ಹ್ಯಾಪೀ ಫ್ರೆಂಡ್ ಶಿಫ್ ಡೇ……

August 4, 2019
9:00 AM

ಕಾಲೇಜು ಜೀವನದ ಆರಂಭದ ದಿನಗಳು. ಪ್ರತಿಯೊಂದು ಹೊಸತು. ಮನೆಬಿಟ್ಟು ಇರುವುದೂ ಮೊದಲ ಅನುಭವ. ಅತ್ತ ಅಲ್ಲಿಗೂ ಹೊಂದಿಕೊಳ್ಳಲಾಗದೇ ಅಪ್ಪ ಅಮ್ಮ ನ ನೆನಪುಗಳು ಒತ್ತರಿಸಿ ಬರುತ್ತಿದ್ದ ದಿನಗಳು . ಹಾಸ್ಟೆಲ್ ‌ನಲ್ಲಿ ಹೀಗಾದರೆ ತರಗತಿಯಲ್ಲಿ ಎಲ್ಲವೂ ಇಂಗ್ಲೀಷ್ ಮಯ.  ಒಟ್ಟಾರೆ ಒಂದು ರಜೆ ಸಿಕ್ಕಿದರೂ ಮನೆಗೆ ಓಡಿ ಬರುವ ತವಕ. ಹೀಗೆ ಒಂದು ಶನಿವಾರ ಮನೆಗೆ ಹೊರಡುವ ತಯಾರಿಯಲ್ಲಿ ಇದ್ದಾಗ ಈ ವಾರ ಯಾರು ಮನೆಗೆ ಹೋಗುವಂತಿಲ್ಲ ಎಂದು ಸೀನಿಯರ್ ಗಳ ಫರ್ಮಾನು ಹೊರಟಿತು. ಯಾಕೆ ಏನು ಎಂದು ಕೇಳಿದರೆ ಉತ್ತರವಿಲ್ಲ. ಇವತ್ತು ಹೋಗುವಂತಿಲ್ಲ ಎಂಬುದಷ್ಟೇ ಉತ್ತರ. ಸರಿ ಎಲ್ಲರೂ ಚಪ್ಪೆ ಮುಖ ಹಾಕಿ ಕೊಂಡು ಅವರವರ ರೂಮ್ ಸೇರಿಕೊಂಡಾಯಿತು.

Advertisement
Advertisement
Advertisement
ಎಂದಿನಂತೆ  ಮುಂಜಾನೆ ಎದ್ದಾಗ ಎಲ್ಲೆಲ್ಲೂ ಸಡಗರದ ವಾತಾವರಣ. ಊಟದ ಕೋಣೆಗೆ ಬಂದಾಗ ಹಿರಿಯ ವಿದ್ಯಾರ್ಥಿಗಳು ಎಲ್ಲರನ್ನೂ ಆತ್ಮೀಯ ವಾಗಿ ಸ್ವಾಗತಿಸಿದರು. ಎಲ್ಲರ ಕೈಗೂ ಒಂದು ಬ್ಯಾಂಡ್ ( ರಾಖಿ ಯಂತದ್ದು) ಅನ್ನು ಕಟ್ಟಿ ಪ್ರೀತಿ ಯಿಂದ “ಗೆಳೆಯರ ದಿನದ ಶುಭಾಶಯಗಳು “, .ಮುಂದಿನ ದಿನಗಳಲ್ಲಿ ನಾವೆಲ್ಲರೂ ಪ್ರೀತಿಯಿಂದ ಜೊತೆಯಲ್ಲಿ ಇರೋಣ ಎಂದು ಹಾರೈಸಿದರು. ‌
ಹೀಗೆ ಕೇಳಿಯೇ ಗೊತ್ತಿಲ್ಲದ ಆಚರಣೆಯೊಂದರ ಪರಿಚಯ ನಮಗಾಯಿತು. ಹಳ್ಳಿಗಳಲ್ಲಿ ಇಂದಿಗೂ ಈ ಆಚರಣೆಗಳೆಲ್ಲ ಇಲ್ಲ. ಆದರೆ ಇಂದು ಸಮೂಹ ಮಾಧ್ಯಮಗಳ ಪ್ರಚಾರಗಳಿಂದಾಗಿ ಯುವಜನತೆಯ ನೆಚ್ಚಿನ ದಿನವಾಗಿದೆ. ಈ ದಿನದ ನೆಪದಿಂದಾಗಿ ಹಲವರು ಗೆಳೆಯರಾಗಿದ್ದಾರೆ. ಅಗತ್ಯವಿದ್ದೊ ಇಲ್ಲದೆಯೋ ಶುಭಾಶಯಗಳ ವಿನಿಮಯದ ಅನಿವಾರ್ಯತೆ ತಲೆದೋರಿದೆ. ವಿದೇಶೀ ಕಂಪೆನಿಗಳ ಪ್ರಚಾರಗಳಿಂದ ಇಂದು ಪ್ರಪಂಚದೆಲ್ಲೆಡೆ ಗೆಳೆಯರ ದಿನವನ್ನು ಭರ್ಜರಿಯಾಗಿ ಆಚರಿಸಲಾಗುತ್ತದೆ.
1935 ರಲ್ಲಿ ಅಮೇರಿಕಾದಲ್ಲಿ ಈ ಆಚರಣೆ ಆರಂಭವಾಯಿತು. ಜುಲೈ 26 ರಂದು ಈ ಆಚರಣೆ ಆರಂಭವಾಯಿತು. ಆದರೆ ಭಾರತದಲ್ಲಿ   ಆಗಸ್ಟ್ ತಿಂಗಳ ಮೊದಲ ಆದಿತ್ಯವಾರದಂದು ಫ್ರೆಂಡ್ ಶಿಫ್ ಡೇ ಯನ್ನು ಸಂಭ್ರಮಿಸುತ್ತಾರೆ. ನಿಧಾನಕ್ಕೆ ಇದು ಪ್ರಪಂಚದೆಲ್ಲೆಡೆ  ಹಬ್ಬಿತು. ವಾಣಿಜ್ಯ ಉದ್ದೇಶದಿಂದ ಗ್ರೀಟಿಂಗ್ ಕಾರ್ಡ್ ಕಂಪೆನಿಗಳು ಜಾಸ್ತಿಯಾಗಿ ಪ್ರಚಾರ ಕೊಡಲಾರಂಭಿಸಿದರು. ಸೋಷಿಯಲ್‌ ಮೀಡಿಯಾಗಳ ಉಪಯೋಗ ಹೆಚ್ಚುತ್ತಿದ್ದಂತೆ ಗೆಳೆಯರ ದಿನ, ಅಪ್ಪಂದಿರ ದಿನ, ಅಮ್ಮಂದಿರ ದಿನ, ಅಜ್ಜಂದಿರ ದಿನ ಹೀಗೆ ಹತ್ತು ಹಲವು ದಿನಗಳ ಆಚರಣಿಗಳು ಚಾಲ್ತಿಗೆ ಬಂದವು. ಆದರೆ ಭಾರತೀಯರಾದ ನಮಗೆ ಪ್ರತಿ ದಿನವೂ ಹಬ್ಬವೇ, ಯಾವಾಗಲೂ  ಆಚರಣೆಗಳೇ. ಹಿರಿಯರನ್ನು ಗೌರವಿಸುವುದು ನಮ್ಮ ರಕ್ತ ದಲ್ಲೇ ಬಂದಿದೆ. ಅದಕ್ಕೊಂದು ದಿನ ಬೇಕಾಗಿಲ್ಲ. ಗೆಳೆತನವೆಂಬುದು ಒಂದು ಕಾರ್ಡ್,ಗಿಪ್ಟ್ ಕೊಟ್ಟು ಪಡೆಯುವಂತಹುದಲ್ಲ. ನಮ್ಮಲ್ಲಿ ಹೆಗಲಿಗೆ ಹೆಗಲು ಕೊಟ್ಟು ಕಷ್ಟಕರ ಸಂಧರ್ಭದಲ್ಲಿ ಜೊತೆಯಾಗುವ ಗೆಳೆಯರಿದ್ದಾರೆ. ಅವರ ಮಧ್ಯದಲ್ಲಿ ಕೊಟ್ಟು ತೆಗೆದುಕೊಳ್ಳುವ ವ್ಯವಹಾರಗಳಿಗೆ ಅವಕಾಶವಿಲ್ಲ. ನಂಬಿಕೆ, ಪ್ರೀತಿ, ವಿಶ್ವಾಸಗಳಿಗಷ್ಟೇ ಬೆಲೆ. ನಿಜವಾದ ಗೆಳೆತನವು ಮೌನವನ್ನು, ಮಾತನ್ನು, ಪ್ರೀತಿ ಯನ್ನು, ಜಗಳವನ್ನು ಸಮಾನವಾಗಿ ಸ್ವೀಕರಿಸುವ ಸೌಜನ್ಯ ವನ್ನು ಉಳಿಸಿಕೊಳ್ಳುತ್ತದೆ. ಎಷ್ಟೋ ವರ್ಷಗಳು ಸಂಪರ್ಕ ದಲ್ಲಿ ಇಲ್ಲದಿದ್ದರೂ  ಭೇಟಿಯಾದಾಗ  ಅದೇ ಬಾಲ್ಯ ದ ಒಡನಾಟವೇ. ಯಾವುದೇ ಹಮ್ಮುಬಿಮ್ಮುಗಳಿಗೆ ಆಸ್ಪದ ಇಲ್ಲವೇ ಇಲ್ಲ. ಅಲ್ಲಿ ಗೆಳೆತನ ದ ಮಾತುಗಳು ಮಾತ್ರ. ಗೆಳೆಯರ ದಿನದ ನೆಪದಲ್ಲಿ ಎಲ್ಲರೂ ನೆನಪಾದರು. “ಹ್ಯಾಪಿ ಪ್ರೆಂಡ್ ಶಿಪ್ ಡೇ.”

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಸ್ವಲ್ಪ ಜಾಗೃತರಾಗಿ.. | ಐಪಿಎಲ್ ಹಬ್ಬವೋ – ತಿಥಿಯೋ – ಶಾಪವೋ… | ಕ್ರಿಕೆಟ್ ಆಟ – ಬೆಟ್ಟಿಂಗ್ ದಂಧೆ – ಜೂಜಿನ ಮಜಾ ಪ್ರಾರಂಭ…..
March 26, 2024
1:12 PM
by: ವಿವೇಕಾನಂದ ಎಚ್‌ ಕೆ
ಪ್ರಜಾಪ್ರಭುತ್ವದ ದೊಡ್ಡ ಹಬ್ಬ ಚುನಾವಣೆ | ಈ ಬಾರಿಯೂ ಕೋವಿ ಠೇವಣಾತಿ ಗೊಂದಲ | ಕೃಷಿಕರಿಗೆ ತಪ್ಪದ ಬವಣೆ | ಮೂರು ವರ್ಷಗಳಿಂದಲೂ ರೈತರ ಬೇಡಿಕೆಗೆ ಸಿಗದ ಮಾನ್ಯತೆ |
March 20, 2024
10:42 PM
by: ಮಹೇಶ್ ಪುಚ್ಚಪ್ಪಾಡಿ
ಜ್ಞಾನದ ಮರುಪೂರಣ ಅಗತ್ಯ…… ಮರು ಭರ್ತಿ ಮಾಡದಿದ್ರೆ ನಮ್ಮ ವ್ಯಕ್ತಿತ್ವ ಕುಬ್ಜವಾಗುತ್ತಾ ಹೋಗುತ್ತದೆ
March 15, 2024
3:05 PM
by: ವಿವೇಕಾನಂದ ಎಚ್‌ ಕೆ
ಹಾಲು ಮಾಂಸಾಹಾರವೇ…? ಹಾಲಿಗೆ ತನ್ನದೇ ಆದ ಶ್ರೇಷ್ಠತೆ ಇದೆ..
March 15, 2024
2:06 PM
by: ಪ್ರಬಂಧ ಅಂಬುತೀರ್ಥ

You cannot copy content of this page - Copyright -The Rural Mirror