ಸೂಕ್ತವಲ್ಲದ ಸಮಯದಲ್ಲಿ ಚಾರಣ ಮಾಡಿ ಸಮಸ್ಯೆಯಲ್ಲಿ ಸಿಕ್ಕಿಹಾಕಿಕೊಂಡರೇ ಚಾರಣಿಗರು ?

September 16, 2019
11:10 PM

ಸುಬ್ರಹ್ಮಣ್ಯ: ಒಂದು ಕಡೆ ಭಾರೀ ಮಳೆ. ಇನ್ನೊಂದು ಕಡೆ ಚಾರಣಕ್ಕೆ ಸೂಕ್ತವಲ್ಲದ ಸಮಯ. ಪಶ್ಚಿಮ ಘಟ್ಟದ ಪ್ರಕೃತಿ ಸೌಂದರ್ಯ ಸವಿಯಲು ಈಗ ಸುಂದರವಾಗಿರುತ್ತದೆ. ಆದರೆ ಈ ಸಮಯ ಚಾರಣಕ್ಕೆ ಸೂಕ್ತವಲ್ಲ. ನವೆಂಬರ್ ನಂತರವೇ ಕುಮಾರಪರ್ವತ ಚಾರಣಕ್ಕೆ ಇಲ್ಲಿ ಸೂಕ್ತ . ಈಗ ಕಾಡುಪ್ರಾಣಿಗಳ ಹಾವಳಿ ಹೆಚ್ಚಿದೆ. ಹುಲಿ, ಆನೆಯಂತಹ ಪ್ರಾಣಿಗಳ ಸಂಚಾರವೂ ಇರುತ್ತದೆ. ಇದೇ ಈಗ ಸಮಸ್ಯೆಗೆ ಕಾರಣವಾಯಿತಾ ಎಂಬ ಸಂದೇಹ ಹೆಚ್ಚಾಗಿದೆ.

ಬೆಂಗಳೂರಿನಲ್ಲಿ ವಿವಿಧ ಖಾಸಗಿ ಕಂಪನಿಗಳಲ್ಲಿ ಉದ್ಯೋಗಿಯಾಗಿದ್ದವರು  ಕುಮಾರಪರ್ವತ ಚಾರಣಕ್ಕೆ ಶನಿವಾರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದು ಅದೇ ದಿನ ಸಂಜೆ ಗಿರಿಗದ್ದೆಗೆ ತಂಡವಾಗಿ ತೆರಳಿದರು. ಅಲ್ಲಿಂದ ಶೇಷಪರ್ವತ  ಏರಿದರು. ಎಲ್ಲರೂ 25 ವರ್ಷದ ಯುವಕರು. ಸುಸ್ತು ಅನ್ನೋದು ಮೈಯಲ್ಲಿಲ್ಲ. ಗಿರಿಗದ್ದೆಯಲ್ಲಿರುವ ಅರಣ್ಯ ಇಲಾಖೆಯ ತಪಾಸಣಾ ಕೇಂದ್ರದಲ್ಲಿ ಮುಚ್ಚಳಿಕೆ ಬರೆದು  12 ಜನ ಸೇರಿ ಒಟ್ಟು 4200 ರೂಪಾಯಿ ನೀಡಿ ಪರ್ವತ ಏರಿದರು.

ಪ್ರಕೃತಿ ಸೌಂದರ್ಯ ಸವಿದು ಹಿಂತಿರುಗುತ್ತಿರುವಾಗ ಸಂಜೆ ವೇಳೆಗೆ ಬೆಂಗಳೂರು ಗಾಯತ್ರಿ ನಗರದ ನಿವಾಸಿ ಸಂತೋಷ  ಎಂಬಾತನು ಕಾಣೆಯಾಗಿದ್ದನು. ಹುಡುಕಾಡಿದಾಗ ಸಿಗದೆ ಪೊಲೀಸರಿಗೆ, ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ.

ಇದು  ಚಾರಣಕ್ಕೆ ಸೂಕ್ತವಾದ ಸಮಯವಲ್ಲ. ಇದನ್ನು ಅರಣ್ಯ ಇಲಾಖೆ ಸೂಚನೆ ಕಡ್ಡಾಯವಾಗಿ ನೀಡಬೇಕು. ಈ ಮಳೆಗಾಲದ ಸಮಯದಲ್ಲಿ ಕಾಡಿನಲ್ಲಿ  ಆನೆಗಳ ಕಾಟ, ಹುಲಿ , ಚಿರತೆಗಳ ಓಡಾಟ ಹೆಚ್ಚಾಗಿರುತ್ತದೆ. ಈ ಕಾರಣದಿಂದ ಮಳೆಗಾಲದ ಅವಧಿಯಲ್ಲಿ ಚಾರಣ ಸೂಕ್ತವಲ್ಲ ಎಂಬ ಸೂಚನೆ ಕಡ್ಡಾಯವಾಗಿ ನೀಡಬೇಕಾಗಿದೆ. ಇಲ್ಲೂ ಹಾಗೆಯೇ ಆಗಿರುವ ಬಗ್ಗೆ ಸಂದೇಹ ಇದೆ. ಯುವಕರ ತಂಡದಲ್ಲಿ 5 ಮಂದಿ ಯುವಕರು ಮುಂದೆ ಬಂದರೆ ಅವರ ಹಿಂದೆ 6 ಜನರ ತಂಡ ಇತ್ತು. ಈ ನಡುವೆ ಒಬ್ಬ ಹೋಗುತ್ತಿದ್ದರು. ಈ ಸಂದರ್ಭ ಹುಲಿಯ ಸದ್ದು ಕೇಳುತ್ತದೆ ಎಂದು ಗಿರಿಗದ್ದೆಯ ಕಡೆಗೆ 3 ಯುವಕರು ಓಡಿದ್ದಾರೆ ಎಂಬ ಮಾಹಿತಿಯನ್ನೂ ಸ್ಥಳೀಯರ ಬಳಿ ಯುವಕರ ತಂಡ ಹೇಳಿದೆ. ಹೀಗಾಗಿ ಈಗ ಯುವಕ ಸಮಸ್ಯೆಗೆ ಸಿಲುಕಿಹಾಕಿಕೊಂಡಿರುವ ಸಾಧ್ಯತೆ ಹೆಚ್ಚಿದೆ ಎಂದು ಸ್ಥಳೀಯರು ಅನುಮಾನ ಪಡುತ್ತಾರೆ. ಮಂಗಳವಾರ ಬೆಳಗ್ಗೆ ತಂಡವಾಗಿ ಹುಡುಕಾಟ ನಡೆಸಲಾಗುತ್ತಿದೆ. ಆ ಬಳಿಕವೇ ಸ್ಪಷ್ಟವಾದ ಮಾಹಿತಿ ಲಭ್ಯವಾಗಲಿದೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಎತ್ತುಗಳಿಂದ ಡ್ರೋನ್‌ವರೆಗೆ… ಇದು ಭಾರತದ ಕೃಷಿಯ 79 ವರ್ಷಗಳ ಪಯಣ..!
August 15, 2026
7:42 AM
by: ದ ರೂರಲ್ ಮಿರರ್.ಕಾಂ
ತೀವ್ರ ವಿರೋಧದ ಹಿನ್ನೆಲೆ – ರಾಜ್ಯದಲ್ಲಿ ಗುಟ್ಕಾ ನಿಷೇಧ ಹಿಂತೆಗೆದುಕೊಳ್ಳಲು ಸರ್ಕಾರ ನಿರ್ಧಾರ – ಹೊರಬೀಳದ ಅಧಿಕೃತ ಆದೇಶ..!
August 15, 2026
7:18 AM
by: ದ ರೂರಲ್ ಮಿರರ್.ಕಾಂ
ಗುಟ್ಕಾ–ಪಾನ್‌ಮಸಾಲಾ ನಿಷೇಧ : ಅಡಿಕೆ ಬೆಳೆಗಾರನ ಮುಂದಿರುವ ನಿಜವಾದ ಪ್ರಶ್ನೆ ಏನು?
August 14, 2026
7:14 AM
by: ಮಹೇಶ್ ಪುಚ್ಚಪ್ಪಾಡಿ
ಹವಾಮಾನ ವರದಿ | 13- 08-2026 | ಕರ್ನಾಟಕದಲ್ಲಿ ಮಳೆ ಮುಂದುವರಿಕೆ| ಸುಳ್ಯ, ಘಟ್ಟದ ಕೆಳಭಾಗದಲ್ಲಿ ಮಧ್ಯಾಹ್ನದ ಬಳಿಕ ಹೆಚ್ಚು ಮಳೆ ಸಾಧ್ಯತೆ
August 13, 2026
2:01 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror