ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯಕ್ಕೆ ನೂತನ ಬ್ರಹ್ಮರಥ ಆಗಮನದ ಸಂದರ್ಭ ಭಕ್ತಾದಿಗಳಿಗೆ ಸ್ವಚ್ಛತೆಯ ಬಗ್ಗೆಯೂ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅರಿವು ಮೂಡಿಸಿದೆ.
Advertisement
ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವತಿಯಿಂದ ತ್ಯಾಜ್ಯಗಳ ವಿಂಗಡಣೆ ಹಾಗೂ ವಿಲೇವಾರಿ ಬಗ್ಗೆ ಮಾಹಿತಿ ನೀಡುವ ವಾಹನವು ಬ್ರಹ್ಮರಥ ಆಗಮನದ ಸಂದರ್ಭ ಎಲ್ಲರ ಗಮನಸೆಳೆಯಿತು. ಹಸಿ ಕಸಗಳ ಹಾಗು ಒಣಕಸಗಳ ವಿಂಗಡನೆ ಹಾಗೂ ಅದರ ಮರುಬಳಕೆ ಹೇಗೆ ಎಂಬುದರ ಬಗ್ಗೆ ಮಾಹಿತಿ ನೀಡಲಾಗಿತ್ತು. ಗೊಬ್ಬರ ತಯಾರಿಯ ಬಗ್ಗೆಯೂ ಸಂಕ್ಷಿಪ್ತ ಮಾಹಿತಿ ಅಲ್ಲಿತ್ತು.
Advertisement
ಇಂದು ಎಲ್ಲೆಡೆ ತ್ಯಾಜ್ಯಗಳ ವಿಲೇವಾರಿಯೇ ಬಹುದೊಡ್ಡ ಸಮಸ್ಯೆಯಾಗಿದೆ. ಸುಬ್ರಹ್ಮಣ್ಯದಲ್ಲಿ ಭಕ್ತಾದಿಗಳು ಸಾಕಷ್ಟು ಸಂಖ್ಯೆಯಲ್ಲಿ ಬರುವುದರಿಂದ ತ್ಯಾಜ್ಯಗಳನ್ನೂ ಎಲ್ಲೆಡೆ ಎಸೆಯುವ ಪ್ರವೃತ್ತಿ ಇದೆ. ಹೀಗಾಗಿ ಆಡಳಿತಕ್ಕೂ ಯಾವಾಗಲೂ ಸಮಸ್ಯೆಯಾಗುತ್ತಿದೆ. ಇದೀಗ ಜಾಗೃತಿ ಕಾರ್ಯಕ್ರಮದ ಮೂಲಕ ಜನರನ್ನು, ಭಕ್ತಾದಿಗಳನ್ನು ಎಚ್ಚರಿಸಲಾಗಿದೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement