ಹಿಂಗಾರು ಮಳೆ ಆರಂಭ ಇಡೀ ದೇಶದಿಂದ ನೈರುತ್ಯ ಮುಂಗಾರು ಮಳೆ ಹಿಂದೆ ಸರಿದಿದೆ. ರಾಜಸ್ಥಾನದ ವಾಯುವ್ಯ ಭಾಗದಿಂದ ಹಿಂದೆ ಸರಿಯುವಿಕೆ ಆರಂಭವಾದ ಕೇವಲ ಎಂಟು ದಿನಗಳಲ್ಲೇ ಅತ್ಯಂತ ವೇಗವಾಗಿ ಪೂರ್ತಿಯಾಗಿ ಹಿಂದೆ ಸರಿದಿರುವುದು ಒಂದು ಅಪರೂಪದ ವಿದ್ಯಮಾನವಾಗಿದೆ. ಇದರೊಂದಿಗೆ ಹಿಂಗಾರು ಮಳೆ ಕೂಡಾ ಪ್ರವೇಶಿಸಿದ್ದು , ನಿನ್ನೆ ದಿನ ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ, ಕೇರಳದ ಅನೇಕ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಅರಬ್ಬಿ ಸಮುದ್ರದಲ್ಲಿ ವಾಯುಭಾರ ನಿಮ್ನತೆಯೂ ಕಾಣಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಮಳೆ ಹೀಗೇ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯ ವರದಿ ತಿಳಿಸಿದೆ.
ಮಳೆಯ ಬಗ್ಗೆ ಪಿ ಜಿ ಎಸ್ ಎನ್ ಪ್ರಸಾದ್ ಅವರ ಮಾತುಕತೆ ಹೀಗಿದೆ…
ನಿನ್ನೆಯಿಂದ ಹಿಂಗಾರು ಮಳೆ ಆರಂಭವಾಗಿದೆ.
ಈ ಬಾರಿಯ ನೈರುತ್ಯ ಮುಂಗಾರು 120 ದಿನಗಳ ( ಜೂನ್ 19 – ಅ.15 ) ಅತ್ಯಂತ ಸುದೀರ್ಘ ಅವಧಿಯದ್ದಾಗಿ ಇತಿಹಾಸದ ಪುಟ ಸೇರಿತು.
ಈ ಅವಧಿಯಲ್ಲಿ ಸುರಿದ ಮಳೆ = 3913 ಮಿ.ಮೀ.( ಕಳೆದ ವರ್ಷ 4053 ಮಿ.ಮೀ.)
ಸರಾಸರಿ (ಮಿ.ಮೀ.ಗಳಲ್ಲಿ)
1976 – 2000 = 3390
2001 – 2019 = 3288
1976 – 2019 = 3346
> ಗರಿಷ್ಟ 1980 ರಲ್ಲಿ 4796
> ಕನಿಷ್ಟ 1987 ರಲ್ಲಿ 1741
> ಹಿಂಗಾರು ಮಳೆಯ ಸರಾಸರಿ 784 ಮಿ. ಮೀ ( 1976 -2018 )
> ಗರಿಷ್ಟ 1976 ರಲ್ಲಿ ದಾಖಲಾದ 1475 ಮಿ.ಮೀ.
ಕನಿಷ್ಟ 2017 ರಲ್ಲಿ 166 ಮಿ.ಮೀ.
> ಹೆಚ್ಚು ಕಡಿಮೆ ಈ ವರ್ಷದಷ್ಟೇ ಮುಂಗಾರು ಮಳೆ ಸುರಿದ 1990ರಲ್ಲಿ (3921 ಮಿ.ಮೀ.) ಮುಂಗಾರುಪೂರ್ವ 213 ಮಿ.ಮೀ
ಹಿಂಗಾರು 773 ಮಿ.ಮೀ ನೊಂದಿಗೆ 4907 ಮಿ.ಮಿ.ದಾಖಲಾಗಿತ್ತು.Advertisement
> ಇನ್ನೊಂದು ಸಂದರ್ಭ 2013
ಮುಂಗಾರು ಪೂರ್ವ 395 ಮಿ.ಮೀ.
ಮುಂಗಾರು 3818 ಮಿ.ಮೀ
ಹಿಂಗಾರು 662 ಮಿ.ಮೀ
ಒಟ್ಟು 4875 ಮಿ ಮೀ.
> ಹಾಗಾದರೆ ಈ ವರ್ಷದ ಹಿಂಗಾರು ಮಳೆ… ಕಾದು ನೋಡೋಣ
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…