ಸ್ವಚ್ಛತೆಯೆಂಬ ಸೇವಾ ಯಜ್ಞದಲ್ಲಿ ಸಮಿಧೆಯಂತೆ ತೇಯ್ದರು..!

July 15, 2019
12:00 PM

ಮಂಗಳೂರು: ರಾಮಕೃಷ್ಣ ಮಿಷನ್ ಮಾರ್ಗದರ್ಶನದಲ್ಲಿ ಆಯೋಜನೆ ಮಾಡಲಾಗುತ್ತಿರುವ 5 ನೇ ವರ್ಷದ ಸ್ವಚ್ಛ ಮಂಗಳೂರು ಅಭಿಯಾನದ 32 ನೇ ಭಾನುವಾರದ ಶ್ರಮದಾನವನ್ನು ಮಿಷನ್ ಸ್ಟ್ರೀಟ್ ಹಾಗೂ ನೆಲ್ಲಿಕಾಯಿ ರಸ್ತೆಯಲ್ಲಿ ನಡೆಸಲಾಯಿತು.

Advertisement
Advertisement
Advertisement

ಬೆಳಿಗ್ಗೆ 7-30ಕ್ಕೆ  ಸ್ವಚ್ಛತಾ ಕಾರ್ಯಕ್ಕೆ ಚಾಲನೆ ದೊರೆಯಿತು. ಕ್ಯಾಂಪ್ಕೋ ಜಿಎಂ ರೇಶ್ಮಾ ಮಲ್ಯ,  ಹಾಗೂ ಅಸಿಸ್ಟಂಟ್ ಮೆನೇಜರ್ ಕಾರ್ಪೋರೇಶನ್ ಬ್ಯಾಂಕಗ  ಯೋಗೀಶ್ ಪ್ರಭು ಶ್ರಮದಾನವನ್ನು ಶುಭಾರಂಭ ಮಾಡಿದರು. ಅಭಿಯಾನದ ಮಾರ್ಗದರ್ಶಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಎಂ.ಆರ್.ಪಿ.ಎಲ್, ಚೀಫ್ ಜನರಲ್ ಮೆನೇಜರ್ ಸುಭಾಷ ಪೈ, ಸುಬ್ರಾಯ ನಾಯಕ್, ಲತಾಮಣಿ ರೈ, ದಿನೇಶ್ ಕರ್ಕೇರಾ, ಸುನಂದಾ ಶಿವರಾಂ, ಸಂತೋಷ ಸುವರ್ಣ, ಮೋಹನ್ ಭಟ್, ಉಮಾನಾಥ್ ಕೋಟೆಕಾರ್ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Advertisement

ಸ್ವಚ್ಛತೆ:

ಶ್ರಮದಾನಕ್ಕೆ ಚಾಲನೆ ದೊರಕಿದ ಬಳಿಕ ಅಭಿಯಾನದ ಸಂಚಾಲಕ ಸ್ವಾಮಿ ಏಕಗಮ್ಯಾನಂದಜಿ ನಾಲ್ಕು ಗುಂಪುಗಳನ್ನು ರಚಿಸಿ ಕಾರ್ಯಗಳನ್ನು ಹಂಚಿಕೆ ಮಾಡಿದರು.

Advertisement

ಪ್ರಥಮ ತಂಡ ಮಧುಚಂದ್ರ ಆಡ್ಯಂತಾಯ ನೇತೃತ್ವದಲ್ಲಿ ಮಿಷನ್ ಸ್ಟ್ರೀಟ್ ಹಾಗೂ ಅಲ್ಲಿದ್ದ ತ್ಯಾಜ್ಯ ತುಂಬಿ ದುರ್ನಾತ ಬೀರುತ್ತಿದ್ದ ಸ್ಥಳವನ್ನು ಸ್ವಚ್ಛಗೊಳಿಸಿತು.

ಎರಡನೇ ಗುಂಪು ಸಂದೀಪ ಕೋಡಿಕಲ್ ಹಾಗೂ ಯೋಗೀಶ್ ಕಾಯರ್ತಡ್ಕ ಜೊತೆಗೂಡಿ ನೆಲ್ಲಿಕಾಯಿ ರಸ್ತೆಯನ್ನು ಸ್ವಚ್ಛಗೊಳಿಸಿ, ಅಲ್ಲಿಯೇ ಮೂಲೆಯೊಂದರಲ್ಲಿದ್ದ ತ್ಯಾಜ್ಯದ ರಾಶಿಗಳನ್ನು ಜೆ.ಸಿ.ಬಿ ಬಳಸಿಕೊಂಡು ತೆರವುಗೊಳಿಸಿತು. ನಂತರ ಅಲ್ಲಿ ದುರ್ನಾತ ಹರಡದಂತೆ ತಡೆಯಲು ಜಲ್ಲಿಹುಡಿಯನ್ನು ಹಾಕಿ ನೆಲವನ್ನು ಸಮತಟ್ಟುಗೊಳಿಸಲಾಯಿತು.

Advertisement

ಮೂರನೇ ತಂಡ ಅನಿರುದ್ಧ ನಾಯಕ್ ಹಾಗೂ ಅವಿನಾಶ್ ಅಂಚನ್ ಜೊತೆಸೇರಿ ಮಿಷನ್ ಸ್ಟ್ರೀಟ್ ಹಾಗೂ ನೆಲ್ಲಿಕಾಯಿ ರಸ್ತೆಯ ಜಂಕ್ಷಣ್‍ನಲ್ಲಿದ್ದ ಕಸದರಾಶಿ ಹಾಗೂ ಕಟ್ಟಡತ್ಯಾಜ್ಯಗಳನ್ನು ತೆರವುಗೊಳಿಸಿ ಆ ಪರಿಸರವನ್ನು ಸ್ವಚ್ಛಗೊಳಿಸಿತು.

ನಾಲ್ಕನೇ ತಂಡದಲ್ಲಿದ್ದ ಶಾರದಾ ವಿದ್ಯಾಲಯದ ವಿದ್ಯಾರ್ಥಿನಿಯರು ಸರಿತಾ ಶೆಟ್ಟಿ, ಶ್ರೀಜಾ ಶ್ರೀಕಾಂತ್ ಮತ್ತು ವಿಧಾತ್ರಿ ನೇತೃತ್ವದಲ್ಲಿ ಶ್ರಮದಾನ ಮಾಡಿದ ಬಳಿಕ ಆ ಪರಿಸರದ ಜನರಲ್ಲಿ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸಲು ಮನೆ ಭೇಟಿ ಹಾಗೂ ಅಂಗಡಿಯ ವರ್ತಕರಿಗೆ ಕರಪತ್ರ ಹಂಚಿ ಸ್ವಚ್ಛತೆಯನ್ನು ಕಾಪಾಡುವಂತೆ ಮನವಿ ಮಾಡಿದರು.

Advertisement

ಇನ್ನುಳಿದ ಕಾರ್ಯಕರ್ತರು ಮಾರ್ಗಗಳನ್ನು, ಅದರ ಬದಿಗಳನ್ನು ಹಾಗೂ ತೋಡುಗಳನ್ನು ಶುಚಿಗೊಳಿಸಿದರು. ಹಿರಿಯ ಸ್ವಯಂ ಸೇವಕರು ಅನಧಿಕೃತ ಬ್ಯಾನರ್- ಪೋಸ್ಟರ್ ಗಳನ್ನು ತೆರವುಗೊಳಿಸಿದರು.

ಕಣ್ಗಾವಲು ಪಡೆ: ನೆಲ್ಲಿಕಾಯಿ ರಸ್ತೆ ಹಾಗೂ ಮಿಷನ್ ಸ್ಟ್ರಿಟ್‍ನಲ್ಲಿನ ಮೂರು ಬೃಹತ್ ತ್ಯಾಜ್ಯರಾಶಿ ಬೀಳುವ ಸ್ಥಳಗಳನ್ನು ಇಂದು ಸ್ವಯಂಸೇವಕರು ಸ್ವಚ್ಛಗೊಳಿಸಿ, ಅಲ್ಲಿ ಅಲಂಕಾರಿಕ ಹೂಕುಂಡಗಳನ್ನಿಟ್ಟು ಆ ಜಾಗವನ್ನು ಅಂದಗೊಳಿಸಿದ್ದಾರೆ. ಪ್ರತಿವಾರದಂತೆ ರಾಮಕೃಷ್ಣ ಮಿಷನ್ ಸ್ವಚ್ಛತಾ ಯೋಧರು ಜಗನ್ ಕೋಡಿಕಲ್ ಹಾಗೂ ಸುಧೀರ್ ವಾಮಂಜೂರು ಜೊತೆಸೇರಿ ಮುಂದಿನ ಒಂದು ವಾರಗಳ ಕಾಲ ಹಗಲಿರುಳು ಆ ಸ್ಥಳಗಳಲ್ಲಿ ಕಾವಲು ಕಾಯಲಿದ್ದಾರೆ. ಅಕಸ್ಮಾತ್ ಯಾರಾದರೂ ತ್ಯಾಜ್ಯ ಬಿಸಾಡಿದರೆ ಅವರನ್ನು ಗುರುತಿಸಿ, ಜಾಗೃತಿ ಮೂಡಿಸಿ ಮನಪರಿವರ್ತನೆ ಮಾಡಲು ಪ್ರಯತ್ನಿಸಲಿದ್ದಾರೆ.

Advertisement

ಕಸದ ಬುಟ್ಟಿಗಳ ವಿತರಣೆ: ರಾಮಕೃಷ್ಣ ಮಿಷನ್ ವತಿಯಿಂದ ಹಮ್ಮಿಕೊಳ್ಳಲಾಗುತ್ತಿರುವ ‘ಕಸದ ಬುಟ್ಟಿ ಉಪಯೋಗಿಸಿ ಸ್ವಚ್ಛತೆಯಲ್ಲಿ ಕೈಜೋಡಿಸಿ’ ಅಭಿಯಾನದಡಿಯಲ್ಲಿ ನಗರದ ಚಿಕ್ಕಪುಟ್ಟ ಅಂಗಡಿಗಳಿಗೆ ಹಾಗೂ ಬೀದಿಬದಿಯ ವ್ಯಾಪಾರಿಗಳಿಗೆ ಕಸದಬುಟ್ಟಿಯನ್ನು ವಿತರಿಸುವ ಅಭಿಯಾನವನ್ನು ಕಳೆದ ತಿಂಗಳು ಆರಂಭಿಸಲಾಗಿತ್ತು. ಇಂದಿನವರೆಗೆ ಸುಮಾರು 300 ಕಸದ ಬುಟ್ಟಿಗಳನ್ನು ಸ್ಟೇಟ್ ಬ್ಯಾಂಕ್, ಬೈಕಂಪಾಡಿ, ಬಿಜೈ, ಹಂಪಣಕಟ್ಟೆ, ಬೊಕ್ಕಪಟ್ಣ, ಕುಲಶೇಖರ, ನಂದಿಗುಡ್ದ, ಬಂದರ್, ಉರ್ವಾಸ್ಟೋರ್, ಅಶೋಕ ನಗರ, ಕಾವೂರು ಇನ್ನಿತರ ಕಡೆಗಳಲ್ಲಿ ವಿತರಿಸಲಾಗಿದೆ.

ಕಮಲಾಕ್ಷ ಪೈ ನೇತೃತ್ವದಲ್ಲಿ ಪುನೀತ್ ಪೂಜಾರಿ, ಸತೀಶ್ ಕೆಂಕನಾಜೆ, ಶಿವು ಪುತ್ತೂರು, ರವಿ ಕೆ ಆರ್, ಕೃಷ್ಣ ಜಿ, ಪ್ರಶಾಂತ ಉಪ್ಪಿನಂಗಡಿ ಹಾಗೂ ಇನ್ನಿತರ ಕಾರ್ಯಕರ್ತರು ವಿತರಣಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಎಲ್ಲ ಚಟುವಟಿಕೆಗಳಿಗೆ ಎಂ.ಆರ್.ಪಿ.ಎಲ್ ಸಂಸ್ಥೆ ಪ್ರಾಯೋಜಕತ್ವ ನೀಡಿದೆ.

Advertisement

 

Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಪ್ರಜಾಪ್ರಭುತ್ವದಲ್ಲಿ ನೋಟಾ (NOTA)‌ | ಸುಶ್ರುತ ದೇಲಂಪಾಡಿ ಹೀಗೆ ಬರೆಯುತ್ತಾರೆ…
April 24, 2024
3:09 PM
by: ದ ರೂರಲ್ ಮಿರರ್.ಕಾಂ
ಪ್ಯಾಕೆಟ್ ಹಿಟ್ಟು ಆರೋಗ್ಯಕ್ಕೆ ಒಳ್ಳೆಯದೆ ಅಥವಾ ಹಾನಿಕರವೇ? ಪ್ಯಾಕೆಟ್ ಹಿಟ್ಟು ಉಪಯೋಗಿಸಿದರೆ ಏನಾಗುತ್ತದೆ ತಿಳಿದುಕೊಳ್ಳಿ..
April 24, 2024
2:32 PM
by: The Rural Mirror ಸುದ್ದಿಜಾಲ
ಅಡಿಕೆ ಆಮದು ಒಪ್ಪಂದು ರದ್ದು…! | ಭರವಸೆ ನೀಡಿದ ಕಾಂಗ್ರೆಸ್‌ |
April 24, 2024
2:23 PM
by: ದ ರೂರಲ್ ಮಿರರ್.ಕಾಂ
ಅಡಿಕೆ ಉಪ ಉತ್ಪನ್ನಗಳ ತಯಾರಿಕೆ ಬೆಂಬಲ ಘೊಷಿಸಿದ ಅಭ್ಯರ್ಥಿ |
April 23, 2024
1:54 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror