ಹಬ್ಬ ಹರಿದಿನಗಳ ಆಚರಣೆ ಸಾರ್ವಜನಿಕ ಸಂಕಲನಕ್ಕೆ ಸಹಕಾರಿ

August 11, 2019
11:42 AM

ಆಲಂಕಾರು: ಕಡಬ ಅಲಂಕಾರು ಶ್ರೀ ಭಾರತೀ ಹಿರಿಯ ಪ್ರಾಥಮಿಕ ಶಾಲೆಯ ಮಾಧವ ಸದನದಲ್ಲಿ  ವರಮಹಾಲಕ್ಷ್ಮೀ ಹಬ್ಬದ ಆಚರಣೆ ನಡೆಯಿತು.

ಕಾರ್ಯಕ್ರಮದಲ್ಲಿ ಮಂಗಳೂರು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ,ಸಾಹಿತಿ,ವೈದ್ಯ ಡಾ ಸುರೇಶ ನೆಗಳಗುಳಿ ಮಾತನಾಡಿ ” ವರ ಮಹಾಲಕ್ಷ್ಮಿ ವ್ರತದ ಮಹತ್ವ, ಅದರ ಪೌರಾಣಿಕ ಹಿನ್ನೆಲೆ ಹಾಗೂ ಆರೋಗ್ಯದ ಸಂಪತ್ತು ಪ್ರಾಪ್ತ ವಾಗುವ ಉಪಾಯಗಳು ಹಾಗೂ ದೇವಿ ಲಕ್ಷ್ಮಿ ಯ ಪಾತ್ರವನ್ನು ವರ್ಣಿಸಿದರಲ್ಲದೆ, ಲಕ್ಷ್ಮಿ ದೇವಿಯ ಹಲವಾರು ನಾಮ ಹಾಗೂ ಅರ್ಥವನ್ನೊಳ ಗೊಂಡ ಸ್ವರಚಿತ ಕವನವನ್ನು ಧಾರ್ಮಿಕ ಉಪಾನ್ಯಾಸಕ ರಾಗಿ ವಾಚಿಸಿದರು.

ಇನ್ನೋರ್ವ ಮುಖ್ಯ ಅತಿಥಿಯಾಗಿದ್ದ ಮೈಸೂರಿನಲ್ಲಿರುವ ವಿಶ್ವಪ್ರಸಾದ್ ಆಳ್ವರವರು ಮಾಂಸಾಹಾರ ವರ್ಜ್ಯ  ಮಾಡುವ ಉದ್ದೇಶ ಹಾಗೂ ಅದು ಹೇಗೆ ಜನಸಂಕುಲದ ಸಂಸ್ಕಾರವನ್ನು ಪರಿವರ್ತಿಸ ಬಲ್ಲದು ಎಂದು ವಿವರಿಸಿದರು.
ಅಧ್ಯಕ್ಷರಾಗಿ ಶಾಲಾ ಸಂಚಾಲಕ  ಶ್ರೀಕೃಷ್ಣ ಕುಮಾರ್ ಇವರು ಶಿಸ್ತುಬದ್ಧ ನೀತಿಯನ್ನು ಉಳಿಸಿ ಬೆಳೆಸುವಲ್ಲಿ ತಮ್ಮ ಸಂಸ್ಥೆ ನಿಗಾ ವಹಿಸುವುದಲ್ಲದೆ ಇಂತಹ ಹಬ್ಬ ಹರಿದಿನಗಳ ಆಚರಣೆ ಹಲವಾರು ವರ್ಷಗಳಿಂದಲೂ ನಡೆಸುತ್ತಿದ್ದು , ಉತ್ತಮ ಶಿಕ್ಷಣವೇ ತಮ್ಮ ಗುರಿ ಎಂದರು.

ಡಾ ಸುರೇಶ್ ಕೂಡೂರು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು.ಆಶಾ ಎಸ್ ರೈ ಮತ್ತು ಚಂದ್ರಹಾಸ ನಿರೂಪಿಸಿದರು. ಭವಾನಿ ವಂದಿಸಿದರು.ವೇದಿಕೆಯಲ್ಲಿ ಅರ್ಚಕ ವೇದಮೂರ್ತಿ ಅನಂತರಾಮ ಶರವೂರು ಮತ್ತು ಕನಕಲತಾ ಉಪಸ್ಥಿತರಿದ್ದರು.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹಲವು ರಾಜ್ಯಗಳಲ್ಲಿ ಮುಂದಿನ 2 ದಿನ ಭಾರೀ ಮಳೆ ಸಾಧ್ಯತೆ – ಆರೆಂಜ್ ಅಲರ್ಟ್
October 17, 2026
7:30 AM
by: ದ ರೂರಲ್ ಮಿರರ್.ಕಾಂ
ಬರಪೀಡಿತ ವಿಜಯಪುರದಲ್ಲಿ ಹಸಿರಿನ ಕ್ರಾಂತಿ
October 17, 2026
7:23 AM
by: ದ ರೂರಲ್ ಮಿರರ್.ಕಾಂ
ಅಡಿಕೆ ತೋಟದಿಂದ ನ್ಯಾನೋತಂತ್ರಜ್ಞಾನದವರೆಗೆ…! ಬೆಳೆಗಾರರಿಗೆ ಹೊಸ ಮೌಲ್ಯ ಸೃಷ್ಟಿಸುವ ಸಂಶೋಧನೆ
October 16, 2026
5:14 PM
by: ವಿಶೇಷ ಪ್ರತಿನಿಧಿ
ದಕ್ಷಿಣ ಕನ್ನಡ ಜಿಲ್ಲೆ ಮರುನಾಮಕರಣಕ್ಕೆ ಬೆಳ್ಳಾರೆ ಬಳಕೆದಾರರ ವೇದಿಕೆ ವಿರೋಧ- ಜನಮತ ಸಂಗ್ರಹಕ್ಕೆ ಆಗ್ರಹ
October 16, 2026
3:42 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror