ಸುಳ್ಯ ಎ ಪಿ ಎಂ ಸಿ ಯಲ್ಲಿ ಅಡಿಕೆ ಖರೀದಿಗೆ ನಿರ್ಧಾರ | ಸುಳ್ಯ ಶಾಸಕರ ನೇತೃತ್ವದಲ್ಲಿ ನಡೆದ ಸಭೆ |

April 24, 2020
6:38 PM
ಸುಳ್ಯ:  ಸುಳ್ಯ ಎ ಪಿ ಎಂ ಸಿ ಪ್ರಾಂಗಣದಲ್ಲಿ ಖಾಸಗಿ ವರ್ತಕರಿಂದ ಅಡಿಕೆ ಹಾಗೂ ಗೇರುಬೀಜ ಖರೀದಿ ನಡೆಸಲು ಅವಕಾಶ ನೀಡಲು ಶುಕ್ರವಾರ ನಿರ್ಧರಿಸಲಾಗಿದೆ. ಆದರೆ ಒಬ್ಬ ರೈತರಿಂದ ಗರಿಷ್ಟ ಒಂದು ಕ್ವಿಂಟಾಲ್ ಗೆ ಮಿತಿ ಹಾಕಲಾಗಿದೆ.

ಕೇಂದ್ರ ಸರಕಾರ ಹೊರಡಿಸಿದ ಲಾಕ್ಡೌನ್ ಆದೇಶದ ಎರಡನೇ ಪರಿಷ್ಕೃತ ಪಟ್ಟಿಯಲ್ಲಿ  ಕೃಷಿ ಉತ್ಪನ್ನ ಖರೀದಿ ಹಾಗೂ ಮಾರಾಟಕ್ಕೆ ಅವಕಾಶ ನೀಡಿತ್ತು. ಇದರಲ್ಲಿ  ಅಡಿಕೆ, ಕೊಕೋ, ಗೇರುಬೀಜ, ಸಾಂಬಾರ ಬೆಳೆಗಳೂ ಸೇರಿತ್ತು. ಇದರಂತೆ ಜಿಲ್ಲೆಯ ಪುತ್ತೂರು ಸೇರಿದಂತೆ ವಿವಿದೆಡೆ ಖಾಸಗಿ ವರ್ತಕರಿಂದ ಅಡಿಕೆ ಖರೀದಿಗೆ ಅವಕಾಶ ನೀಡಲಾಗಿತ್ತು. ಸುಳ್ಯದಲ್ಲಿ ಅಧಿಕೃತವಾಗಿ ಈ ಅವಕಾಶ ಇರಲಿಲ್ಲ. ಇದೀಗ ಶಾಸಕ ಅಂಗಾರ ಅಧ್ಯಕ್ಷತೆಯಲ್ಲಿ  ನಡೆದ ಸಭೆಯಲ್ಲಿ  ಖರೀದಿಗೆ ಅವಕಾಶ ನೀಡಲಾಗಿದೆ.

ಆದರೆ ನಿಯಮದ ಪ್ರಕಾರ ಖಾಸಗಿ ವಾಹನಗಳು ರಸ್ತೆಗಿಳಿಯಬಾರದು . ಹೀಗಾಗಿ ಎಪಿಎಂಸಿ ವತಿಯಿಂದಂದಲೇ ವಾಹನ ವ್ಯವಸ್ಥೆ ಮಾಡಲಾಗುತ್ತಿದೆ. ಅಡಿಕೆ ಮತ್ತು ಗೇರು ಬೀಜ ಮಾರಾಟ ಮಾಡುವ ರೈತರು ತಮ್ಮ‌ವ್ಯಾಪ್ತಿಯ ಎಪಿಎಂಸಿ ಸದಸ್ಯರುಗಳನ್ನು ಅಥವಾ ಸುಳ್ಯ ಎಪಿಎಂಸಿ ಕಚೇರಿ (08257-233711) ನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ. ಬೆಳಗ್ಗೆ 7 ಗಂಟೆ ಯಿಂದ ಮಧ್ಯಾಹ್ನ 12 ಗಂಟೆ ವರೆಗೆ ಖರೀದಿ ನಡೆಯುತ್ತದೆ.

ಸಭೆಯಲ್ಲಿ ಪುತ್ತೂರು ಸಹಾಯಕ ಕಮಿಷನರ್ ಡಾ.ಯತೀಶ್ ಉಳ್ಳಾಲ್, ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ಎ.ಪಿ.ಎಂ.ಸಿ.ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ,‌ ಉಪಾಧ್ಯಕ್ಷ ಸಂತೋಷ್ ಜಾಕೆ, ತಹಶೀಲ್ದಾರ್ ಅನಂತ ಶಂಕರ್ ಮೊದಲಾದವರಿದ್ದರು.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಪತ್ರಕರ್ತ, ಕೃಷಿಕ : ಮಹೇಶ್ ಪುಚ್ಚಪ್ಪಾಡಿ
February 18, 2026
11:06 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 05.11.2025 | ಎಲ್ಲೆಲ್ಲಾ ಮಳೆ ನಿರೀಕ್ಷೆ..? ನಿರೀಕ್ಷೆಯಂತೆ ಮಳೆಯಾಗದಿರಲು ಕಾರಣವೇನು..?
November 5, 2025
2:24 PM
by: ಸಾಯಿಶೇಖರ್ ಕರಿಕಳ
ಹಸಿರು ಹೈಡ್ರೋಜನ್ ಘಟಕ ಕಾರ್ಯಾಚರಣೆ | ಹಸಿರು ಇಂಧನ ಉತ್ಪಾದನೆಗೆ ಒತ್ತು
August 1, 2025
7:38 PM
by: The Rural Mirror ಸುದ್ದಿಜಾಲ
ಮಕ್ಕಳ ಪುಟ | ನಿಮ್ಮ ಚಿತ್ರ -ನಮ್ಮ ಬೆಳಕು | ಅಯಂಶಿ ಕೆ.ಎಚ್ , ಬಹರೇನ್
July 5, 2025
8:00 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror