ಸುಳ್ಯ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸುಳ್ಯ ತಾಲೂಕು ಘಟಕ ಹಾಗೂ ಅರಂತೋಡು ವಲಯ ಘಟಕ ಹಮ್ಮಿಕೊಂಡ ರೈತರ ಸಾಲ ಮನ್ನಾ ವಿಳಂಬ ಬಗ್ಗೆ ಅರಂತೋಡು ಸಹಕಾರಿ ಸಂಘದ ಎದುರು ಗುರುವಾರ ಬೆಳಗ್ಗೆ ಪ್ರತಿಭಟನೆ ಪ್ರಾರಂಭವಾಯಿತು.
ಮದ್ಯಾಹ್ನ ಸಹಕಾರಿ ಬ್ಯಾಂಕ್ ನ ಸುಳ್ಯ ವಲಯ ಸೂಪರ್ವೈಸರ್ ಕೊಟ್ಟ ಸಮಜಾಯಿಷಿಗೆ ರೈತರು ಒಪ್ಪದೇ ಡಿ ಆರ್ ಆವರೇ ಬಂದು ಸರಿಯಾದ ಉತ್ತರ ಕೊಡಬೇಕು ಇಲ್ಲದೇ ಇದ್ದರೆ
ಅಹೋರಾತ್ರಿ ಧರಣಿ ಕುಳಿತುಕೊಳ್ಳುವುದಾಗಿ ಪ್ರತಿಭಟನಾಕಾರರು ಹೇಳಿದರು. ಕೊನೆಗೆ ಸುಳ್ಯದ ತಹಶೀಲ್ದಾರರು ಮುತುವರ್ಜಿ ವಹಿಸಿ ಅರಂತೋಡಿಗೆ ಆಗಮಿಸಿದರು ಮತ್ತು ಸಹಕಾರಿ ದ .ಕ ಜಿಲ್ಲಾ ರಿಜಿಸ್ಟ್ರಾರ್ ಬರುವಂತೆ ಹಾಗು ಬೇರೊಂದು ಕಾರ್ಯಕ್ರಮಕ್ಕೆ ಬಂದಿದ್ದ ಜಾಯಿಂಟ್ ರಿಜಿಸ್ಟ್ರಾರ್ ಅರಂತೋಡಿಗೆ ಬರುವಂತೆ ವ್ಯವಸ್ಥೆ ಮಾಡಿದರು. ಜಾಯಿಂಟ್ ರಿಜಿಸ್ಟ್ರಾರ್ ಅವರು ರೈತರ ಅಹವಾಲು ಸ್ವೀಕರಿಸಿ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ ಸಾಲ ಮನ್ನಾ ಎಲ್ಲಾ ರೈತರ ಖಾತೆಗಳಿಗೆ ಜಮಾ ಮಾಡುವಂತೆ ಡಿ ಆರ್ ಅವರಿಗೂ ಅಸಿಸ್ಟೆಂಟ್ ರಿಜಿಸ್ಟ್ರಾರ್ ಅವರಿಗೆ ಸೂಚಿಸಿದರು.
ಈ ಸಂದರ್ಭ ಮಾತನಾಡಿದ ರೈತ ಸಂಘದ ಮುಖಂಡರು, ಸುಳ್ಯ ತಾಲೂಕಿನ ಸುಮಾರು ನಾಲ್ಕು ಸಾವಿರ ರೈತರ ಅರ್ಜಿ ಅಪ್ರೂವಲ್ ಗೆ ಇರುವ ಸಣ್ಣ ಪುಟ್ಟ ನ್ಯೂನತೆ ಗಳನ್ನು ಸರಿಪಡಿಸಿ ತಾಲುಕಿನ ಎಲ್ಲಾ ರೈತರಿಗೂ ಸಾಲ ಮನ್ನ ದೊರಕಿಸಿ ಕೊಡಬೇಕೆಂದು ಒತ್ತಾಯಿಸಿದರು. ಜಾಯಿಂಟ್ ರಿಜಿಸ್ಟ್ರಾರ್ ಅವರು ಅಂತಹ ನ್ಯೂನತೆಗಳನ್ನು ತಹಶೀಲ್ದಾರ ರ ಸಮಿತಿ ಸರಿಪಡಿಸಿ ಕೊಡಲು ತಹಶೀಲ್ದಾರರಿಗೆ ಸೂಚಿಸಿದರು. ಸುಳ್ಯ ಶಾಸಕ ಅಂಗಾರ ಅವರು ಬೇರೊಂದು ಕಾರ್ಯಕ್ರಮದ ಇದ್ದು ಸಹಕಾರಿ ಸಚಿವರಲ್ಲಿ ಮಾತಾಡಿ ವ್ಯವಸ್ಥೆ ಮಾಡುತೇನೆ ಎಂದು ರೈತ ಸಂಘದ ಮುಖಂಡರಿಗೆ ತಿಳಿಸಿದ್ದರು.
ಸಭೆಯಲ್ಲಿ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ರವಿಕಿರಣ ಪುಣಚ ,ಸುಳ್ಯ ತಾಲೂಕು ರೈತ ಸಂಘದ ಪದಾಧಿಕಾರಿಗಳು .ಅರಂತೋಡು ,ಜಾಲ್ಸೂರು ,ಅಜ್ಜಾವರ, ಆಲೆಟ್ಟಿ, ಉಬರಡ್ಕ, ಮಡಪ್ಪಾಡಿ ಮುಂತಾದ ಹಲವಾರು ಗ್ರಾಮಗಳ ರೈತ ಸಂಘ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು .
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel