Advertisement
MIRROR FOCUS

ಭಾರತದಲ್ಲಿ ನಿರುದ್ಯೋಗಿಗಳ ಕೈ ಹಿಡಿದ ಸ್ಟಾರ್ಟ್‌ ಅಪ್‌ ಕಂಪನಿಗಳು | 1.14 ಲಕ್ಷ ಸ್ಟಾರ್ಟ್​​ ಅಪ್​ಗಳಿಂದ 12 ಲಕ್ಷ ಉದ್ಯೋಗ ಸೃಷ್ಟಿ – ಹಣಕಾಸು ಸಚಿವಾಲಯ

Share

ಭಾರತದ(India) ಜನಸಂಖ್ಯೆ(Population) ಏರುತ್ತಿದ್ದಂತೆ ನಿರುದ್ಯೋಗ(Unemployment) ಸಮಸ್ಯೆ ಹೆಚ್ಚುತ್ತಲೇ ಇದೆ. ಸರ್ಕಾರಗಳ(Govt) ಭರವಸೆಗಳು ಭರವಸೆಯಾಗೆ ಉಳಿಯುತ್ತಿದೆ. ಆದರೆ ಸ್ಟಾರ್ಟ್‌ ಅಪ್‌(Startups) ಕಲ್ಪನೆ ತಕ್ಕ ಮಟ್ಟಿಗೆ ಯುವಕರಿಗೆ(Youths) ಕೆಲಸ(Job) ಒದಗಿಸುವಲ್ಲಿ ಫಲ ನೀಡುತ್ತಿದೆ. ಭಾರತದಲ್ಲಿನ 1.14 ಲಕ್ಷಕ್ಕೂ ಹೆಚ್ಚಿನ ಸ್ಟಾರ್ಟ್​​ ಅಪ್​ ಕಂಪನಿಗಳು(Company) ಇಲ್ಲಿಯವರೆಗೆ 12 ಲಕ್ಷ ಉದ್ಯೋಗವನ್ನು(Employment) ಸೃಷ್ಟಿಸಿವೆ ಎಂದು ಹಣಕಾಸು ಸಚಿವಾಲಯ(Ministry Of Finance) ಭಾರತದ ಆರ್ಥಿಕತೆಯ ವಿಮರ್ಶೆ ವರದಿಯಲ್ಲಿ (Economic Affairs Report)ತಿಳಿಸಿದೆ.

‘ದಿ ಇಂಡಿಯನ್​​ ಎಕನಾಮಿ: ಎ ರಿವ್ಯೂ’ ಜನವರಿ 2024ರ ಶೀರ್ಷಿಕೆ ಅಡಿ ಆರ್ಥಿಕ ವ್ಯವಹಾರಗಳ ಇಲಾಖೆ ಬಿಡುಗಡೆ ಮಾಡಿರುವ ಸಮಗ್ರ ವಿಮರ್ಶೆ ವರದಿಯಲ್ಲಿ ಸರ್ಕಾರದಿಂದ ಸ್ಟಾರ್ಟ್​​ಅಪ್​ ಇಂಡಿಯಾ ಕ್ರಮದ ಅಡಿ ಗುರುತಿಸಲಾಗಿರುವ 1.14 ಲಕ್ಷ ಸ್ಟಾರ್ಟ್​​ ಅಪ್​​ಗಳು ಅಕ್ಟೋಬರ್​ 2023ರ ವರೆಗೆ 12ಲಕ್ಷಕ್ಕೂ ಹೆಚ್ಚು ಉದ್ಯೋಗವನ್ನು ಸೃಷ್ಟಿಸಿದೆ.

ಸರ್ಕಾರಿ ಸ್ವಾಮ್ಯದ ಇ ಕಾಮರ್ಸ್​​ ಫ್ಲಾಟ್​ಫಾರ್ಮ್​ ಓಪನ್​ ನೆಟ್​ವರ್ಕ್​​ ಫಾರ್​ ಡಿಜಿಟಲ್​ ಕಾಮರ್ಸ್​ (ಒಎನ್​ಡಿಸಿ) ನವೆಂಬರ್​​ 2023ರ ವರೆಗೆ 63 ಲಕ್ಷ ಕ್ಕೂ ಹೆಚ್ಚು ವಹಿವಾಟು ಮಾಡಿದೆ ಎಂದು ವರದಿ ತಿಳಿಸಿದೆ. 2023ರಲ್ಲಿ ಮೌಲ್ಯಮಾಪನದ ವಿಷಯ, ಕೆಲವಯ ಐಪಿಒಗಳು, ನಿಯಂತ್ರಣಗಳ ಬದಲಾವಣೆ ಮತ್ತು ಸೂಕ್ಷ್ಮಆರ್ಥಿಕತೆ ಮತ್ತು ಭೌಗೋಳಿಕ ರಾಜಕೀಯ ಟ್ರೆಂಡ್​ನಂತಹ ಜಾಗತಿಕ ಸವಾಲುಗಳ ನಡುವೆ ಭಾರತವೂ ಟೆಕ್​​ ಸ್ಟಾರ್ಟ್​​ಅಪ್​ಗಳಿಗೆ ಪೂರಕವಾದ ವ್ಯವಸ್ಥೆ ಹೊಂದಿರುವ ಮೂರನೇ ಅತಿದೊಡ್ಡ ದೇಶವಾಗಿದೆ. ಕಳೆದ ವರ್ಷ ದೇಶದಲ್ಲಿ 950 ಟೆಕ್​ ಸ್ಟಾರ್ಟ್​​ಅಪ್​ಗಳನ್ನು ಸ್ಥಾಪಿಸಲಾಗಿದೆ.

31 ಸಾವಿರ ಟೆಕ್​ಸ್ಟಾರ್ಟ್​ಅಪ್​ಗಳ ಸಂಚಿತ ನಿಧಿಯು 70 ಬಿಲಿಯನ್​ ಡಾಲರ್​ ಅನ್ನು ಮೀರಲಿದೆ ಎಂದು ಜಿನ್ನೊವ್​ ಸಹಯೋಗದ ನಸ್ಸ್ಕೊಮ್​ನ ಇತ್ತೀಚಿನ ವರದಿ ತಿಳಿಸಿದೆ. 2023ರಲ್ಲಿ ಜಾಗತಿಕ ಆರ್ಥಿಕತೆ ಮತ್ತು ನಿಯಂತ್ರಣ ಸವಾಲಿನ ನಡುವೆ ಭಾರತದ ಟೆಕ್​ ಸ್ಟಾರ್ಟ್​ಅಪ್​​ ಉದ್ಯಮಗಳು, ಮೂಲಭೂತ ವ್ಯವಸ್ಥೆ, ಅವುಗಳ ಲಾಭ ಮತ್ತು ಬೆಳವಣಿಗೆ ವೃದ್ಧಿಗೆ ಆದ್ಯತೆ ನೀಡಿವೆ ಎಂದು ನಸ್ಸ್ಕೊಮ್​​ ಅಧ್ಯಕ್ಷ ಡೆಬ್ಜನಿ ತಿಳಿಸಿದ್ದಾರೆ.

2024ರಲ್ಲಿ ಟೆಕ್​ ಸ್ಟಾರ್ಟ್​​ಅಪ್​​ಗಳ ಸಂಸ್ಥಾಪಕರು ಬಿ2ಬಿ ಟೆಕ್ ಸ್ಟಾರ್ಟ್‌ಅಪ್‌ಗಳಿಗೆ ವೆಚ್ಚವನ್ನು ಉತ್ತಮಗೊಳಿಸುವ ಮತ್ತು ಗರಿಷ್ಠ ಲಾಭವನ್ನು ಕೇಂದ್ರೀಕರಿಸುವ ಮಾಪನದ ಹಂತಗಳೊಂದಿಗೆ ಆದಾಯದ ಬೆಳವಣಿಗೆಯ ಹಾದಿಯನ್ನು ಮುಂದುವರಿಸಲು ನಿರೀಕ್ಷಿಸುತ್ತಾರೆ. 2024ರಲ್ಲಿ ಡೀಪ್​ಫೇಕ್​​ ಕೂಡ ಹೂಡಿಕೆ ಕೂಡ ಮುಂದುವರೆಯಲಿದೆ. ಜೆನರೇಟಿವ್​​ ಎಐ, ಅಕ್ಸಲರೇಷನ್​​ನಂತಹ ಶೇ 70ರಷ್ಟು ಸ್ಟಾರ್ಟ್​​ಅಪ್​ಗಳನ್ನು ಸ್ಥಾಪಿಸಲಾಗುವುದು.

ಸಾಮಾನ್ಯವಾಗಿ ಭಾರತೀಯ ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಗೆ ಹಣಕಾಸಿನ ಕೊರತೆ ನಡುವೆ ಕೃತಕ ಬುದ್ಧಿಮತ್ತೆ ಉಗಮವೂ ದೇಶದ ಉದ್ಯಮಿಗಳಿಗೆ ಹೊಸ ಅವಕಾಶ ನೀಡಿದೆ. ಈ ವಲಯಕ್ಕೆ ಕೇಂದ್ರದ ಬೆಂಬಲವು ಸಿಗುತ್ತಿದೆ.

Source : IANS

In the report titled, ‘The Indian Economy: A Review January 2024’, the Department of Economic Affairs said that the 1.14 lakh startups recognised by the government under the ‘Startup India initiative’ created more than 12 lakh jobs

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಆಮದು ಕಳಪೆ ಅಡಿಕೆ ಮಿಶ್ರಣದ ಎಚ್ಚರಿಕೆ- ಬೆಳೆಗಾರರಿಗೆ ಕ್ಯಾಂಪ್ಕೊ ಮನವಿ

ಆಮದುಗೊಂಡ ಕಳಪೆ ಅಡಿಕೆಯನ್ನು ದೇಶೀಯ ಅಡಿಕೆಯೊಂದಿಗೆ ಮಿಶ್ರಣ ಮಾಡಲಾಗುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ…

9 hours ago

ಹವಾಮಾನ ವರದಿ | 21-07-2026 | ಕರಾವಳಿ-ಮಲೆನಾಡಿನಲ್ಲಿ ಸಾಧಾರಣ ಮಳೆ ಮುಂದುವರಿಕೆ, ಭಾರೀ ಮಳೆ ಸಾಧ್ಯತೆ ಕಡಿಮೆ

ಕರಾವಳಿ ಮತ್ತು ಮಲೆನಾಡಿನಲ್ಲಿ ಮುಂದಿನ 10 ದಿನಗಳವರೆಗೆ ಬಿಟ್ಟು ಬಿಟ್ಟು ಸಾಧಾರಣ ಮಳೆ…

16 hours ago

ಅಡಿಕೆ ರೋಗ ಸಂಕಷ್ಟಕ್ಕೆ ಸಂಸತ್ತಿನಲ್ಲಿ ಧ್ವನಿ : ನಿಯಮ 377ರಡಿ ಕ್ಯಾ. ಬ್ರಿಜೇಶ್ ಚೌಟ ಒತ್ತಾಯ

ಅಡಿಕೆ ತೋಟಗಳಲ್ಲಿ ಹೆಚ್ಚುತ್ತಿರುವ ಎಲೆ ಚುಕ್ಕೆ, ಹಳದಿ ಎಲೆ ಮತ್ತು ಕೊಳೆ ರೋಗಗಳಿಗೆ…

1 day ago

ದೇಶಾದ್ಯಂತ ಮುಂಗಾರು ಅಬ್ಬರ : ಹಲವು ರಾಜ್ಯಗಳಿಗೆ ಭಾರೀ ಮಳೆ ಎಚ್ಚರಿಕೆ, ಹಿಮಾಲಯ ತಪ್ಪಲಿನಲ್ಲಿ ರೆಡ್ ಅಲರ್ಟ್

ದೇಶಾದ್ಯಂತ ಮುಂಗಾರು ಮತ್ತಷ್ಟು ತೀವ್ರಗೊಂಡಿದ್ದು, ಉತ್ತರ ಭಾರತದ ಹಲವು ಭಾಗಗಳಿಗೆ ರೆಡ್ ಅಲರ್ಟ್…

2 days ago

ರಾಜ್ಯದಲ್ಲಿ ಬರದ ಛಾಯೆ | 178 ತಾಲ್ಲೂಕುಗಳಲ್ಲಿ ತೀವ್ರ ಮಳೆ ಕೊರತೆ, ಜಲಾಶಯಗಳ ನೀರಿನ ಮಟ್ಟ ಶೇ.40ಕ್ಕೆ ಕುಸಿತ

ರಾಜ್ಯದಲ್ಲಿ ಮುಂಗಾರು ಮಳೆ 39% ಕೊರತೆಯಾಗಿದ್ದು, 26 ಜಿಲ್ಲೆಗಳ 178 ತಾಲ್ಲೂಕುಗಳಲ್ಲಿ ಬರದ…

2 days ago

ಪುತ್ತೂರಿಗೆ ಪುತ್ತಿಲ? ಪುತ್ತೂರಿನ ರಾಜಕೀಯದ ಹೊಸ ವ್ಯಾಕರಣ

ಪುತ್ತೂರಿನ ರಾಜಕೀಯದಲ್ಲಿ ವ್ಯಕ್ತಿತ್ವದ ಪ್ರಭಾವ ಹೆಚ್ಚುತ್ತಿರುವ ಕುರಿತು ಈ ವಿಶ್ಲೇಷಣೆ ಬೆಳಕು ಚೆಲ್ಲುತ್ತದೆ.…

2 days ago