಳಿಯ ಅಬ್ಬರ, ನೆತ್ತಿ ಸುಡುವ ಸೂರ್ಯ. ರಾಜ್ಯಾದ್ಯಂತ…

17 hours ago

ಹವಾಮಾನ ವೈಪರೀತ್ಯ | ಕೃಷಿ ಕಾರ್ಮಿಕರಿಗೆ ಈಗ ಬಿಸಿಗಾಳಿ ಸಂಕಷ್ಟ | ಕೃಷಿಗೂ ಸಮಸ್ಯೆ-ಕೃಷಿ ಬೆಳವಣಿಗೆ ಕುಂಠಿತ |

ತಾಪಮಾನ ಏರಿಕೆಯಿಂದ ಹಲವು ಕಡೆ ಸಮಸ್ಯೆಯಾಗುತ್ತಿದೆ. ಕೃಷಿ ನಷ್ಟದ ಜೊತೆಗೆ ಗ್ರಾಮೀಣ ಭಾಗದಲ್ಲಿ…

18 hours ago

ಮಳೆಗಾಗಿ ಪುತ್ತೂರು ಶ್ರೀ‌ಮಹಾಲಿಂಗೇಶ್ವರ ದೇವಸ್ಥಾನದಲ್ಲಿ‌ಪರ್ಜನ್ಯ ಜಪ |

ಮಳೆಗಾಗಿ ಪುತ್ತೂರಿನ ಶ್ರೀ‌ಮಹಾಲಿಂಗೇಶ್ವರ ದೇವಳದಲ್ಲಿ‌ ಪರ್ಜನ್ಯ ಜ‌ಪ ನೆರವೇರಿತು.

19 hours ago