ಪ್ರತಿವರ್ಷದಂತೆ ಇಂದು ಸಂಭ್ರಮದ ದಿನ… ಈ ಆಚರಣೆಗಾಗಿ ಎಲ್ಲ ದೇಶಭಕ್ತ ರ ಮನಸ್ಸು ಹಾತೊರೆಯುತ್ತಿದೆ…ಆದರೆ ನನ್ನ ಮನಸ್ಸು ಮರುಗುತ್ತಿದೆ… ಸ್ವಾತಂತ್ರ್ಯ ಎಂಬ ಪದದ ಅರ್ಥವೇನು? ಎಂದೂ ಇಂದಿಗೂ ಅರ್ಥವಾಗಿಲ್ಲ…
ಇಂದು ಹೆತ್ತವರು,ಮಡದಿ ಮಕ್ಕಳನ್ನು ಬಿಟ್ಟು ದೇಶದೊಳಕ್ಕೆ ಪಾಪಿಗಳೆಲ್ಲಿ ನುಸುಳಿ ಬರುವರೋ ಎಂಬ ಆತಂಕದಲ್ಲಿ ಮೈಯೆಲ್ಲಾ ಕಣ್ಣಾಗಿಸಿಕೊಂಡು ಕಾಯುತ್ತಿದ್ದಾರೆ.. ಸ್ವಾತಂತ್ರ್ಯದ ಸಂಭ್ರಮ ಕ್ಕೆ ತಿರಂಗ ಧ್ವಜವನ್ನು ಬಿಗಿಬಂದೋಬಸ್ತಿನಲ್ಲಿ ಹಾರಿಸುವ ಪರಿಸ್ಥಿತಿ ನಮ್ಮದು.. ಆದರೂ ನಾವು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ.. ನಾವು ಸ್ವತಂತ್ರ ರು,ಗಾಂಧೀಜಿಯವರು ಯಾವಾಗ ಹೆಣ್ಣು ಮಕ್ಕಳು ರಾತ್ರಿ ವೇಳೆಯಲ್ಲಿ ಒಬ್ಬಂಟಿಗರಾಗಿ ನಡೆಯುತ್ತಾರೋ ಅಂದು ದೇಶ ಸ್ವತಂತವಾದಂತೆ,ಎಂದಿದ್ದರು .ಎಷ್ಟು ಹೆಣ್ಣುಮಕ್ಕಳು ಈ ಪವಿತ್ರ ಭಾರತಾಂಭೆಯ ಮಣ್ಣಿನಲ್ಲಿ ರಾತ್ರಿ ಹೊತ್ತು ನಡೆದಿದ್ದಾರೋ ಗೊತ್ತಿಲ್ಲ.. ಆದರೆ ಹಗಲು ಹೊತ್ತಿನಲ್ಲಿ ಶಾಲೆಗೆ ಹೋಗುತ್ತಿರುವ ಮಕ್ಕಳ ಮೇಲೂ ಅತ್ಯಾಚಾರದಂತಹ ಘೋರ ಅಪರಾಧಗಳು ನಡೆಯುತ್ತಿರುವುದು ಸುಳ್ಳಲ್ಲ..ಸ್ವಾತಂತ್ರ್ಯ ಕ್ಕಾಗಿ ತಮ್ಮಲ್ಲಿರುವ ಹಣ ಚಿನ್ನಾಭರಣ ಎಲ್ಲವನ್ನೂ ಕೊಟ್ಟು ಈದೇಶಕ್ಕಾಗಿ ಮಡಿದವರು ಅದೆಷ್ಟೋ ಮಂದಿ..ಆದರೆ ಇಂದು ಲೆಕ್ಕ ಇಲ್ಲದಷ್ಟು ಆಸ್ತಿ ಹಣ ಸಂಪಾದಿಸಿ ಮೆರೆಯುವವರು ಅದೆಷ್ಟೋ ಮಂದಿ.. ಹೇಳಲು ಹೊರಟರೆ ಮಗಿಯದ ಕತೆ..ನಾವು ಬ್ರಿಟಿಷರ ದಾಸ್ಯದಿಂದ ಮುಕ್ತಿ ಹೊಂದಿದ್ದೇವೆ ನಿಜ.. ಆದರೆ ಈ ಕ್ಷಣವೂ ನಾವು ಇನ್ಯಾರದೋ ಆಕ್ರಮಣ ದ ಭಯದಲ್ಲಿದ್ದೇವೆ.. ನಮ್ಮವರ ಕಪಿಮುಷ್ಟಿಯೊಳಗೆ ನಾವು ಬಂಧಿತರಾಗಿದ್ದೇವೆ…. ಬಹುಷ: ಸಂಪೂರ್ಣ ಸ್ವಾತಂತ್ರ್ಯ ಅಸಾಧ್ಯವೇನೋ….?
ಏನೇ ಇರಲಿ.. ನನ್ನೆಲ್ಲಾ ಮಿತ್ರರಿಗೆ ಸ್ವಾತಂತ್ರ್ಯೋತ್ಸವದ ಶುಭಾಷಯಗಳು….
ನಮ್ಮೆಲ್ಲರ ಸ್ವಾತಂತ್ರ್ಯ ಕ್ಕೆ ಕಾರಣೀಭೂತರಾದ ಎಲ್ಲರಿಗೂ ನಮಿಸುತ್ತಾ ಆಚರಣೆಗೆ ಲೋಪ ಬರದಂತೆ ಮೈಯೆಲ್ಲಾ ಕಣ್ಣಾಗಿಸಿ ಮಳೆ ಚಳಿಯ ಹಂಗು ತೊರೆದು ಕಾಯುತ್ತಿರುವ ಎಲ್ಲಾ ಸಹೋದರ ಸೈನಿಕ ಬಾಂಧವರಿಗೆ ತಾಯಿ ಭಾರತಿ ಇನ್ನಷ್ಟು ಶಕ್ತಿ ತುಂಬಲಿ ಆಯಸ್ಸು ಆರೋಗ್ಯ ಕರುಣಿಸಲಿ
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…