ದಶಕಗಳ ಹಿಂದೆ ವಿಮಾ ಸಂಸ್ಥೆಯೊಂದು ಸಾಗವಾನಿ ಬೆಳೆಯಲು ರೈತರ ಷೇರು ಪಡೆದುಕೊಂಡು ಹತ್ತೊ ಹದಿನೈದೋ ವರ್ಷದ ನಂತರ ಹಾಕಿದ ಬಂಡವಾಳಕ್ಕೆ ಲಕ್ಷ ಲಕ್ಷ ಹಣ ವಾಪಸು ಕೊಡುವ ಬರವಸೆ ನೀಡಿತ್ತು. ಆದರೆ ಹತ್ತು ಹದಿನೈದು ವರ್ಷಗಳಿಗೆ ಅದೆಂಥದೇ ಸ್ವರ್ಗ ಸದೃಶ ಭೂಮಿಯಲ್ಲಿ ಅದೆಷ್ಟೇ ಗೊಬ್ಬರ ನೀರು ಆರೈಕೆ ಮಾಡಿದರೂ ನೆಟ್ಟ ಸಾಗವಾನಿ ಮೂರಿಂಚಿಗಿಂತ ಹೆಚ್ಚಿನ ವ್ಯಾಸ ಕ್ಕೆ ಬೆಳೆಯೋಲ್ಲ.
ಮಹಾಗನಿ, ಶ್ರೀಗಂಧ ಮುಂತಾದ ಮರ ಆಗುವ ಜಾತಿಯ ಸಸ್ಯಗಳು ತಮ್ಮ ಒಳಗಿನ ಕೆಂಪು ತೆರಳು ಬೆಳೆಯದೇ ಗಟ್ಟಿ ಯಾಗಿ ಸುಗಂಧ ಭರಿತವೋ, ನಾಟದ ಉಪಯೋಗಕ್ಕೋ ಬರದು. ಕೆಲವೊಮ್ಮೆ ಹೊರಗಿನಿಂದ ಮರ ಬೆಳೆದರೂ ಒಳಗಿನ ತಿರಳು ಬೆಳೆದಿರದು. ಸುಗಂಧ ಉಪಯೋಗಕ್ಕೆ ಬಳಸುವ ಶ್ರೀಗಂಧ, ಚಂದನ, ನಾಟದ ಉಪಯೋಗಕ್ಕೆ ಬಳಸುವ ತೇಗ ಮಹಾಗನಿ ಹೆಬ್ಬೇವು ಕನಿಷ್ಠ ನಲವತ್ತು ಐವತ್ತು ವರ್ಷಗಳ ಕಾಲ ನೈಸರ್ಗಿಕವಾಗಿ ಬೆಳೆಯಲೇ ಬೇಕು.ಸಸಿ ಮರ ನೈಸರ್ಗಿಕವಾಗಿ ಹಂತ ಹಂತವಾಗಿ ಬೆಳೆಯಲೇ ಬೇಕು…. ದಿಡೀರಾಗಿ ಬೆಳೆಯುವುದು , ಫಸಲು ನೀಡುವುದು ಅವಸರವೇ ಅಪಘಾತಕ್ಕೆ ಕಾರಣವಾಗುತ್ತವೆ.
ಮಲೆನಾಡಿನಲ್ಲಿ ಕೃಷಿಕರೊಬ್ಬರು ಅತ್ಯಂತ ವ್ಯವಸ್ಥಿತವಾಗಿ ಬೆಳೆದ ಸಾಗುವಾನಿ ತೋಟದ ದೃಶ್ಯಾವಳಿಯಿದೆ. ಎಷ್ಟೇ ಆರೈಕೆ ಮಾಡಿದರೆ ನಮ್ಮ ಮಲೆನಾಡಿನಲ್ಲಿ “ಹತ್ತು ” ವರ್ಷಗಳಿಗೆ ಇಷ್ಟೇ ಬೆಳೆಯಲು ಸಾಧ್ಯ. ಕೆಲವರು ಎರಡು ಮೂರು ವರ್ಷಗಳಿಗೇ ಅಡಿಕೆ ಸಸಿ ಫಸಲು ಬಿಡುತ್ತದೆ ಎನ್ನುತ್ತಾರೆ. ಹೀಗೆ ಬೇಗ ಫಸಲು ಬಂದ ಸಸ್ಯ ಬೇಗನೇ ಸಾಯುತ್ತದೆ.
ನಮ್ಮ ಮಲೆನಾಡಿನಲ್ಲಿ ಅಡಿಕೆ ನಿಜ ಫಸಲು ಪಡೆಯಲು ಕನಿಷ್ಠ ಹನ್ನೆರಡು ವರ್ಷ ಬೇಕೇ ಬೇಕು. ತಡವಾಗಿ ಮಲೆನಾಡಿನಲ್ಲಿ ಅಡಿಕೆ ಫಸಲು ನೀಡು ವುದರಿಂದ ಮಲೆನಾಡಿನಲ್ಲಿ ಅಡಿಕೆ ಮರದ ಜೀವಿತಾವಧಿ ಹೆಚ್ಚು.ನಮ್ಮ ಹಿರಿಯರ ಪ್ರಕಾರ ಮಲೆನಾಡಿನಲ್ಲಿ ಒಂದು ಅಡಿಕೆ ಮರ ಕನಿಷ್ಠ ಅರವತ್ತು ವರ್ಷ ಫಸಲು ನೀಡುತ್ತದೆ. ಬಯಲು ಸೀಮೆಯಲ್ಲಿ ಬೇಗ ಫಸಲು ನೀಡಿ ಬೇಗ ಫಸಲು ಕುಂಠಿತವಾಗುತ್ತದೆ.
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ಉ ತ್ತಮ ಮಳೆಯ…
ಕರ್ನಾಟಕದಲ್ಲಿ ಮಳೆಯ ಚಟುವಟಿಕೆ ಮತ್ತೆ ಹೆಚ್ಚಾಗುವ ಸೂಚನೆ ದೊರೆತಿದ್ದು, ಮುಂದಿನ ಏಳು ದಿನಗಳ…
ಭಾರತದ ತೆಂಗಿನಕಾಯಿ ರಫ್ತು ಮೌಲ್ಯ ಒಂದೇ ವರ್ಷದಲ್ಲಿ ಶೇ.62ರಷ್ಟು ಏರಿಕೆಯಾಗಿ ₹7,038 ಕೋಟಿಗೆ…
ಒಡಿಶಾದ ಬಾಲಸೋರ್‌ನಲ್ಲಿ ಸಮುದ್ರ ಮಾರ್ಗದ ಮೂಲಕ ಅಡಿಕೆ ಸಾಗಾಟದ ಹಲವು ಪ್ರಕರಣಗಳು ಪತ್ತೆಯಾಗಿದ್ದು,…
ಕರ್ನಾಟಕದ ಹಲವು ಭಾಗಗಳಲ್ಲಿ ಮಳೆ ಮುಂದುವರಿಯುವ ಸೂಚನೆ ಇದ್ದು, ಸೆ.22ರಿಂದ ಕರಾವಳಿ–ಮಲೆನಾಡಿನಲ್ಲಿ ಮಳೆ…
ತಂದೆಯ ನೆನಪಿಗಾಗಿ ಇಂದೋರ್‌ನ ವ್ಯಕ್ತಿಯೊಬ್ಬರು ಗೋಮಯದಿಂದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ತಯಾರಿಸಿ…