ಸುಳ್ಯ: ಸುಳ್ಯ ಮದ್ರಸ ಮನೇಜ್ ಮೆಂಟ್ ಇದರ ವಾರ್ಷಿಕ ಸಭೆ ಡಿ.3 ರಂದು ಮದ್ರಸ ಮನೇಜ್ ಮೆಂಟ್ ಜಿಲ್ಲಾ ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಅಝಾದ್ ಅಧ್ಯಕ್ಷತೆಯಲ್ಲಿ ನಡೆಯಿತು . ಸುಳ್ಯ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಉಮರ್ ಫೈಝಿ ಸಭೆಯನ್ನ ಉದ್ಘಾಟಿಸಿ ಮಾತನಾಡಿದರು. ಅಬ್ದುಲ್ ಹಮೀದ್ ಹಾಜಿ ವಾರ್ಷಿಕ ವರದಿ ಮಂಡಿಸಿದರು.
ನೂತನ ಪದಾಧಿಕಾರಿಗಳ ಆಯ್ಕೆ: ಸತತ 10 ನೇ ಬಾರಿ ಅಧ್ಯಕ್ಷರಾಗಿ ತಾಜ್ ಮಹಮ್ಮದ್ ಕಲ್ಲುಗುಂಡಿ, ಪ್ರಧಾನ ಕಾರ್ಯ ದರ್ಶಿಯಾಗಿ ಬಶೀರ್ ಯು ಪಿ ಬೆಳ್ಳಾರೆ, ಉಪಾಧ್ಯಕ್ಷರುಗಳಾಗಿ ಯು ಹೆಚ್ ಅಬೂಬಕ್ಕರ್ ಬೆಳ್ಳಾರೆ, ಅಬ್ದುಲ್ ಖಾದರ್, ಸುಪ್ರಿಂ ಅಹ್ಮದ್ ಹಾಜಿ, ಸಿ ಎಂ ಮಹಮ್ಮದ್ ಹಾಜಿ ಪೈಂಬಚ್ಚಾಲ್, ಜೊತೆ ಕಾರ್ಯದರ್ಶಿಗಳಾಗಿ ಅಬ್ದುಲ್ ಖಾದರ್, ಅಕ್ಬರ್ ಕರಾವಳಿ, ಎಂ ಸಿ ಅಬೂಬಕ್ಕರ್ ಕಲ್ಲುಗುಂಡಿ, ಅಬೂಬಕ್ಕರ್ ಅಜ್ಜಾವರ, ಪತ್ರಿಕಾ ಕಾರ್ಯದರ್ಶಿಯಾಗಿ ಜಮಾಲುದ್ದೀನ್ ಕೆ ಎಸ್, ಜಿಲ್ಲಾ ಪ್ರತಿನಿಧಿಗಳಾಗಿ ಹಸೈನಾರ್ ಧರ್ಮತ್ತಣ್ಣಿ, ಕತ್ತಾರ್ ಇಬ್ರಾಹೀಂ ಹಾಜಿ ಆಯ್ಕೆಗೊಂಡು ಕಾರ್ಯಕಾರಿ ಸದಸ್ಯರನ್ನ ಒಳಗೊಂಡ ಸಮಿತಿ ರಚನೆಗೊಂಡಿತು .
ದ.ಕ ಜಿಲ್ಲಾ ಮದರಸ ಮನೇಜ್ ಮೆಂಟ್ ಪ್ರಧಾನ ಕಾರ್ಯದರ್ಶಿ ಕೆ ಎಂ ಮಹಮ್ಮದ್ ರಫೀಕ್, ದ.ಕ ಜಿಲ್ಲಾ ಮದರಸ ಮನೇಜ್ ಮೆಂಟ್ ಕಾರ್ಯದರ್ಶಿ ಶರೀಫ್ ಮುಕ್ರಂಪಾಡಿ ಚುನಾವಣಾ ವೀಕ್ಷಕರಾಗಿ ಕಾರ್ಯನಿರ್ವಹಿಸಿದರು .
ತಾಜ್ ಮಹಮ್ಮದ್ ಸ್ವಾಗತಿಸಿ, ದ.ಕ ಜಿಲ್ಲಾ ಜಂಇಯ್ಯತುಲ್ ಮುಅಲ್ಲಿಮೀನ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ ಕಾರ್ಯಕ್ರಮ ನಿರೂಪಿಸಿದರು.
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…