(ಸಾಂದರ್ಭಿಕ ಚಿತ್ರ)
ಸುಳ್ಯ: 2019-20 ನೇ ಸಾಲಿನ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಸೆ.15 ರಂದು ಗುತ್ತಿಗಾರಿನ ಸರಕಾರಿ ಪದವಿ ಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಕ್ರೀಡಾಕೂಟದಲ್ಲಿ ಯುವಕ- ಯುವತಿಯರು/ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಲು ಅರ್ಹರಾಗಿದ್ದಾರೆ ಎಂದು ಸಹಾಯಕ ಯುವ ಸಬಲೀಕರಣ ಕ್ರೀಡಾಧಿಕಾರಿ ದೇವರಾಜ್ ಮುತ್ಲಾಜೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ರೀಡಾಕೂಟದಲ್ಲಿಮಹಿಳೆಯರಿಗೆ ಮತ್ತು ಪುರುಷರಿಗೆ ನಡೆಯುವ ಸ್ಪರ್ಧೆಗಳು:
ಪಂದ್ಯಾಟಗಳು:
ಕಬಡ್ಡಿ, ಖೋ-ಖೋ,ವಾಲಿಬಾಲ್
ಅಥ್ಲೆಟಿಕ್ಸ್: 100ಮೀ, 200 ಮೀ, 400 ಮೀ, 800 ಮೀ, 1500 ಮೀ, (5000 ಮೀ ಪುರುಷರಿಗೆ ಮಾತ್ರ,3000 ಮೀ ಮಹಿಳೆಯರಿಗೆ ಮಾತ್ರ) ಶಾಟ್ ಫುಟ್,ಉದ್ದಜಿಗಿತ,ಎತ್ತರ ಜಿಗಿತ,ಜಾವೆಲಿನ್ ಎಸೆತ,ಡಿಸ್ಕಸ್ ಎಸೆತ,ಟ್ರಿಪಲ್ ಜಂಪ್,4*100 ಮೀ ರಿಲೇ,110 ಮೀ ಹರ್ಡಲ್ಸ್, (5000ಮೀ ಮತ್ತು 3000 ಮೀ ಓಟಗಳು ಪೂ.9.00 ಕ್ಕೆ ಸರಿಯಾಗಿ ನಡೆಯುವುದು).
ಭಾಗವಹಿಸುವ ಸ್ಪರ್ಧಾಳುಗಳು ತಮ್ಮ ತಂಡದ ಸದಸ್ಯರ ಪಟ್ಟಿಯನ್ನು ಯುವಕ/ಯುವತಿ ಮಂಡಲದ ಅಧ್ಯಕ್ಷರಿಂದ ಧೃಡೀಕರಿಸಿ ಕಾಲೇಜು/ ಹೈಸ್ಕೂಲ್ ವಿದ್ಯಾರ್ಥಿಗಳಾಗಿದ್ದಲ್ಲಿ ಪ್ರಾಚಾರ್ಯರಿಂದ ಅಥವಾ ಮುಖ್ಯ ಗುರುಗಳಿಂದ ದೃಢೀಕರಿಸಿ ಗುತ್ತಿಗಾರು ಸ.ಪ.ಪೂ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕರಾದ ಮೇದಪ್ಪ(8762919932) ಇವರಿಗೆ ಕಳುಹಿಸಿ ಕೊಡತಕ್ಕದ್ದು. ಉದ್ಘಾಟನಾ ಕಾರ್ಯಕ್ರಮಕ್ಕಿಂತ ಮೊದಲು ಓಟಗಳು ಮತ್ತು ಪಂದ್ಯಾಟಗಳನ್ನು ಪ್ರಾರಂಬಿಸಲಾಗುವುದು.
ಫುಟ್ ಬಾಲ್:
ಸೆ.14 ರಂದು ದಸರಾ ಫುಟ್ ಬಾಲ್ ಪಂದ್ಯಾಟವನ್ನು ಮರ್ಕಂಜದ ಸರಕಾರಿ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ನಡೆಸಲಾಗುವುದು. ಭಾಗವಹಿಸುವ ತಂಡದವರು ಪೂರ್ವಾಹ್ನ 9.00 ರ ಒಳಗಾಗಿ ಸ್ಥಳದಲ್ಲಿ ವರದಿ ಮಾಡಿಕೊಳ್ಳತಕ್ಕದ್ದು.ನಂತರ ಬಂದವರಿಗೆ ಅವಕಾಶವಿರುವುದಿಲ್ಲ. ದಸರಾ ಕ್ರೀಡಾಕೂಟದ ಶಟಲ್ ಬ್ಯಾಡ್ಮಿಂಟನ್, ಬಾಸ್ಕೆಟ್‌ಬಾಲ್, ಹ್ಯಾಂಡ್ ಬಾಲ್,ಹಾಕಿ,ಈಜು, ಟೇಬಲ್ ಟೆನ್ನಿಸ್, ಬಾಲ್ ಬ್ಯಾಡ್ಮಿಂಟನ್, ವೈಟ್ ಲಿಫ್ಟಿಂಗ್ ಸ್ಪರ್ಧೆಗಳನ್ನು ನೇರವಾಗಿ ಜಿಲ್ಲಾ ಮಟ್ಟದಲ್ಲಿ ನಡೆಸಲಾಗುವುದು.
ಜಿಲ್ಲಾ ಮಟ್ಟದಲ್ಲಿ ಭಾಗವಹಿಸುವ ಸ್ಪರ್ಧಾಳುಗಳು ರಾಷ್ಟ್ರೀಕೃತ ಬ್ಯಾಂಕಿನ ಖಾತೆಯ ಪಾಸ್ ಬುಕ್,ಜೆರಾಕ್ಸ್ ಪ್ರತಿಯನ್ನು ಕಡ್ಡಾಯವಾಗಿ ತರತಕ್ಕದ್ದು.ಈ ಭಾರಿ ಪ್ರಯಾಣ ಭತ್ಯೆಯನ್ನು ನೇರವಾಗಿ ತಮ್ಮ ಖಾತೆಗೆ ಜಮೆ ಮಾಡಲಾಗುವುದು ಎಂದು ಸಹಾಯಕ ಯುವ ಸಬಲೀಕರಣ ಕ್ರೀಡಾಧಿಕಾರಿ ದೇವರಾಜ್ ಮುತ್ಲಾಜೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.
ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…
ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…
ಅಡಿಕೆಯ ಮೈಟ್ ಬಗ್ಗೆ ಸಿಪಿಸಿಆರ್‌ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…