ಸುಳ್ಯ:ಶಿಕ್ಷಣ ಮನುಷ್ಯನಿಗೆ ಯೋಜನಾಬದ್ಧವಾಗಿ ಯೋಚಿಸುವ ಶಕ್ತಿಯನ್ನು ನೀಡಬೇಕು ಮತ್ತು ಶಿಕ್ಷಣದ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಮನುಷ್ಯ ಬೆಳೆಯಬೇಕು ಎಂದು ನೆಹರು ಮೆಮೋರಿಯಲ್ ಪದವಿ ಕಾಲೇಜಿನ ಕನ್ನಡ ಉಪನ್ಯಾಸಕಿ ಡಾ. ಅನುರಾಧ ಕುರುಂಜಿ ಅವರು ಹೇಳಿದರು.
ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜು ಇಲ್ಲಿನ ಮಾನವಿಕ ಸಂಘ ಆಯೋಜಿಸಿದ್ದ ವಿಶ್ವ ಸಾಕ್ಷರತಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ನಮಗೆ ನಿಜವಾಗಿ ಬೇಕಾಗಿರುವುದು ಬದುಕಿನ ಶಿಕ್ಷಣ, ಅಂಕಗಳ ಆಕಾಂಕ್ಷೆ ಮತ್ತು ಸ್ಪರ್ಧೆಯನ್ನು ಮೀರಿ ಬೆಳೆದಾಗ ಮತ್ತು ನಮ್ಮ ಯೋಚನಾ ಲಹರಿ ಸರಿ ದಿಕ್ಕಿನಲ್ಲಿ ಸಾಗಿದಾಗ ಮಾತ್ರ ನಾವು ಪಡೆದ ಶಿಕ್ಷಣಕ್ಕೆ ಸಾರ್ಥಕತೆ ಇರುತ್ತದೆ ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಹರಿಣಿ ಪುತ್ತೂರಾಯರವರು ಮಾತನಾಡಿ ಈ ವರುಷದ ವಿಶ್ವ ಸಾಕ್ಷರತಾ ದಿನಾಚರಣೆಯ ಧ್ಯೇಯವನ್ನು ನೆನಪಿಸಿಕೊಂಡು ನಮ್ಮ ಶಿಕ್ಷಣ ಬಹುಭಾಷಾ ಸಿದ್ದಾಂತದ ಮೇಲೆ ಮುನ್ನಡೆಯುವ ಅಗತ್ಯತೆ ಇದೆ. ಜಾಗತೀಕರಣ ಪ್ರಪಂಚದ ಸವಾಲುಗಳನ್ನು ಎದುರಿಸಲು ನಾವು ಪಡೆಯುವ ಶಿಕ್ಷಣ ದಾರಿ ಮಾಡಿಕೊಡಬೇಕು ಎಂದು ಹೇಳಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಕಲಾವಿಭಾಗದ ಉಪನ್ಯಾಸಕರಾದರೇಷ್ಮಾ ಮತ್ತು ಜಾನಕೀ ಅವರು ಉಪಸ್ಥಿತರಿದ್ದರು.
ಕಲಾ ವಿಭಾಗದ ವಿದ್ಯಾರ್ಥಿಗಳು ವೈಯಕ್ತಿಕ ಗೀತೆ, ಸಮೂಹ ಗೀತೆ ಮತ್ತು ಸಾಕ್ಷರತಾ ದಿನದ ಸಲುವಾಗಿ ಪ್ರಸ್ತುತ ಪಡಿಸಿದರು. ವಿದ್ಯಾರ್ಥಿಗಳಾದ ಧನ್ಯ ಶ್ರೀ ಸ್ವಾಗತಿಸಿ, ಸಮೀಕ್ಷಾ ವಂದಿಸಿದರು. ವಿದ್ಯಾರ್ಥಿ ರವಿ ಕಾರ್ಯಕ್ರಮ ನಿರ್ವಹಿಸಿದರು.
ಘಾನಾದಲ್ಲಿ ಮರ ಬೆಳೆ ವೈವಿಧ್ಯೀಕರಣ ಯೋಜನೆ ಆರಂಭಗೊಂಡಿದ್ದು, ರೈತರ ಆದಾಯ ಹೆಚ್ಚಿಸಲು ಮತ್ತು…
ಕರ್ನಾಟಕದ ವಿವಿಧ ಭಾಗಗಳಲ್ಲಿ ಮತ್ತೆ ಮಳೆಯ ಚಟುವಟಿಕೆ ಹೆಚ್ಚಾಗಿದ್ದು, ಕರಾವಳಿ, ಮಲೆನಾಡು ಹಾಗೂ…
ರಾಜ್ಯದ ಹಲವೆಡೆ ಮಳೆಯಾಗಿದ್ದು, ಬೆಂಗಳೂರಿನಲ್ಲಿ ಮುಂದಿನ 24 ಗಂಟೆಗಳಲ್ಲಿ ಹಗುರ ಮಳೆಯ ಸಾಧ್ಯತೆ…
ರಾಜ್ಯದಲ್ಲಿ ಹೋಟೆಲ್‌ಗಳಿಗೆ ವಾಣಿಜ್ಯ LPG ಕೊರತೆಯನ್ನು ಸರಿಪಡಿಸಲು ಮಂಗಳವಾರದಿಂದ ಹೆಚ್ಚುವರಿ ಸಿಲಿಂಡರ್ ಸರಬರಾಜು…
ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕೊರತೆ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.…
ಚಿಕ್ಕಮಗಳೂರಿನಲ್ಲಿ ಭಾರಿ ಮಳೆಯಿಂದ ಮರಗಳು ಮತ್ತು ವಿದ್ಯುತ್ ಕಂಬಗಳು ಧರೆಗುರುಳಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.…