ಸುಳ್ಯ: ಸುಳ್ಯದಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದ ಸುಂದರ ಸರಳಾಯ (81) ಶನಿವಾರ ನಿಧನರಾದರು. ವಯೋಸಹಜ ಅಸೌಖ್ಯದಿಂದ ಚಿಕಿತ್ಸೆಯಲ್ಲಿದ್ದ ಅವರು ಸುಳ್ಯದ ಖಾಸಗೀ ಆಸ್ಪತ್ರೆಯಲ್ಲಿ ನಿಧನರಾದರು.
ಸುಳ್ಯದ ಇವರ `ರಾಮ್‍ಪ್ರಸಾದ್’ ಹೋಟೆಲ್‍ನಲ್ಲಿ ಅತ್ಯಂತ ಕಡಿಮೆ ದರದಲ್ಲಿ ಊಟ ನೀಡುವ ಮೂಲಕ ಸುಂದರ ಸರಳಾಯರು ಸುಳ್ಯದ ಅನ್ನದಾತರು ಎಂದೇ ಪ್ರಸಿದ್ಧರಾಗಿದ್ದರು. ಐದು ದಶಕಗಳಿಂದಲೂ ಹೆಚ್ಚು ಸಮಯ ಹೋಟೆಲ್ ಉದ್ಯಮ ನಡೆಸುತ್ತಿರುವ ಇವರು ತನ್ನ ಹೋಟೆಲ್‍ನಲ್ಲಿ ಈಗಲೂ 10 ರೂಗೆ ಸ್ವಾದಿಷ್ಟವಾದ ಊಟ ಬಡಿಸುತ್ತಿದ್ದರು. ಇಂದಿರಾ ಕ್ಯಾಂಟೀನ್, ಅಮ್ಮಾ ಕ್ಯಾಂಟೀನ್‍ಗಳ ಕಲ್ಪನೆ ಹುಟ್ಟುವುದಕ್ಕಿಂದ ಹಲವು ದಶಕಗಳ ಮೊದಲೇ ಸರಳಾಯರು ಸುಳ್ಯದಲ್ಲಿ ಅತೀ ಕಡಿಮೆ ದರದಲ್ಲಿ ಊಟ, ತಿಂಡಿ ನೀಡುತ್ತಾ ಬಂದಿದ್ದರು. ಕಳೆದ ಐದು ದಶಕಗಳಿಂದಲೂ 1 ರೂ, 2ರೂ, 3ರೂ, 4ರೂ ಬಳಿಕ 5 ರೂಗೆ ಊಟ ಬಡಿಸುತ್ತಿದ್ದ ಇವರ ಹೋಟೆಲ್‍ನಲ್ಲಿ ಊಟದ ದರ 10 ರೂಗಿಂತ ಮೇಲೆ ಏರಲೇ ಇಲ್ಲ. ಉಳಿದ ಹೋಟೆಲ್‍ಗಳಲ್ಲಿ ಊಟಕ್ಕೆ 40 ರೂ ದರ ಇರುವಾಗ ಇವರು ನೂರಾರು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ 10 ರೂಗೆ ಹೊಟ್ಟೆ ತುಂಬಾ ಊಟ ನೀಡಿ ಅನ್ನದಾತರು ಎನಿಸಿಕೊಂಡಿದ್ದರು. ತನ್ನ ಅನ್ನ ಸೇವೆಯಿಂದ ಹಲವಾರು ಸನ್ಮಾನ, ಪುರಸ್ಕಾರಗಳಿಗೆ ಭಾಜನರಾಗಿದ್ದರು. ಇವರು ಪತ್ನಿ ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಶಾಸಕ ಎಸ್.ಅಂಗಾರ ಸೇರಿದಂತೆ ಹಲವರು ಅಂತಿಮ ದರ್ಶನ ಪಡೆದರು.
25.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಅಡಿಕೆ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆಯ ಬಗ್ಗೆ ಡಾ.ಭವಿಷ್ಯ ಅವರು ನೀಡಿರುವ ಮಾಹಿತಿ ಇಲ್ಲಿದೆ..(ಸಂಪೂರ್ಣ…
ಅಡಿಕೆ ಎಲೆಚುಕ್ಕಿ ರೋಗ ನಿರ್ವಹಣೆ ಹೇಗೆ..? ಕೃಷಿ ವಿಚಾರಗೋಷ್ಟಿಯಲ್ಲಿ ಮಾತನಾಡಿರುವ ಆಡಿಯೋ ಇಲ್ಲಿದೆ..
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…