ಸುಳ್ಯ :ಹಿರಿಯ ಧಾರ್ಮಿಕ ವಿದ್ವಾಂಸ ಸಮಸ್ತ ನೇತಾರ ಡಾ।ಕೆ.ಎಮ್ ಶಾಹ್ ಮುಸ್ಲಿಯಾರ್( 87 )ಮೇ 29 ರಂದು ಬೆಳಗ್ಗೆ ಆತೂರಿನ ಸ್ವಗೃಹದಲ್ಲಿ ನಿಧನ ಹೊಂದಿದರು.
ಅತೂರು ಬದ್ರಿಯಾ ಜುಮ್ಮಾಮಸೀದಿಯಲ್ಲಿ ಕೆಲ ವರ್ಷಗಳ ಕಾಲ ಮತ್ತು ಸುಮಾರು 35 ವರ್ಷಗಳ ಕಾಲ ಸುಳ್ಯ ಅರಂತೋಡು ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಮುದರ್ರಿಸ್ ಆಗಿ ಸೇವೆ ಸಲ್ಲಿಸಿದರು. ಅರಂತೋಡು ಮಸೀದಿಯಲ್ಲಿ ಸೇವೆಗೈಯುವ ಸಂದರ್ಭದಲ್ಲಿ ಸರಳಪಥ ಮತ್ತು ಆಲಮುಲ್ ಹುದಾ ಮಾಸಿಕ ಪತ್ರಿಕೆಯನ್ನು ನಡೆಸುತ್ತಿದ್ದರು. ಸಹಕಾರಿ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಇವರು 1966ರಲ್ಲಿ ಕೈೂಲ ಸಹಕಾರಿ ಸಂಘದ ಅಧ್ಯಕ್ಷ ರಾಗಿಯೂ ಸೇವೆ ಸಲ್ಲಿಸಿದರು . ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಹೊರ ತರುವ ಆಲ್ ಹಸನಾತ್ ಶೀರ್ಷಿಕೆ ಯ ಪ್ರಧಾನ ಸಂಪಾದಕರಾಗಿ ದುಡಿಯುತ್ತಿದ್ದರು. ಆತೂರಿನ ಸುತ್ತಮುತ್ತಲಿನ ಮಸೀದಿ ಮದ್ರಸಗಳ ಗೌರವಾಧ್ಯಕ್ಷರಾಗಿ, ಅಧ್ಯಕ್ಷ ರಾಗಿ ಹಾಗೂ ಅರಂತೋಡು ಸ್ವಲಾತ್ ಸಮಿತಿಯ ಗೌರವಧ್ಯಕ್ಷರಾಗಿ ಅನ್ವಾರುಲ್ ಹುದಾ ಯಂಗ್ ಮೇನ್ಸ್ ಎಸೋಸಿಯೆಶನ್ ಗೌರವ ಸಲಹೆಗಾರರಾಗಿದ್ದರು .ಅರಂತೋಡು ಮಸೀದಿಯಿಂದ ನಿವೃತ್ತಿ ಹೊಂದಿರುವ ಇವರಿಗೆ ಅರಂತೋಡು ಜಮಾ ಅತ್ ನಿಂದ ನಿವೃತ್ತಿವೇತನ ವನ್ನು ನೀಡುತ್ತಿದ್ದರು .ಇವರಿಗೆ ಅಪಾರ ಶಿಷ್ಯ ವೃಂದ ದವರನ್ನು ಹೊಂದಿದ್ದಾರೆ.
ಮೃತರು ಪುತ್ರ ರಾದ ಬಶೀರ್,ಪುತ್ರಿಯರಾದ ಸಲಾಮತ್ತ್ ಬರ್ಕತ್ ಝೀನತ್ತ್ ರಹಿಯಾನತ್ ತಾಹಿರಾ ಅವರನ್ನು ಅಗಲಿದ್ದಾರೆ.
ಶಿವಮೊಗ್ಗದ ನವಲೆ ಕೃಷಿ ವಿಜ್ಞಾನ ಕೇಂದ್ರದ ರಜತ ಮಹೋತ್ಸವದ ಅಂಗವಾಗಿ ಮೂರು ದಿನಗಳ…
ಈಗಿನಂತೆ ಎಪ್ರಿಲ್ 29 ಹಾಗೂ 30 ರಂದು ಮಳೆ ಸ್ವಲ್ಪ ಕಡಿಮೆ ಇರುವ…
ಬೆಟ್ಟಗುಡ್ಡಗಳಲ್ಲಿ ಬೆಳೆಯಲಾಗುವ ಸೇಬನ್ನು ಕರ್ನಾಟಕದಲ್ಲಿಯೂ ಬೆಳೆಯಲಾಗುತ್ತಿದೆ ಎಂದು ಮನ್ ಕಿ ಬಾತ್‌ನಲ್ಲಿ ಪ್ರಧಾನಿ…
ಅಹಿಂಸೆಯೇ ಭಾರತದ ನೈಜ ಧರ್ಮವಾಗಿದೆ. ಆದರೆ, ಹಿಂಸಾಮಾರ್ಗದಲ್ಲಿ ಸಾಗುವವರ ದಮನ ಮಾಡುವುದೂ ಸಹ…
ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಪಾಕ್ ಪ್ರೇರಿತ ಭಯೋತ್ಪಾದಕರು ದಾಳಿ ನಡೆಸಿರುವ…
ರಾಜ್ಯದ ವಿವಿಧೆಡೆ ಮುಂದಿನ ಒಂದು ವಾರ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು…