ಮೊನ್ನೆ ಮೊನ್ನೆ ಕ್ಯಾರ್ ಚಂಡಮಾರುತದ ಭೀತಿ ಕರಾವಳಿಯಲ್ಲಿತ್ತು. ನಂತರ ಈ ಭಯ ದೂರವಾದ ಬಳಿಕ ಇನ್ನೆರಡು ಚಂಡಮಾರುತದ ಭೀತಿಯೂ ಇತ್ತು. ಸದ್ಯ ಈ ಭಯ ದೂರವಾಯಿತು. ಮಳೆ ಇನ್ನೂ ಒಂದೆರಡು ದಿನ ಇರುತ್ತದೆ. ಏಕೆಂದರೆ ಹವಾಮಾನದ ಬದಲಾವಣೆ ಕುತೂಹಲಕಾರಿ. ಹೀಗಾಗಿಯೇ ಇಲಾಖೆಗಳು ಸನ್ನದ್ಧವಾಗಿರಬೇಕಾದ ಅನಿವಾರ್ಯತೆ ಇರುತ್ತದೆ. ಮಳೆ ಹಾಗೂ ಹವಾಮಾನದ ವ್ಯತ್ಯಾಸ ಕಿಲೋಮೀಟರ್ ನಲ್ಲಿ ವ್ಯತ್ಯಾಸವಾಗುತ್ತದೆ. ಈ ಲೆಕ್ಕವನ್ನು ಸುಳ್ಯನ್ಯೂಸ್.ಕಾಂ ನೀಡಬೇಕು ಎಂಬ ಉದ್ದೇಶ ಹೊಂದಿದೆ.
ಸುಳ್ಯ ಹಾಗೂ ದಕ್ಷಿಣ ಕನ್ನಡದಲ್ಲಿ ಅನೇಕ ವರ್ಷಗಳಿಂದ ಮಳೆ ಲೆಕ್ಕ ಹಾಗುವ ಕೃಷಿಕರು, ಆಸಕ್ತರು ಇದ್ದಾರೆ. ಇದಕ್ಕಾಗಿಯೇ ಮಳೆ ಲೆಕ್ಕ ಎಂಬ ವ್ಯಾಟ್ಸಪ್ ಗ್ರೂಪು ರಚನೆ ಮಾಡಿ ಜಿಲ್ಲೆಯ ವಿವಿದೆಡೆ ಮಳೆ ಲೆಕ್ಕವನ್ನು ಕೃಷಿಕರೇ ಸಂಗ್ರಹಿಸುತ್ತಾರೆ. ಈ ಬಗ್ಗೆ ಮಾಹಿತಿ ಹೀಗಿದೆ…
ಸುಳ್ಯ ತಾಲೂಕಿನ ಬಾಳಿಲದ ಪಿ ಜಿ ಎಸ್ ಎನ್ ಪ್ರಸಾದ್ ಅವರು ಅನೇಕ ವರ್ಷಗಳಿಂದ ಮಳೆಯ ಲೆಕ್ಕ ಹಾಕುತ್ತಿದ್ದಾರೆ.
ಸುಳ್ಯ ತಾಲೂಕಿನ ಕೊಲ್ಲಮೊಗ್ರದ ಕೇಶವ ಕಟ್ಟ ಅವರು ಕೂಡಾ ಮಳೆ ಲೆಕ್ಕ ಬರೆಯುತ್ತಾರೆ.
ಸುಳ್ಯ ತಾಲೂಕಿನ ಕಲ್ಲಾಜೆಯ ಶಿಬಿ ಅಬ್ರಹಾಂ ಅವರೂ ಮಳೆ ದಾಖಲೆ ಬರೆಯುತ್ತಾರೆ.
ಸುಳ್ಯ ತಾಲೂಕಿನ ಹಾಲೆಮಜಲಿನ ಉಣ್ಣಿಕೃಷ್ಣ ಅವರೂ ಮಳೆ ದಾಖಲೆ ಮಾಡುತ್ತಾರೆ
ಸುಳ್ಯ ತಾಲೂಕಿನ ಕಮಿಲ-ಪುಚ್ಚಪ್ಪಾಡಿಯಲ್ಲಿ ಮಳೆ ಲೆಕ್ಕದ ಆಸಕ್ತಿ ಹೊಂದಿದವರು ಇದ್ದಾರೆ.
ಕಡಬ ತಾಲೂಕಿನ ಕಡಬದಲ್ಲಿನ ನಿವೃತ್ತ ಅರಣ್ಯಾಧಿಕಾರಿ ಸದಾಶಿವ ಭಟ್ ಅವರಲ್ಲಿ ಮಳೆ ದಾಖಲೆ ಇದೆ
ಬೆಳ್ತಂಗಡಿ ತಾಲೂಕಿನ ಉರುವಾಲಿನ ಡಾ.ಕಿಶನ್ ಅವರು ಅನೇಕ ವರ್ಷಗಳಿಂದ ಮಳೆ ಲೆಕ್ಕ ಇದೆ
ಬಂಟ್ವಾಳ ತಾಲೂಕಿನ ವಿಟ್ಲಯ ಕೆಲಿಂಜದ ವೆಂಕಟಗಿರಿ ಅವರು ಮಳೆ ಲೆಕ್ಕ ಬರೆಯುತ್ತಾರೆ.
ಪೆರ್ಲ ಬಳಿಯ ಸ್ವರ್ಗದ ಪಡ್ರೆಯ ವಿವೇಕ್ ಅವರಲ್ಲಿ ಮಳೆ ಲೆಕ್ಕ ಇದೆ.
ಮುಂದೆ ಇಲ್ಲಿನ ಮಳೆ ದಾಖಲೆಗಳನ್ನು ಇಲ್ಲಿ ಪ್ರಕಟ ಮಾಡುವ ಇರಾದೆ ಇದೆ. ಇನ್ನಷ್ಟು ಮಳೆ ಲೆಕ್ಕ ಬರೆಯುವ ಆಸಕ್ತರಿದ್ದರೆ ಅದನ್ನೂ ಸೇರಿಸಿ ಮಳೆಯ ಮಾಪನ ಮಾಡಬಹುದಾಗಿದೆ. ಏಕೆಂದರೆ ಕಿಲೋಮೀಟರ್ ವ್ಯತ್ಯಾಸದಲ್ಲಿ ಬೀಳುವ ಮಳೆಯಲ್ಲಿ ವ್ಯತ್ಯಾಸ ಇರುತ್ತದೆ. ಹೀಗಾಗಿ ಮಳೆ ದಾಖಲೆ ಮಾಡುವವರು ಇದ್ದರೆ ತಿಳಿಸಿದರೆ ಸುಳ್ಯನ್ಯೂಸ್.ಕಾಂ ಗೆ ಮಾಹಿತಿ ನೀಡಬೇಕಾಗಿ ವಿನಂತಿ.
ಭಾನುವಾರದ ಮಳೆಯ ಲೆಕ್ಕ ಹೀಗಿದೆ:
ಕೊಲ್ಲಮೊಗ್ರ : 14 ಮಿಮೀ
ಕಲ್ಲಾಜೆ : 24 ಮಿಮೀ
ಅಡೆಂಜ-ಉರುವಾಲು : 48 ಮಿಮೀ
ಬಾಳಿಲ : 44 ಮಿಮೀ
ಕಡಬ : 23.5 ಮಿಮೀ
ಪಡ್ರೆ : 54 ಮಿಮೀ
ಕಮಿಲ-ಪುಚ್ಚಪ್ಪಾಡಿ : 27 ಮಿಮೀ
ಕೆಲಿಂಜ-ಕೋಡಪದವು :42 ಮಿಮೀ
ಹಾಲೆಮಜಲು : 29 ಮಿಮೀ
ಸೋಮವಾರ:
ಕೊಲ್ಲಮೊಗ್ರ : 19 ಮಿಮೀ
ಹಾಲೆಮಜಲು : 5 ಮಿಮೀ
ಅಡೆಂಜ-ಉರುವಾಲು : 1 ಮಿಮೀ
ಕಮಿಲ-ಪುಚ್ಚಪ್ಪಾಡಿ : 4 ಮಿಮೀ
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…