Advertisement
MIRROR FOCUS

ಸೋಣೆ ಹಬ್ಬ ( ಆಗಸ್ಟ್ 16)

Share

ಹಬ್ಬಗಳೆಂದರೆ ಹೆಣ್ಣು ಮಕ್ಕಳಿಗೆ ಯಾವಾಗಲೂ ಸಂಭ್ರಮವೇ. ಪ್ರತಿಯೊಂದು ಹಬ್ಬಕ್ಕೂ ಅದರದ್ದೇ ಆದ ವಿಶೇಷತೆಯಿದೆ. ಅದರಲ್ಲೂ ಕರಾವಳಿಯ ಹೆಣ್ಣು ಮಕ್ಕಳಿಗೆ ಸೋಣೆ ತಿಂಗಳೆಂದರೆ ವಿಶೇಷವಾದುದು. ಇದು ಶ್ರಾವಣ ಮಾಸದ ಸಿಂಹ ಸಂಕ್ರಮಣದ ದಿನ., ಸೋಣೆ ಸಂಕ್ರಾಂತಿ ಹೆಂಗೆಳೆಯರಿಗೆ ನೇರವಾಗಿ ಸಂಭಂದಿಸಿದ ವಿಶೇಷವಾದ ಹಬ್ಬ… .

ಹೊಸ್ತಿಲಿಗೆ ರಂಗೋಲಿ ಬರೆದು, ಕುಂಕುಮ, ಅರಶಿನ ಹಚ್ಚಿ ಹೂ ಇಟ್ಟು ನಮಸ್ಕರಿಸಿ ಪೂಜಿಸುವುದು ಸುಮಂಗಲಿಯರು ನಿತ್ಯವೂ ನಿರ್ವಹಿಸುವ ಅಭ್ಯಾಸ. ನಿತ್ಯ ಯಾವುದೇ ಸಾದಾ ಪುಷ್ಪವನ್ನು ಹೊಸಿಲಿಗೆ ಇಟ್ಟು ನಮಸ್ಕರಿಸಲಾಗುತ್ತದೆ. ಆದರೆ ಸೋಣೆ ತಿಂಗಳಲ್ಲಿ ನೈವೇದ್ಯವನ್ನೂ , ಅರ್ಪಿಸಲಾಗುತ್ತದೆ. ಮುಂಜಾನೆಯೇ ಶುಚಿರ್ಭೂತರಾಗಿ, ಹೊಸ್ತಿಲುಗಳನ್ನು ಶುಚಿಗೊಳಿಸಲಾಗುತ್ತದೆ. ಆಮೇಲೆ ಹೊಸ್ತಿಲಿನ ಎರಡೂ ಬದಿಗಳಿಗೆ ರಂಗೋಲಿಗಳನ್ನು ಹಾಕಿ ಹೂಗಳಿಂದ ಸಿಂಗರಿಸಲಾಗುತ್ತದೆ. ಹೂವೆಂದರೆ ಸೋಣೆ ಹೂ( ನೀರು‌ಕಡ್ಡಿ ಹೂ), ಕಾಯಿಹಿಂಡಿಗೆ( ಅರಶಿನ ಬಣ್ಣದ ಹೂ ಇರುವ ಗಿಡ) ಹೂ, ಕೆರಮಣೆ ಸೊಪ್ಪುಗಳನ್ನು ಬಳಸಲಾಗುತ್ತದೆ. ಜೊತೆಗೆ ಹಿಂದಿನ ‌ರಾತ್ರಿಯೇ ಸಿದ್ಧಪಡಿಸಿಟ್ಟು ಕೊಂಡ ಹುರಿದ ಹಲಸಿನ ಬೇಳೆ, ಗೇರುಬೀಜ ಹಾಗೂ ತೆಂಗಿನ ಕಾಯಿ ಒಡೆದು, ಒಂದು ತಂಬಿಗೆ ನೀರುಗಳನ್ನೆಲ್ಲಾ ಇಟ್ಟು ನೈವೇದ್ಯ ಸಲ್ಲಿಸಲಾಗುತ್ತದೆ. ಹೊಸ್ತಿಲಿಗೆ ನಮಸ್ಕರಿಸಿ ಆಶೀರ್ವಾದ ಪಡೆಯಲಾಗುತ್ತದೆ. ಸೋಣೆ ತಿಂಗಳುದ್ದಕ್ಕೂ ಹೂಗಳನ್ನಿಟ್ಟು ಅಡ್ಡಬೀಳುವ ಸಂಪ್ರದಾಯವಿದೆ . ಈ ಪದ್ಧತಿಯನ್ನು ಕೆಲವು ಮನೆಗಳಲ್ಲಿ ಇಂದಿಗೂ ಆಚರಿಸುತ್ತಾರೆ. ಆದರೆ ಹಲಸಿನ ಬೀಜ, ಗೇರುಬೀಜಗಳನ್ನು ಸೋಣೆ ಸಂಕ್ರಾಂತಿಯಂದು ಮಾತ್ರ ನೈವೇದ್ಯ ಮಾಡಲಾಗುತ್ತದೆ. ಉಳಿದ ದಿನಗಳಲ್ಲಿ ಸೋಣೆ ಹೂ ಹಾಗೂ ಕಾಯಿ ಹಿಂಡಿಗೆ ಹೂಗಳನ್ನು ‌ಇಟ್ಟು ನಮಸ್ಕರಿಸಿ ಮನೆಗೆ, ಮನೆಯವರ ಒಳಿತಿಗಾಗಿ‌ ಹಾರೈಸುವ ಪದ್ಧತಿ ಬಳಕೆಯಲ್ಲಿದೆ.

ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಹವಾಮಾನ ವರದಿ | 02-10-2026 | ಸುಳ್ಯದಲ್ಲಿ 100 ಮಿ.ಮೀ.ವರೆಗೆ ಮಳೆ – ಕರಾವಳಿ–ಮಲೆನಾಡಿನಲ್ಲಿ ಮುಂದಿನ 10 ದಿನವೂ ಮಳೆಯ ಸಾಧ್ಯತೆ

ಸುಳ್ಯ ತಾಲೂಕಿನ ಹಲವು ಕಡೆ ನಿನ್ನೆ ಸುಮಾರು 100 ಮಿ.ಮೀ.ನಷ್ಟು ಮಳೆಯಾಗಿದ್ದು, ಕರಾವಳಿ–ಮಲೆನಾಡಿನ…

15 hours ago

ಕಬ್ಬು ಬೆಳೆಗಾರರ ಹಿತರಕ್ಷಣೆಗೆ ಕೇಂದ್ರ ಸರ್ಕಾರ ಬದ್ಧ: ಎಥೆನಾಲ್ ಖರೀದಿ 1,200 ಕೋಟಿ ಲೀಟರ್‌ಗೆ ಏರಿಕೆ

ಕಬ್ಬು ಬೆಳೆಗಾರರ ಹಿತರಕ್ಷಣೆಗೆ ಕೇಂದ್ರ ಸರ್ಕಾರ ಬದ್ಧವಾಗಿದ್ದು, ಪ್ರಸಕ್ತ ಹಂಗಾಮಿನಲ್ಲಿ ಕಬ್ಬಿನ ಪಾವತಿಯ…

20 hours ago

ಅಂತಾರಾಷ್ಟ್ರೀಯ ಕಾಫಿ ದಿನಾಚರಣೆ – ಕಾಫಿ ಬಗ್ಗೆ ಜಾಗೃತಿಗೆ ಚಿಕ್ಕಮಗಳೂರಿನಲ್ಲಿ ಸೈಕಲ್ ಜಾಥಾ

ಅಂತಾರಾಷ್ಟ್ರೀಯ ಕಾಫಿ ದಿನಾಚರಣೆ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನಲ್ಲಿ ‘ಸೈಕಲ್ ಫಾರ್ ಕಾಫಿ’ ಜಾಥಾ ಆಯೋಜಿಸಲಾಗಿದ್ದು,…

20 hours ago

ಏಷ್ಯನ್ ಗೇಮ್ಸ್‌ ಕ್ರಿಕೆಟ್‌ : ಚಿನ್ನದ ಪದಕಕ್ಕಾಗಿ ಭಾರತ–ಪಾಕಿಸ್ತಾನ ಫೈನಲ್‌

ಏಷ್ಯನ್‌ ಗೇಮ್ಸ್‌ ಪುರುಷರ ಕ್ರಿಕೆಟ್‌ ಫೈನಲ್‌ನಲ್ಲಿ ಅ.3ರಂದು ಭಾರತ ಮತ್ತು ಪಾಕಿಸ್ತಾನ ಚಿನ್ನದ…

21 hours ago

ಮಳೆ ಕೊರತೆ ಮುಂದುವರಿದರೆ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಹೇಗಿರಲಿದೆ?

ಮಳೆಯ ಕೊರತೆಯಿಂದ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುವ ಸಾಧ್ಯತೆ ಹಿನ್ನೆಲೆಯಲ್ಲಿ…

21 hours ago

ಅಡಿಕೆ ಅಕ್ರಮ ಆಮದು ಜಾಲದ ಮೇಲೆ ಇಡಿ ದಾಳಿ – 16 ಕಡೆ ಶೋಧ, ನೂರಾರು ಕೋಟಿ ಹಣದ ವಹಿವಾಟಿನ ತನಿಖೆ

ಅಸ್ಸಾಂ ಮತ್ತು ಪಶ್ಚಿಮ ಬಂಗಾಳದ 16 ಸ್ಥಳಗಳಲ್ಲಿ ವಿದೇಶಿ ಅಡಿಕೆ ಅಕ್ರಮ ಸಾಗಾಟಕ್ಕೆ…

1 day ago