MIRROR FOCUS

ಸುಳ್ಯ ತಾಲೂಕಿನ ಸೇತುವೆಗಳ ತಪಾಸಣೆ : ನಡೆಯುತ್ತಿದೆ ಸೇತುವೆಗಳ ಬಲ ಪರೀಕ್ಷೆ…

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಸುಳ್ಯ: ಲೋಕೋಪಯೋಗಿ ಸುಳ್ಯ ಉಪವಿಭಾಗದ ಪ್ರಮುಖ ಸೇತುವೆಗಳ ತಪಾಸಣಾ ಕಾರ್ಯ ನಡೆಸಲಾಗುತ್ತಿದೆ. ಲೋಕೋಪಯೋಗಿ ಇಲಾಖೆಯ ಯೋಜನೆ ಮತ್ತು ರಸ್ತೆಗಳ ಆಸ್ತಿ ನಿರ್ವಹಣಾ ಕೇಂದ್ರದ ಸೇತುವೆ ತಪಾಸಣಾ ವಾಹನವು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದ್ದು ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳಲ್ಲಿನ ಪ್ರಮುಖ ಲೋಕೋಪಯೋಗಿ ಇಲಾಖೆಯ ಸೇತುವೆಗಳ ತಪಾಸಣೆ ನಡೆಸಲಾಗುತ್ತಿದೆ. ಮಂಗಳವಾರ ಸುಳ್ಯ ತಾಲೂಕಿನ ಪ್ರಮುಖ ಸೇತುವೆಗಳ ತಪಾಸಣೆ ನಡೆಸಲಾಗಿದ್ದು ಬುಧವಾರವೂ ಸೇತುವೆಗಳ ಬಲ ಪರೀಕ್ಷೆ ಮುಂದುವರಿಯಲಿದೆ.

Advertisement

ಆಧುನಿಕ ತಪಾಸಣಾ ವಾಹನದ ಸಹಾಯದಿಂದ ಸೇತುವೆಗಳ ಇಂಚು ಇಂಚನ್ನು ಪರಿಶೀಲಿಸುತ್ತಾರೆ. ಸೇತುವೆಗಳ ಫಿಲ್ಲರ್, ಸ್ಲಾಬ್, ಗರ್ಡರ್ ಮತ್ತಿತರ ಭಾಗಗಳನ್ನು ತಪಾಸಣೆ ನಡೆಸಲಾಗುತ್ತದೆ. ಸೇತುವೆಯ ಸಂಪೂರ್ಣ ಪರೀಕ್ಷೆ ನಡೆಸಿ ಸೇತುವೆಯ ಯಾವುದಾದರೂ ಭಾಗಗಳಿಗೆ ಹಾನಿ ಉಂಟಾಗಿದೆಯೇ ಅಥವಾ ಸೇತುವೆ ಶಿಥಿಲಗೊಂಡಿದೆಯೇ ಎಂದು ಪತ್ತೆ ಹಚ್ಚಲಾಗುತ್ತದೆ. ತಪಾಸಣೆ ನಡೆಸಿದ ಬಳಿಕ ಸೇತುವೆಯ ಕುರಿತು ವಿಸ್ತೃತ ವರದಿಯಯನ್ನು ಸಲ್ಲಿಸಲಾಗುತ್ತದೆ. ಈ ವರದಿಯ ಆಧಾರದಲ್ಲಿ ಸೇತುವೆಯ ದುರಸ್ಥಿ, ನವೀಕರಣ ಅಥವಾ ಪುನರ್ ನಿರ್ಮಾಣ ಕಾರ್ಯ ನಡೆಸಲಾಗುತ್ತದೆ.

ಸುಳ್ಯ ತಾಲೂಕಿನಲ್ಲಿ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿನ ಅಡ್ಕಾರು, ಏನೆಕಲ್ಲು, ಸುಬ್ರಹ್ಮಣ್ಯ, ಪುಳಿಕುಕ್ಕು ಮತ್ತಿತರ ಪ್ರಮುಖ ಸೇತುವೆಗಳ ಪರಿಶೀಲನಾ ಕಾರ್ಯ ನಡೆಸಲಾಗುತ್ತದೆ. ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಕಾಂತಮಂಗಲ ಸೇತುವೆ, ನಾಗಪಟ್ಟಣ ಸೇತುವೆಗಳ ತಪಾಸಣೆಯನ್ನೂ ನಡೆಸಲಾಗುತ್ತದೆ. ತಪಾಸಣೆಯ ವರದಿ ದೊರೆತ ಬಳಿಕ ಸೇತುವೆಗಳ ನಿರ್ವಹಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸುಳ್ಯ ಲೋಕೋಪಯೋಗಿ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸಣ್ಣೇ ಗೌಡ ತಿಳಿಸಿದ್ದಾರೆ.

ಕಳೆದ ವರ್ಷ ನವೀಕರಣಗೊಂಡ ಕಾಂತಮಂಗಲ ಸೇತುವೆಯನ್ನು ಮಂಗಳವಾರ ಮಧ್ಯಾಹ್ನ ಪರಿಶೀಲಿಸಲಾಯಿತು. ಲೋಕೋಪಯೋಗಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸಣ್ಣೇ ಗೌಡ, ಸೇತುವೆ ತಪಾಸಣಾ ವಾಹನದ ಇಂಜನಿಯರ್‍ಗಳಾದ ಚೆನ್ನಬಸವೇಶ್, ಮಧು ಗೌಡ, ಯತೀಶ್, ಸುಳ್ಯ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದ ಇಂಜಿನಿಯರ್ ಗ ಳಾದ ಮಣಿಕಂಠ, ಎಸ್.ಎಸ್.ಹುಕ್ಕೇರಿ, ನೀರು ಸರಬರಾಜು ವಿಭಾಗದ ಎಇಇ ಸುರೇಶ್, ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಪ್ರೊ.ಚಂದ್ರಶೇಖರ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ತಪಾಸಣಾ ವಾಹನವು ಜಿಲ್ಲೆಯಾದ್ಯಂತ ಸೇತುವೆಗಳ ತಪಾಸಣೆ ನಡೆಸಲಿದೆ ಎಂದು ಇಂಜಿನಿಯರ್ ಗಳು ತಿಳಿಸಿದ್ದಾರೆ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ರಾಶಿಗಳಿಗೆ ಲಕ್ಷ್ಮಿದೇವಿ ಆಶೀರ್ವಾದದಿಂದ ಅಪಾರ ಸಂಪತ್ತು ಪ್ರಾಪ್ತಿ | ಏನು ಮಾಡ್ಬೇಕು? |

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

4 hours ago

ಕದನ ವಿರಾಮ ಬಳಿಕ ಪರಿಸ್ಧಿತಿ ಸಾಮಾನ್ಯ ಸ್ಧಿತಿಗೆ | ಶಾಂತಿ ಸ್ಧಾಪನೆಯ ಉದ್ದೇಶಕ್ಕೆ ಪೂರಕ ವಾತಾವರಣ

ಕದನ ವಿರಾಮ ಘೋಷಣೆ ಬಳಿಕ ಪಾಕಿಸ್ತಾನ ಗಡಿಗೆ ಹೊಂದಿಕೊಂಡಿರುವ ರಾಜ್ಯಗಳ ಪರಿಸ್ಧಿತಿ ಸಾಮಾನ್ಯ…

13 hours ago

ಮುಳಿಯ ಕೃಷಿಗೋಷ್ಟಿ | ಕೃಷಿಕರೇ ಕೃಷಿ ಮಾರುಕಟ್ಟೆ ಸೃಷ್ಟಿಸಿಕೊಳ್ಳುವುದು ಹೇಗೆ..?

ಕೃಷಿಯಷ್ಟೇ ಅಲ್ಲ ಕೃಷಿ ವಸ್ತುಗಳ ಮಾರುಕಟ್ಟೆ ಹಾಗೂ ಕೃಷಿ ಬೆಳವಣಿಗೆಯ  ಬಗ್ಗೆ ಪುತ್ತೂರಿನ…

13 hours ago

ಈ ರಾಶಿಯವರಿಗೆ ಒಂಟಿಯಾಗಿರುವುದೇ ಇಷ್ಟ, ಫ್ರೆಂಡ್ಸೂ ಬೇಡ, ಫ್ಯಾಮಿಲಿಯವ್ರೂ ಬೇಡ…!

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಾಭಕ್ತರದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490

1 day ago

ಬದುಕು ಪುರಾಣ | ಮೂಡದಿರಲಿ, ಮಂಥರೆ ಮನಸ್ಸು

ಸಂಸ್ಕಾರದಿಂದ ಮೀಯದ ಮನಸ್ಸು, ತನ್ನ ಬಗ್ಗೆ ಯೋಚಿಸುವುದಿಲ್ಲ. ತನ್ನ ಭವಿಷ್ಯದತ್ತ ನೋಟ ಹರಿಸುವುದಿಲ್ಲ.…

1 day ago

ಕದನ ವಿರಾಮ ಘೋಷಣೆ | ಭಾರತ ಮತ್ತು ಪಾಕಿಸ್ತಾನ ಗಡಿಯಾಚೆಗಿನ ದಾಳಿಯನ್ನು ಕೊನೆಗೊಳಿಸಲು ಒಪ್ಪಿಕೊಂಡಿವೆ

ಶನಿವಾರ ಸಂಜೆ 5 ಗಂಟೆಗೆ ಆರಂಭವಾದ ತೀವ್ರ ಘರ್ಷಣೆಗಳ ನಂತರ ಭಾರತ ಮತ್ತು…

2 days ago