ಸುಳ್ಯ: ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕರಾಗಿ ನವೀನ್ ಚಂದ್ರ ಜೋಗಿ ಶುಕ್ರವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಸುಳ್ಯ ವೃತ್ತ ನಿರೀಕ್ಷಕ ಆರ್.ಸತೀಶ್ ಕುಮಾರ್ ಅಧಿಕಾರ ಹಸ್ತಾಂತರಿಸಿದ್ದಾರೆ.
2.8 ವರ್ಷಗಳ ಕಾಲ ಸುಳ್ಯ ವೃತ್ತ ನಿರೀಕ್ಷಕರಾಗಿದ್ದ ಸತೀಶ್ ಕುಮಾರ್ ಅವರಿಗೆ ಬೆಂಗಳೂರು ಪೊಲೀಸ್ ಪ್ರಧಾನ ಕಚೇರಿಗೆ ವರ್ಗಾವಣೆಯಾಗಿದೆ. ನೂತನ ವೃತ್ತ ನಿರೀಕ್ಷಕರಾಗಿ ರಾಜ್ಯ ಗುಪ್ತವಾರ್ತೆಯಲ್ಲಿ ಇನ್ಸ್ ಪೆಕ್ಟರ್ ಆಗಿದ್ದ ನವೀನ್ ಚಂದ್ರ ಜೋಗಿ ಆಗಮಿಸಿದ್ದಾರೆ. ಉಡುಪಿ ಜಿಲ್ಲೆಯ ಕಾಪು ಮೂಲದವರಾದ ನವೀನ್ ಚಂದ್ರ ಜೋಗಿ ಅವರು ಈ ಹಿಂದೆ ಲೋಕಾಯುಕ್ತ, ರಾಜ್ಯ ಗುಪ್ತ ವಾರ್ತೆ,ಉಡುಪಿ ನಗರ ವೃತ್ತಗಳಲ್ಲಿ ಇನ್ಸ್ ಪೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದರು. ನೂತನ ವೃತ್ತ ನಿರೀಕ್ಷಕರು ಅಧಿಕಾರ ವಹಿಸುವ ಸಂದರ್ಭದಲ್ಲಿ ಸುಳ್ಯ ಆರಕ್ಷಕ ಉಪನಿರೀಕ್ಷಕ ಎಂ.ಆರ್.ಹರೀಶ್, ಅಪರಾಧ ಪತ್ತೆ ವಿಭಾಗದ ಎಸ್.ಐ ರತ್ನಕುಮಾರ್, ಪ್ರೊಬೇಷನರಿ ಎಸ್.ಐ ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು.
ಸನ್ಮಾನ, ಬೀಳ್ಕೊಡುಗೆ: ಸುಳ್ಯದಿಂದ ವರ್ಗಾವಣೆಯಾಗಿರುವ ವೃತ್ತ ನಿರೀಕ್ಷಕ ಸತೀಶ್ ಕುಮಾರ್ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಎಡಿಷನಲ್ ಎಸ್ ಪಿ ವಿಕ್ರಂ ಆಮ್ಟೆ ಸನ್ಮಾನ ನೆರವೇರಿಸಿದರು. ಡಿವೈಎಸ್ ಪಿ ದಿನಕರ ಶೆಟ್ಟಿ, ನೂತನ ಸಿಐ ನವೀನ್ ಚಂದ್ರ ಜೋಗಿ ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು. ಸುಳ್ಯದಲ್ಲಿ ತನ್ನ ಕರ್ತವ್ಯದ ಅವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಸತೀಶ್ ಕುಮಾರ್ ಕೃತಜ್ಞತೆ ಸಲ್ಲಿಸಿದರು.
ಸತೀಶ್ ಕುಮಾರ್ ಸುದೀರ್ಘ ಸೇವೆ: ಸುಳ್ಯ ವೃತ್ತ ನಿರೀಕ್ಷಕರಾಗಿ 2.8 ವರ್ಷಗಳ ಸುದೀರ್ಘ ಕಾಲ ಕರ್ತವ್ಯ ನಿರ್ವಹಿಸಿದ್ದ ಆರ್.ಸತೀಶ್ ಕುಮಾರ್ ಜನಪರ ಅಧಿಕಾರಿ ಎಂದು ಹೆಸರು ಗಳಿಸಿದ್ದರು. ಸುಳ್ಯದಲ್ಲಿ ಸಿಐ ಆಗಿ ದೀರ್ಘ ಕಾಲ ಸೇವೆ ಸಲ್ಲಿಸಿದವರಲ್ಲಿ ಸತೀಶ್ ಕುಮಾರ್ ಎರಡನೆಯವರಾಗಿದ್ದಾರೆ. ಎಲ್ಲರೊಂದಿಗೂ ಆತ್ಮೀಯರಾಗಿ ಬೆರೆಯುತ್ತಿದ್ದ ಅವರು ರಾಜ್ಯ ವಿಧಾನಸಭಾ ಚುನಾವಣೆ, ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಭದ್ರತಾ ವ್ಯವಸ್ಥೆಯನ್ನು ಯಶಸ್ವಿಯಾಗಿ ನೀಭಾಯಿಸಿದ್ದರು. ಸುಳ್ಯ, ಬೆಳ್ಳಾರೆ, ಸುಬ್ರಹ್ಮಣ್ಯ ಠಾಣೆಗಳನ್ನೊಳಗೊಂಡ ಸುಳ್ಯ ವೃತ್ತದ ನಿರೀಕ್ಷಕರಾಗಿ ಶಾಂತಿ ಸುವ್ಯವಸ್ಥೆ ಕಾಪಾಡಲು ಹೆಚ್ಚಿನ ಒತ್ತು ನೀಡಿದ್ದರು.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…