ಸುಳ್ಯ: ಸುಳ್ಯ ತಹಶೀಲ್ದಾರ್ ಎನ್.ಎ.ಕುಂಞಿ ಅಹಮ್ಮದ್ ಅವರಿಗೆ ಮಂಡ್ಯ ಜಿಲ್ಲೆಯ ನೆಲಮಂಗಲ ತಾಲೂಕು ತಹಶೀಲ್ದಾರ್ ಆಗಿ ವರ್ಗಾವಣೆಯಾಗಿದೆ. ಪುತ್ತೂರು ತಹಶೀಲ್ದಾರ್ ಅನಂತಶಂಕರ ಅವರಿಗೆ ಅಧಿಕಾರ ಹಸ್ತಾಂತರಿಸಿದ ಕುಂಞಿ ಅಹಮ್ಮದ್ ಫೆ.1 ರಂದು ಸುಳ್ಯದಿಂದ ತೆರಳಿದ್ದಾರೆ. ಸುಳ್ಯಕ್ಕೆ ತಹಶೀಲ್ದಾರ್ ಇನ್ನಷ್ಟೇ ನೇಮಕ ಆಗಬೇಕಾಗಿದ್ದು ಅದುವರೆಗೆ ಅನಂತಶಂಕರ್ ಪ್ರಭಾರ ತಹಶೀಲ್ದಾರ್ ಆಗಿರುತ್ತಾರೆ.
ಒಂದು ವರುಷದಿಂದ ಸುಳ್ಯದ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸಿದ್ದ ಕುಂಞಿ ಅಹಮ್ಮದ್ ಜನಪರ ಅಧಿಕಾರಿ ಎಂದು ಹೆಸರು ಪಡೆದಿದ್ದರು. ಜನರ ಸಮಸ್ಯೆಗಳನ್ನು ನೇರವಾಗಿ ಆಲಿಸಿ ತ್ವರಿತವಾಗಿ ಕೆಲಸ ಮಾಡಿಕೊಡುತ್ತಿದ್ದರು. ಜನರಿಗೆ ಅತ್ಯಂತ ಹತ್ತಿರವಾಗಿ ಜನರ ಮಧ್ಯೆ ಕೆಲಸ ಮಾಡುತ್ತಿದ್ದರು. ಒಂದು ವರ್ಷದ ಅವಧಿಯಲ್ಲಿ ನಾಲ್ಕನೇ ಬಾರಿ ಇವರ ವರ್ಗಾವಣೆ ಆಗಿದೆ. ಈ ಹಿಂದೆ ಮೂರು ಬಾರಿ ಇವರಿಗೆ ವರ್ಗಾವಣೆ ಆಗಿದ್ದರೂ ಕಾರಣಾಂತರಗಳಿಂದ ತಡೆ ಹಿಡಿಯಲಾಗಿತ್ತು. ಇವರ ವರ್ಗಾವಣೆಗೆ ಜನರಿಂದ ಭಾರೀ ವಿರೋಧ, ಪ್ರತಿಭಟನೆಗಳು ನಡೆದಿತ್ತು. ಆದರೆ ಅತ್ಯಂತ ಜನಪ್ರಿಯ ಮತ್ತು ನಿಷ್ಟಾವಂತ ಅಧಿಕಾರಿಯನ್ನು ತಾಲೂಕಿನಲ್ಲಿಯೇ ಉಳಿಸಬೇಕೆಂದು ಜನರಿಂದ ಬೇಡಿಕೆ ಇದ್ದರೂ ಅವರನ್ನು ಇಲ್ಲಿ ಉಳಿಸಲು ಜನಪ್ರತಿನಿಧಿಗಳು ಮತ್ತು ಸರಕಾರ ಪ್ರಯತ್ನ ನಡೆಸಿಲ್ಲ ಎಂಬ ನೋವನ್ನು ಸಾರ್ವಜನಿಕರು ತೋಡಿಕೊಳ್ಳುತ್ತಾರೆ. ಇನ್ನೂ ಒಂದೆರಡು ವರುಷ ಸುಳ್ಯದಲ್ಲಿ ಕೆಲಸ ಮಾಡಲು ಕುಂಞಿ ಅಹಮ್ಮದ್ ಮನಸ್ಸು ಮಾಡಿದ್ದರೂ, ಅವರನ್ನು ವರ್ಗಾವಣೆ ಮಾಡಿಸಲು ಕೆಲವೊಂದು ರಾಜಕೀಯ ಒತ್ತಡಗಳು ಕೆಲಸ ಮಾಡಿದೆ ಎಂಬ ಮಾತುಗಳೂ ಸಾರ್ವಜನಿಕ ವಲಯದಲ್ಲಿ ದಟ್ಟವಾಗಿದೆ. ತಾಲೂಕು ಕಚೇರಿಯನ್ನು ದಲ್ಲಾಳಿಗಳಿಂದ ಮುಕ್ತ ಮಾಡಿ ಪಾರದರ್ಶಕ ಮತ್ತು ಜನಸ್ನೇಹಿ ಕಚೇರಿಯನ್ನಾಗಿ ಪರಿವರ್ತಿಸಲು ಕುಂಞಿ ಅಹಮ್ಮದ್ ಪ್ರಯತ್ನ ನಡೆಸಿದ್ದರು. ಇದು ಕೂಡ ಕೆಲವರ ಕೆಂಗಣ್ಣಿಗೆ ಗುರಿಯಾಗಿತ್ತು ಎಂದು ಹೇಳಲಾಗಿದೆ.
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…