ಸುಳ್ಯ: ಸುಳ್ಯ ವಿಧದಾನಸಭಾ ಕ್ಷೇತ್ರದಿಂದ ಸತತ 6 ಬಾರಿ ಶಾಸಕರಾಗಿ ಆಯ್ಕೆಯಾದ ಅಂಗಾರರಿಗೆ ಮಂತ್ರಿ ಸ್ಥಾನ ನೀಡದೆ ಬಿಜೆಪಿ ಅನ್ಯಾಯ ಮಾಡಿದೆ. ಮಾತ್ರವಲ್ಲದೆ ಈ ಮೂಲಕ ಸುಳ್ಯಕ್ಕೆ ಮತ್ತೊಮ್ಮೆ ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಗೆ ಅವಮಾನ ಮಾಡಿದೆ. ಸುಳ್ಯದಲ್ಲಿ ಅತಿ ಹೆಚ್ಚು ರೈತರಿದ್ದು ನಮ್ಮ ಸಮಸ್ಯೆ ಹೇಳಿಕೊಳ್ಳಲು ಮತ್ತು ಪರಿಹಾರ ದೊರಕಲು ಸುಲಭವಾಗುತ್ತಿತ್ತು . ಹಾಗಾಗಿ ಸುಳ್ಯಕ್ಕೆ ಸಚಿವ ಸ್ಥಾನ ನೀಡದೇ ಇರುವುದು ತುಂಬಾ ನೋವು ತಂದಿದೆ ಮತ್ತು ನಮ್ಮ ರೈತ ಸಂಘವು ತೀವ್ರವಾಗಿ ಖಂಡಿಸುತ್ತದೆ ಎಂದು ತಾಲೂಕು ರೈತ ಸಂಘ ಮತ್ತು ಹಸಿರುಸೇನೆ ಇದರ ಕಾರ್ಯದರ್ಶಿ ತೀರ್ಥರಾಮ ನೆಡ್ಚಿಲು ಹೇಳಿದ್ದಾರೆ.
ಸುಳ್ಯದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಬಿಜೆಪಿ ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಾದರೂ ನಮ್ಮ ಜಿಲ್ಲೆಯ ರೈತರನ್ನು ಹಿತದೃಷ್ಟಿಯಲ್ಲಿಟ್ಟುಕೊಂಡು ಸುಳ್ಯಕ್ಕೆ ಮಂತ್ರಿಸ್ಥಾನ ನೀಡಲಿ ಎಂದು ಭಾವಿಸುತ್ತೇವೆ ಎಂದು ತೀರ್ಥರಾಮ ನೆಡ್ಚಿಲು ಹೇಳಿದರು.
ಜಿಲ್ಲಾ ರೈತ ಸಂಘದ ಅದ್ಯಕ್ಷರಾದ ಸುರೇಶ್ ಭಟ್ ಕೊಜಂಬೆ ಮಾತನಾಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 7 ಜನ ಶಾಸಕರಿದ್ದು ಇನ್ನು ಮುಂದೆ ಜಿಲ್ಲೆಯಲ್ಲಿ ಬಿಜೆಪಿ ಯನ್ನು ಜಿಲ್ಲೆಯ ಜನ ಬೆಂಬಲಿಸಬೇಕೇ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಲೋಲಜಾಕ್ಷ ಭೂತಕಲ್ಲು, ತೀರ್ಥರಾಮ ಅರಂತೋಡು , ಲೋಕಯ್ಯ ಅತ್ಯಾಡಿ , ಮುರಳೀಧರ ಅಡ್ಕಾರು , ದಿವಾಕರ ಪೈ ಮಾಜಿಗುಂಡಿ , ನಾರಾಯಣ ಪಾಟಾಳಿ ಉಬರಡ್ಕ , ತೀರ್ಥರಾಮ ತೊಡಿಕಾನ , ಸೆಬಾಸ್ಟಿಯನ್ ಮಡಪ್ಪಾಡಿ,ಧರ್ಮಪಾಲ ಗೌಡ ಕೊಯಿಂಗಾಜೆ ಮತ್ತಿತರರು ಉಪಸ್ಥಿತರಿದ್ದರು.
ಕೇಂದ್ರ ಬಜೆಟ್‌ನಲ್ಲಿ ಕೃಷಿ ವಲಯಕ್ಕೆ 1 ಲಕ್ಷದ 37 ಸಾವಿರದ 757 ಕೋಟಿ…
ಆನೆಗಳ ಸಂಖ್ಯೆಗೆ ಅನುಗುಣವಾಗಿ ಅರಣ್ಯ ಪ್ರದೇಶ ಹೆಚ್ಚಳವಾಗದ ಕಾರಣ ಆನೆ-ಮಾನವ ಸಂಘರ್ಷ ಹೆಚ್ಚುತ್ತಿದೆ.ಜನರ…
ಹೊಸರುಚಿಯ ಮೂಲಕ ಈ ವಾರ ಪಪಾಯ ಹಣ್ಣು ಬರ್ಫಿಯ ಬಗ್ಗೆ ಹೇಳಿದ್ದಾರೆ ಗೃಹಿಣಿ…
ರಾಮಸೀತೆಯರೊಂದಾಗಿ ಕುಶಲವರಿಗೆ ತಂದೆ ತಾಯಿ ಲಭಿಸಿದ ಘಳಿಗೆಯು ಎಲ್ಲರಿಗೂ ಸಂಭ್ರಮಯೋಗ್ಯವಾಗಿ ಕಾಣುತ್ತದೆ. ಹಾಗಾಗಿ…
ಅಲ್ಪಾವಧಿ ಬೆಳೆ ಸಾಲದ ಬಗ್ಗೆ ಕಳೆದ ವಾರ ತಿಳಿಸಲಾಗಿತ್ತು. ಅದರ ಮುಂದುವರಿದ ಭಾಗವಾಗಿ…
ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಲು ಈಗಾಗಲೇ ತುಮಕೂರು ಜಿಲ್ಲೆಯಲ್ಲಿ ತೆರೆದಿರುವ 10…