ಎಲಿಮಲೆ : 1 ಲೀಟರ್ ಶುದ್ಧ ನೀರು ಪಡೆಯಲು ಹೋದರೆ 6 ಲೀಟರ್ ನೀರು ಪೋಲಾಗುತ್ತಿದೆ. ನೋಡಿದರೆ ಇದರ ವ್ಯವಸ್ಥೆಯೇ ಹಾಗೆ. ಬೇಕೋ ಬೇಡವೋ 2 ರೂಪಾಯಿಗೆ 6 ನೀರು ಬರುತ್ತದೆ. ಇಂತಹದ್ದೊಂದು ವ್ಯವಸ್ಥೆ ಈಗ ಚರ್ಚೆಗೆ ಕಾರಣವಾಗಿದೆ.
ಬರದಿಂದ ಕಂಗೆಟ್ಟಿರುವಾಗ ನೀರಿನ ದಾಹ ತೀರಿಸಲು ನಿರ್ಮಿಸಲಾದ ಶುದ್ದ ನೀರಿನ ಘಟಕವೊಂದು ಜೀವಜಲದ ಪೋಲಿಗೆ ಕಾರಣವಾಗುತ್ತಿದೆ. ರಾಷ್ಟ್ರೀಯ ಗ್ರಾಮೀಣ ಗುಡಿಯುವ ನೀರಿನ ಯೋಜನೆಯಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ವತಿಯಿಂದ ದೇವಚಳ್ಳ ಗ್ರಾಮ ಪಂಚಾಯತ್ ಆವರಣದಲ್ಲಿ ನಿರ್ಮಿಸಲಾದ ಶುದ್ಧ ನೀರಿನ ಘಟಕದಲ್ಲಿ 1 ಲೀಟರ್ ಶುದ್ಧ ನೀರು ಪಡೆಯಬೇಕೆಂದರೆ 6 ಲೀಟರ್ ನೀರು ಪೋಲಾಗುತ್ತಿದೆ. ದೇವಚಳ್ಳ ಪರಿಸರದಲ್ಲಿ ನೀರಿಗೆ ಹಾಹಾಕಾರ ಇರುವಾಗ ಇಂತದ್ದೊಂದು ವ್ಯವಸ್ಥೆ ಪಂಚಾಯತ್‍ಗೆ ತಲೆನೋವಾಗಿ ಪರಿಣಮಿಸಿದೆ.
ವಿವಿಧ ಕಡೆಗಳಲ್ಲಿ ಶುದ್ಧ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದ್ದು ಯಾವೊಂದು ಕಾಮಗಾರಿಗಳೂ ಪೂರ್ಣಗೊಂಡಿಲ್ಲ. ಆದರೆ ದೇವಚಳ್ಳ ಗ್ರಾ.ಪಂ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಮುತುವರ್ಜಿಯಿಂದ ನೀರಿನ ಘಟಕ 2 ರೂ.ಗೆ 20 ಲೀಟರ್ ನೀರು ಪೂರೈಸುವ ಕಾರ್ಯ ಮಾಡಿದೆ. ಆದರೆ 1 ಲೀಟರ್ ನೀರನ್ನು ಶುದ್ದೀಕರಿಸಲು 6.ಲೀ ನಷ್ಟು ನೀರನ್ನು ಘಟಕಕ್ಕೆ ಪೂರೈಸಬೇಕಾಗು ತ್ತದೆ. ತಾಂತ್ರಿಕ ದೋಷದಿಂದಾದ ಈ ಅಚಾತುರ್ಯಕ್ಕೆ ಗ್ರಾ.ಪಂ ಬೆಚ್ಚಿ ಬಿದ್ದಿದೆ. ಅಷ್ಟಕ್ಕಷ್ಟೇ ಇರುವ ನೀರು ಈ ರೀತಿ ಪೋಲಾದರೆ ಘಟಕಕ್ಕೆ ನೀರು ಪೂರೈಸುವುದು ಹೇಗೆ? ಎಂಬ ಪ್ರಶ್ನೆ ಸಿಬ್ಬಂದಿಯವರದ್ದು.
ಅದೂ ಅಲ್ಲದೆ 2 ರೂಪಾಯಿ ಹಾಕಿ 1 ಲೀಟರ್ ಬೇಕು ಎಂದರೂ 6 ಲೀಟರ್ ನೀರು ಪೋಲಾಗುತ್ತಿದೆ. ಹೀಗಾಗಿ ಸಮಸ್ಯೆಯಾಗಿದೆ. ಈ ಬಗ್ಗೆ ಸಂಬಂಧಿತರು ಗಮನಹರಿಸಬೇಕಿದೆ.
ಪೋಲಾಗಲು ಕಾರಣವೇನು?:
ನೀರು ಶುದ್ಧೀಕರಣ ಘಟಕಕ್ಕೆ ಪೂರೈಸಲಾಗುವ ನೀರಿನಲ್ಲಿ ಹೆಚ್ಚು ಉಪ್ಪು ನೀರು ಕರಗಿದ್ದಾಗ ಪೋಲಾಗು ವ ನೀರಿನ ಪ್ರಮಾಣ ಹೆಚ್ಚಾಗಿರುತ್ತದೆ. ಸಮುದ್ರ ತೀರ ಪ್ರದೇಶಗಳಲ್ಲಿ ಶುದ್ಧ ನೀರನ್ನು ಪಡೆಯುವಾಗ ಈ ರೀತಿ ನೀರು ಪೋಲಾಗುವ ಸಾಧ್ಯತೆಗಳಿದೆ. ಆದರೆ ಸುಳ್ಯ ತಾಲೂಕಿನಲ್ಲಿ ಲಭ್ಯವಿರುವ ನೀರಿನಲ್ಲಿ ಉಪ್ಪಿನಾಂಶ ಹೆಚ್ಚಾಗಿರುವ ಸಾಧ್ಯತೆ ಕಡಿಮೆ ಇದ್ದು ನೀರು ಪೋಲಾಗಲು ಅಪೂರ್ಣ ತಾಂತ್ರಿಕ ರಚನೆಯೇ ಕಾರಣವಾಗಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಹೇಳುತ್ತಾರೆ.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…