Advertisement
MIRROR FOCUS

ಹಸಿರ ಸೌಂದರ್ಯದ ರಮಣೀಯ ಗಿರಿಶೃಂಗ ರಾಣಿಪುರಂ

Share

ಸುಳ್ಯ: ಕೇರಳ-ಕರ್ನಾಟಕ ರಾಜ್ಯಗಳ ಗಡಿ ಪ್ರದೇಶವಾದ ರಾಣಿಪುರಂನ ಸೌಂದರ್ಯ ವರ್ಣನಾತೀತ. ಸುತ್ತಲೂ ಪೋಣಿಸಿದಂತೆ ಕಾಣುವ ಹಸಿರು ಬೆಟ್ಟಗಳ ಸಾಲುಗಳು. ಅದರ ಮೇಲೆ ಮೊಲದ ಮರಿಗಳಂತೆ ಓಡಾಡುವ ಬಿಳಿ ಮೋಡ. ಹಾಲ್ನೊರೆ ಸೂಸುವಂತೆ ಪರಿಸರವನ್ನು ತಬ್ಬಿಕೊಳ್ಳುವ ಮಂಜಿನ ಕಣಗಳು. ಕ್ಷಣ ಮಾತ್ರದಲ್ಲಿ ನಮ್ಮನ್ನು ಮುತ್ತಿಕೊಳ್ಳುವ ಮಂಜು ಇಡೀ ಪ್ರದೇಶದಲ್ಲಿ ಬಿಳಿ ಚಿತ್ತಾರ ಬಿಡಿಸುತ್ತದೆ.

Advertisement
Advertisement

`ಕೇರಳದ ಊಟಿ’ ಎಂದೇ ಪ್ರಸಿದ್ಧವಾಗಿರುವ ರಾಣಿಪುರಂ ಎಂಬ ಹಸಿರ ಸೌಂದರ್ಯ ಖನಿ ಇರುವುದು ಕಾಸರಗೋಡು ಜಿಲ್ಲೆಯ ಪನತ್ತಡಿ ಗ್ರಾಮ ಪಂಚಾಯತ್ ನಲ್ಲಿದೆ.  ಸಮುದ್ರ ಮಟ್ಟದಿಂದ 2460 ಅಡಿ ಎತ್ತರದಲ್ಲಿರುವ ಗಿರಿಶಿಖರವಿದು. ಪನತ್ತಡಿಯಿಂದ ಹತ್ತು ಕಿಲೋಮೀಟರ್ ದೂರದಲ್ಲಿ ರಾಣಿಪುರಂ ಇದೆ. ಪಶ್ಚಿಮ ಘಟ್ಟ ತಪ್ಪಲಿನ ಸಹ್ಯಾದ್ರಿ ಬೆಟ್ಟಗಳ ಸಾಲಿಗೆ ಸೇರುವ ರಾಣಿಪುರಂ ಗಿರಿ ಶೃಂಗಕ್ಕೆ ತಲುಪಲು ಸುಮಾರು ಐದು ಕಿಲೋಮಿಟರ್ ಕಾಡಿನ ಮಧ್ಯೆ ನಡೆದು ಸಾಗಬೇಕು. ಚಿಕ್ಕ ಚಿಕ್ಕ ಜಲಪಾತಗಳ, ಸ್ಪಟಿಕದಂತೆ ಹೊಳೆಯುವ ನೀರು ಹರಿಯುವ ತೊರೆಗಳ ಜುಳು ಜುಳು ನಾದವನ್ನೂ, ಪಕ್ಷಿಗಳ ಕಲರವವನ್ನು ಆಲಿಸುತ್ತಾ, ಹಸಿರು ಹುಲ್ಲುಗಾವಲಿನ ಮತ್ತು ಭಾರೀ ಗಾತ್ರದ ಮರಗಳ ಸೌಂದರ್ಯವನ್ನು ಸವಿಯುತ್ತಾ ಕ್ರಮಿಸುವ ಈ ಪ್ರಯಾಣ ವಿಶಿಷ್ಟ ಅನುಭವವನ್ನು ನೀಡುತ್ತದೆ.

Advertisement

 

Advertisement

 

ಬೆಟ್ಟದ ತುತ್ತ ತುದಿಗೆ ತಲುಪಿದಾಗ ಸುತ್ತಲೂ ಹಸಿರಿನ ಅದ್ಭುತ ಲೋಕವೇ ತೆರೆದು ಕೊಳ್ಳುತ್ತದೆ. ಅತ್ಯಂತ ಅಪರೂಪದ ಸಸ್ಯ ಸಂಪತ್ತು ಮತ್ತು ವಿಶಿಷ್ಟ ಔಷಧ ಗಿಡಗಳು. ಪಕ್ಷಿಗಳು, ಆರ್ಕಿಡ್ ಗಿಡಗಳು, ವರ್ಣ ವೈಭವದ ಚಿಟ್ಟೆಗಳು ರಾಣಿಪುರಂನ ಸೌಂದರ್ಯವನ್ನು ಹೆಚ್ಚಿಸುತ್ತದೆ. ಪ್ರಕೃತಿಯ ಆರಾಧಕರಿಗೆ, ಪರಿಸರ ಸೌಂದರ್ಯದ ಆಸ್ವಾದಕರಿಗೆ, ಟ್ರಕ್ಕಿಂಗ್ ಪ್ರಿಯರಿಗೆ ರಾಣಿಪುರಂ ಅತ್ಯಂತ ಸೂಕ್ತ ಪ್ರದೇಶ. ಕಾಡಾನೆ ಹಿಂಡು, ಕಾಡು ಕೋಣ, ಜಿಂಕೆ, ಮಂಗ, ಮೊಲ ಹೀಗೆ ನಡೆದುಕೊಂಡು ಹೋಗುವಾಗ ದಾರಿ ಮಧ್ಯೆ ಹಲವು ಪ್ರಾಣಿಗಳ ದರ್ಶನವೂ ಆಗಬಹುದು.

Advertisement

ರಾಣಿಪುರಂನ ತುದಿಯಿಂದ ಸುತ್ತಲೂ ಕಣ್ಣಾಡಿಸಿದರೆ ಅಲ್ಲಲ್ಲಿ ಮುತ್ತು ಹರಡಿದಂತೆ ಕಾಣುವ ಕೇರಳ ಮತ್ತು ಕರ್ನಾಟಕದ ಗ್ರಾಮಗಳ ದರ್ಶನವೂ ಆಗುತ್ತದೆ. ಕೇರಳ ಮತ್ತು ಕರ್ನಾಟಕದ ಗಡಿ ಪ್ರದೇಶದಲ್ಲಿರುವ ರಾಣಿಪುರಂ ಬ್ರಹ್ಮಗಿರಿ ಬೆಟ್ಟದ ಸಾಲಿನೊಂದಿಗೆ ಪೋಣಿಸಿಕೊಂಡಿದೆ. ಕೆಲವು ಟ್ರಕ್ಕಿಂಗ್ ಉತ್ಸಾಹಿಗಳು ರಾಣಿಪುರಂ ಮೂಲಕ ಅರಣ್ಯ ದಾರಿಯಾಗಿ ತಲಕಾವೇರಿಗೂ ಟ್ರಕ್ಕಿಂಗ್ ಮಾಡುತ್ತಾರೆ.

ಬೆರಳ ತುದಿಯನ್ನೂ ಆವರಿಸುವ ಮಂಜು, ಶರೀರಕ್ಕೂ ಮನಸ್ಸಿಗೂ ಹಿತಾನುಭವವನ್ನು ನೀಡುವ ತಂಪು ಗಾಳಿ, ಹೀಗೆ ಹಚ್ಚ ಹಸಿರಿನ, ಶುದ್ಧವಾದ ವಾತಾವರಣದ ಪ್ರಕೃತಿಯ ಮಡಿಲಲ್ಲಿ ಸಮಯವನ್ನು ಕಳೆಯಲು ಇಚ್ಚಿಸುವವರು ರಾಣಿಪುರವನ್ನು ಅರಸಿ ಬರುತ್ತಾರೆ. ಕಡು ಬೇಸಗೆಯಲ್ಲೂ ತಂಪಾದ ಮತ್ತು ಹಿತವಾದ ಇಲ್ಲಿನ ವಾತಾವರಣ ಪ್ರವಾಸಿಗರನ್ನು ಸೆಳೆಯುತ್ತದೆ. ಅಕ್ಟೋಬರ್ ತಿಂಗಳಿನಿಂದ ಮೇ ತಿಂಗಳ ವರೆಗೆ ರಾಣಿಪುರಂಗೆ ಪ್ರವಾಸಿಗರ ದಂಡೇ ಆಗಮಿಸುತ್ತಾರೆ. ಮಳೆಯ ಅಧಮ್ಯ ಸೌಂದರ್ಯವನ್ನು ನೋಡ ಬಯಸುವ ಸಾಹಸಿಗರು ಮಳೆಗಾಲದಲ್ಲೂ ಇಲ್ಲಿಗೆ ಬರುತ್ತಾರೆ. ಸುಳ್ಯ ತಾಲೂಕಿನ ವಿವಿಧ ಭಾಗಗಳಿಂದ ನೂರಾರು ಮಂದಿ ರಾಣಿಪುರದ ಸೌಂದರ್ಯವನ್ನು ಹೋಗತ್ತಾರೆ.

Advertisement

ಹೋಗುವುದು ಹೇಗೆ.?
ಸುಳ್ಯದಿಂದ ಅಂತಾರಾಜ್ಯ ರಸ್ತೆಯಾದ ಸುಳ್ಯ-ಪಾಣತ್ತೂರು ರಸ್ತೆಯಲ್ಲಿ 22 ಕಿ.ಮೀ. ಪ್ರಯಾಣ ಮಾಡಿದರೆ ಕೇರಳದ ಪಾಣತ್ತೂರು ಪಟ್ಟಣ ಸಿಗುತ್ತದೆ. ಅಲ್ಲಿಂದ ಕಾಞಂಗಾಡ್ ರಸ್ತೆಯಲ್ಲಿ ಎಂಟು ಕಿ.ಮಿ. ಸಂಚರಿಸಿದರೆ ಪನತ್ತಡಿಗೆ ತಲುಪಬಹುದು. ಅಲ್ಲಿಂದ ಹತ್ತು ಕಿ.ಮಿ. ಪ್ರಯಾಣಿಸಿದರೆ ರಾಣಿಪುರಂ ಸಿಗುತ್ತದೆ. ಪಾಣತ್ತೂರಿನಿಂದಲೂ ನೇರವಾಗಿ ರಾಣಿಪುರಂಗೆ ಹೋಗಬಹುದು. ಕಾಸರಗೋಡಿನಿಂದ ಕಾಞಂಗಾಡಿಗೆ ಬಂದು ಅಲ್ಲಿಂದ ಪನತ್ತಡಿಗೆ ಬರಬಹುದು. ಕಾಞಂಗಾಡ್‍ನಿಂದ 35 ಕಿ.ಮೀ.ದೂರದಲ್ಲಿ ಪನತ್ತಡಿ ಇದೆ.

 

Advertisement

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

Karnataka Weather | 27-04-2024 | ಮೋಡ- ಬಿಸಿಗಾಳಿ | ಮಳೆ ಸಾಧ್ಯತೆ ಕಡಿಮೆ |

ಈಗಿನಂತೆ ಎಪ್ರಿಲ್ 29 ಹಾಗೂ 30ರಂದು ಉತ್ತರ ಒಳನಾಡು, ದಕ್ಷಿಣ ಕರಾವಳಿ ಹಾಗೂ…

3 hours ago

ಕೋವಿ ಠೇವಣಾತಿ ಪ್ರಕರಣ | ಬೆಳ್ಳಾರೆ ಜಯಪ್ರಸಾದ್ ಜೋಶಿ ಹಾಗೂ ಇತರ 4 ರಿಟ್ ಅರ್ಜಿದಾರರ ಪರ ಹೈಕೋರ್ಟ್ ಆದೇಶ‌ |

ಚುನಾವಣಾ ಸಮಯದಲ್ಲಿ ಪರವಾನಿಗೆ ಹೊಂದಿದ ಶಸ್ತ್ರಾಸ್ತ್ರ ಠೇವಣಿ ವಿನಾಯಿತಿ ಕೋರಿ ಸಲ್ಲಿಸಿದ ಅರ್ಜಿಯನ್ನು…

4 hours ago

ಮಲೆನಾಡಗಿಡ್ಡ ಉಳಿಸುವ ಆಂದೋಲನಕ್ಕೆ ತೊಡಗುವ ಅನಿವಾರ್ಯತೆ ಇದೆ | ಯಾಕೆ ಗೊತ್ತಾ…?

ದೇಸೀ ಗೋವು ಅದರಲ್ಲೂ ಮಲೆನಾಡು ಗಿಡ್ಡ ತಳಿಯ ಹಸು ಉಳಿಯಬೇಕು, ಅದರ ಉಳಿವು…

2 days ago

ಏರಿದ ತಾಪಮಾನ | ರಾಜ್ಯದಲ್ಲಿ ಮುಂದಿನ 5 ದಿನ ಬೀಸಲಿದೆ ಬಿಸಿಗಾಳಿ ಎಚ್ಚರಿಕೆ..!

ದಿನದಿಂದ ದಿನಕ್ಕೆ ತಾಪಮಾನ(Temperature) ಏರುತ್ತಿದೆ. ಬಿಸಿ ಗಾಳಿ(Heat wave) ಬೀಸುತ್ತಿದೆ. ನೀರಿಗೆ ಅಭಾವ(Water…

2 days ago

ನೆಲ್ಯಾಡಿ | ವಿಶ್ವವಿದ್ಯಾನಿಲಯ ಕಾಲೇಜು ಶಿಕ್ಷಕ-ರಕ್ಷಕ ಸಂಘದ ಮಹಾಸಭೆ | ನೂತನ ಪದಾಧಿಕಾರಿಗಳ ನೇಮಕ

ವಿಶ್ವ ವಿದ್ಯಾಲಯ ಕಾಲೇಜು, ನೆಲ್ಯಾಡಿಯ ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಮಹಾಸಭೆ ಮತ್ತು ನೂತನ…

2 days ago

ಇತ್ತೀಚಿಗೆ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತಿದೆ | ಮಕ್ಕಳ ತೂಕ ಮತ್ತು ಎತ್ತರವನ್ನು ಹೆಚ್ಚಿಸುವ ಆಹಾರಗಳು |

ಹೆಚ್ಚಿನ ಪಾಲಕರು(Parents) ಮಕ್ಕಳನ್ನು(Children) ಹೆತ್ತ ನಂತರ ಅವರನ್ನು ಶಿಕ್ಷಣದ ವ್ಯವಸ್ಥೆ(Education system) ಮಾಡುವುದು…

2 days ago