Advertisement
ಸುದ್ದಿಗಳು

ಸೂರ್ಯಗ್ರಹಣ ವೀಕ್ಷಣೆಯ ತವಕ ಹಲವು ಕಡೆ : ಮಾನಸಿಕ ನೆಮ್ಮದಿಗಾಗಿ ವಿವಿಧ ದೇವಸ್ಥಾನಗಳಲ್ಲಿ ಶಾಂತಿಹವನ

Share

ಮಂಗಳೂರು: ಸೌರಮಂಡಲದ ಅಪರೂಪದ ಕ್ಷಣಗಳು ಈಗ ಕಾಣುತ್ತಿವೆ. ಅತ್ಯಂತ ಅಪರೂಪ ಎನಿಸಿದ ಕಂಕಣ ಸೂರ್ಯಗ್ರಹಣ ಕರಾವಳಿ ಭಾಗದಲ್ಲಿ  ಸ್ಪಷ್ಟವಾಗಿ ಗೋಚರಿಸಿದೆ. ಬೆಳಗ್ಗೆ 8:06 ಕ್ಕೆ ಸಂಭವಿಸಿದ ಕಂಕಣ ಸೂರ್ಯಗ್ರಹಣ 11.11 ಕ್ಕೆ ಮುಕ್ತಾಯಗೊಳ್ಳಲಿದೆ. ಸೂರ್ಯ ಬಳೆ ರೀತಿಯಲ್ಲಿ ಸುಮಾರು 9.24 ರಿಂದ 9.29 ರವರೆಗೆ ಹಲವು ಕಡೆ ಕಂಡುಬಂದಿದೆ.  ಮಂಗಳೂರು ಸೇರಿದಂತೆ ಸುಳ್ಯ, ಪುತ್ತೂರು ಸೇರಿದಂತೆ ಜಿಲ್ಲೆಯಾದ್ಯಂತ ಸೂರ್ಯಗ್ರಹಣ ಗೋಚರಿಸುತ್ತಿದೆ. ಇದೇ ವೇಳೆ ಮಾನಸಿಕ ನೆಮ್ಮದಿಗಾಗಿ, ದೋಷ ನಿವಾರಣೆಗಾಗಿ ವಿವಿಧ ದೇವಸ್ಥಾನಗಳಲ್ಲಿ  ಶಾಂತಿ ಹವನ ನಡೆಯುತ್ತಿದೆ.

ಬಹಳ ಅಪರೂಪವಾದ ಈ ಸೂರ್ಯಗ್ರಹಣ  ಬೆಳಿಗ್ಗೆ 9 ರ ಸುಮಾರಿಗೆ ದರ್ಶನವಾಗಿದೆ. ಬಳಿಕ ಸ್ಪಷ್ಟವಾಗಿ ಗೋಚರಿಸುತ್ತಿದೆ.  ಈ ರೀತಿಯ ಸೂರ್ಯಗ್ರಹಣ ಆಕಾಶದಲ್ಲಿ ಕಾಣುವುದು ಮುಂದೆ 2064 ನೇ ವರ್ಷದಲ್ಲಿ.

ಕಂಕಣ ಸೂರ್ಯಗ್ರಹಣ ಏನಿದು  ? : ಸೂರ್ಯ, ಭೂಮಿಯ ಮಧ್ಯೆ ಚಂದ್ರ ಬಂದಾಗ ಸೂರ್ಯ ಗ್ರಹಣ ಸಂಭವಿಸುತ್ತದೆ. ಕಂಕಣ ಗ್ರಹಣದಲ್ಲಿ ಸೂರ್ಯನನ್ನು ಚಂದ್ರ ಪೂರ್ಣವಾಗಿ ಮರೆ ಮಾಡುವುದಿಲ್ಲ. ಗ್ರಹಣವಾದಾಗ ಚಂದ್ರನ ಸೂತ್ತಲೂ ಬೆಳಕು ತೂರಿ ಬಂದು ಹೊಳೆಯುವ ಬಂಗಾರದ ಬಳೆಯಾಕಾರದಲ್ಲಿ ಸೂರ್ಯ ಗೋಚರಿಸುತ್ತಾನೆ. ಭೂಮಿ, ಸೂರ್ಯ ಹಾಗೂ ಚಂದ್ರನ ನಡುವಿನ ಅಂತರಗಳ ಪ್ರಕಾರ ಸೂರ್ಯನ ಕೋನೀಯ ಗಾತ್ರವು ಚಂದ್ರನದಕ್ಕಿಂತ ದೊಡ್ಡದಾಗಿರುತ್ತದೆ. ಹಾಗಾಗಿ ಸೂರ್ಯ ಬಳೆಯಂತೆ ಗೋಚರಿಸುತ್ತಾನೆ. ಈ  ಕೌತುಕ  ತಮಿಳುನಾಡು, ಕೇರಳ, ಕರ್ನಾಟಕ ಭಾಗಗಳಲ್ಲಷ್ಟೇ  ದರ್ಶನ ಸಾಧ್ಯವಿದೆ.

ಶಾಂತಿಹವನ : ಸೂರ್ಯಗ್ರಹಣದಿಂದ ಮೂಲ ನಕ್ಷತ್ರ ಸೇರಿದಂತೆ ವಿವಿಧ ರಾಶಿಯವರಿಗೆ ದೋಚ ಇರುವುದರಿಂದ ವಿವಿಧ ದೇವಸ್ಥಾನಗಳಲ್ಲಿ  ಶಾಂತಿ ಹವನ ನಡೆಯಿತು. ಸುಳ್ಯ ತಾಲೂಕಿನ ವಳಲಂಬೆ ಶ್ರೀ ಶಂಖಪಾಲ  ಸುಬ್ರಹ್ಮಣ್ಯ ದೇವಸ್ಥಾನ, ಪಂಜ ಪಂಚಲಿಂಗೇಶ್ವರ ದೇವಸ್ಥಾನ, ಹರಿಹರ ದೇವಸ್ಥಾನ, ಬೆಳ್ಳಾರೆ, ಕಾಯರ್ತೋಡಿ, ತೊಡಿಕಾನ, ಕಾಂತಮಂಗಲ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ  ಶಾಂತಿ ಹವನ ನಡೆಯಿತು.

 

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಶಬರಿಮಲೆ ಯಾತ್ರೆ – ಆನ್‌ಲೈನ್ ಕೊಠಡಿ ಬುಕ್ಕಿಂಗ್ ಮಿತಿ 400ಕ್ಕೆ ಹೆಚ್ಚಳ – ಅ. 7ರಿಂದ ನೋಂದಣಿ ಆರಂಭ

ಶಬರಿಮಲೆಯಲ್ಲಿ ತುಲಾ ಮಾಸದ ಪೂಜೆಗೆ ತೆರಳುವ ಭಕ್ತರ ಅನುಕೂಲಕ್ಕಾಗಿ ಆನ್‌ಲೈನ್ ಕೊಠಡಿ ಬುಕ್ಕಿಂಗ್…

43 minutes ago

ಬೇವು ಲೇಪಿತ ಯೂರಿಯಾ ಬಳಕೆಯಿಂದ ಕೃಷಿ ಕ್ಷೇತ್ರದಲ್ಲಿ ಮಹತ್ವದ ಸುಧಾರಣೆ

ಕೇಂದ್ರ ಸರ್ಕಾರ 2015ರಲ್ಲಿ ದೇಶೀಯ ಹಾಗೂ ಆಮದು ಯೂರಿಯಾಗೆ ಬೇವು ಲೇಪನ ಕಡ್ಡಾಯಗೊಳಿಸುವ…

1 hour ago

ಮನೆ ಎಂದರೆ ಗೋಡೆಗಳಲ್ಲ , ನೆಮ್ಮದಿಯನ್ನು ಕಟ್ಟುವ ಜೀವನಕಲೆ

ಮನೆತನವನ್ನು ಕಟ್ಟುವುದು ಕೇವಲ ಆರ್ಥಿಕ ಸೌಲಭ್ಯಗಳನ್ನು ಒದಗಿಸುವುದಲ್ಲ; ಕುಟುಂಬದ ಸದಸ್ಯರ ನಡುವೆ ಪ್ರೀತಿ,…

1 hour ago

ಮಿಜೋರಾಂ ಮೂಲಕ 3,103 ಮೆಟ್ರಿಕ್ ಟನ್ ಅಡಿಕೆ ಕಳ್ಳಸಾಗಣೆ ಆರೋಪ – ಮ್ಯಾನ್ಮಾರ್‌ ಜಾಲ ಪತ್ತೆ

ಮ್ಯಾನ್ಮಾರ್‌ನಿಂದ ಮಿಜೋರಾಂ ಮೂಲಕ ಸುಮಾರು ₹1,022 ಕೋಟಿ ಮೌಲ್ಯದ 3,103 ಮೆಟ್ರಿಕ್ ಟನ್…

11 hours ago

ಹವಾಮಾನ ವರದಿ | 08-10-2026 | ಅ.11ರಿಂದ ಮಳೆ ಇಳಿಕೆ; ಅ.15ರಿಂದ ಹಿಂಗಾರು ಮಳೆ ಆರಂಭದ ಸೂಚನೆ

ಅ.11ರಿಂದ ಕರ್ನಾಟಕದ ಹಲವು ಭಾಗಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದ್ದರೂ, ಅ.14–16ರಿಂದ ಹಿಂಗಾರು…

18 hours ago

ಮನಸ್ಸಿನಲ್ಲಿರುವ ಮಾತು ಹೇಳಿಬಿಡಿ… ಬದುಕಿಗೊಂದು ತಿರುವು ಸಿಗಬಹುದು..!

ಕೃಷಿ ಸೇರಿದಂತೆ ಕುಟುಂಬದ ಬದುಕಿನಲ್ಲಿ ಕಾಣದ ಶ್ರಮವನ್ನು ಗುರುತಿಸಿ ಮೆಚ್ಚುಗೆ ವ್ಯಕ್ತಪಡಿಸುವುದು ಸಂಬಂಧಗಳನ್ನು…

19 hours ago