ಸುಳ್ಯ: ಸುಳ್ಯ ತಾಲೂಕು ಗೌಡರಯುವ ಸೇವಾ ಸಂಘದಿಂದ ಪ್ರಾಯೋಜಿಸಲ್ಪಟ್ಟ ಗೌಡ ತರುಣ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಗೌರವಾಧ್ಯಕ್ಷರಾಗಿ ಅಕ್ಷಯ್ ಕೆ.ಸಿ, ಅಧ್ಯಕ್ಷರಾಗಿ ರಜತ್ ಗೌಡ, ಪ್ರಧಾನ ಕಾರ್ಯದರ್ಶಿಯಾಗಿ ಕಿರಣ್‍ಕುಮಾರ್ ಗುಡ್ಡೆಮನೆ ಆಯ್ಕೆಯಾಗಿದ್ದಾರೆ. ಸುಳ್ಯ ವೆಂಕಟರಮಣ ಟ್ರೇಡರ್ಸ್‍ನಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ವರದರಾಜ್ ಸಂಕೇಶ್, ಲೋಹಿತ್ ಕಳಂಜ, ಸಂಘಟನಾ ಕಾರ್ಯದರ್ಶಿಯಾಗಿ ಗಣೇಶ್ ಬಂದಡ್ಕ, ನಿಕೇಶ್ ಉಬರಡ್ಕ, ಪ್ರಸಾದ್ ಕಾಟೂರು, ಜತೆ ಕಾರ್ಯದರ್ಶಿಯಾಗಿ ಧನಂಜಯ ಅಂಬೆಕಲ್ಲು, ಕಾನೂನು ಸಲಹೆಗಾರರಾಗಿ ರಂಜಿತ್ ಕುಕ್ಕೆಟ್ಟಿ, ಪತ್ರಿಕಾ ಪ್ರತಿನಿಧಿಯಾಗಿ ಶಿವರಾಮ ಕಜೆಮೂಲೆ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಕುಲದೀಪ್ ಪೆಲ್ತಡ್ಕ, ಕ್ರೀಡಾ ಕಾರ್ಯದರ್ಶಿಯಾಗಿ ನಿತಿನ್ ಮಜಿಕೋಡಿ, ನಿರ್ದೇಶಕರುಗಳಾಗಿ ಚೇತನ್ ಚಿಲ್ಪಾರು, ಜಗತ್ ಪಾರೆಪ್ಪಾಡಿ, ಕೃಷ್ಣಪ್ರಸಾದ್ ಕೋಲ್ಚಾರು, ಅನಿಲ್ ಅಚ್ರಪ್ಪಾಡಿ, ಕೌಶಲ್ ಪಿ.ಆರ್., ಹೇಮಂತ್ ನಾರ್ಕೋಡು, ನವೀನ ಎಲಿಮಲೆ, ಹರಿಪ್ರಸಾದ್ ಅತ್ಯಾಡಿ, ಅಶೋಕ್ ಬೊಳುಗಲ್ಲು ಆಯ್ಕೆಯಾದರು.
ಗೌಡ ಯುವ ಸೇವಾ ಸಂಘದ ಅಧ್ಯಕ್ಷ ಮೋಹನ್‍ರಾಂ ಸುಳ್ಯ ಅಧ್ಯಕ್ಷತೆ ವಹಿಸಿದ್ದರು. ಗೌಡ ಯುವ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ದೊಡ್ಡಣ್ಣ ಬರೆಮೇಲು, ಪೂರ್ವಾಧ್ಯಕ್ಷ ದಿನೇಶ್ ಮಡಪ್ಪಾಡಿ, ಉಪಾಧ್ಯಕ್ಷ ಡಾ.ಎನ್.ಎ.ಜ್ಞಾನೇಶ್, ನಿರ್ದೇಶಕರುಗಳಾದ ಸಂತೋಷ್ ಮಡ್ತಿಲ, ಡಿ.ಟಿ.ದಯಾನಂದ, ಪಿ.ಎಸ್.ಗಂಗಾಧರ, ತರುಣ ಘಟಕದ ಸ್ಥಾಪಕಾಧ್ಯಕ್ಷ ಶ್ರೀಕಾಂತ್ ಮಾವಿನಕಟ್ಟೆ, ಪ್ರಧಾನ ಕಾರ್ಯದರ್ಶಿ ರೋಹಿತ್ ಕೊೈಂಗೋಡಿ ಉಪಸ್ಥಿತರಿದ್ದರು.
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…